Vijayapura News | ಮುಳವಾಡ ಅಕ್ರಮ ಟೋಲ್ ವಸೂಲಿಗೆ ಬ್ರೇಕ್ ಹಾಕಲು ಸೋಮನಾಥ ಕಳ್ಳಿಮನಿ ಒತ್ತಾಯ

ವಿಜಯಪುರ: ಮುಳವಾಡ ಅಕ್ರಮ ಟೋಲ್ ವಸೂಲಿ Illegal toll collection in Mulawad ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಅಹಿಂದ ಸಂಘಟನೆಗಳ ವತಿಯಿಂದ ಕಾರ್ಯನಿರ್ವಾಹಕ ಇಂಜನೀಯರ್ ರಾಷ್ಟ್ರಿಯ ಹೆದ್ದಾರಿ ವಿಭಾಗ, ವಿಜಯಪುರ ಇವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 218 , ವಿಜಯಪುರ ಬಾಗಲಕೋಟೆ ರಸ್ತೆಯಲ್ಲಿ ಬರುವ ಮುಳವಾಡ ಹತ್ತಿರ ರಸ್ತೆ ದರೋಡೆ ನಡೆಯುತ್ತಿದ್ದು ಇದನ್ನು ತಕ್ಷಣ ನಿಲ್ಲಿಸಬೇಕು. ಹೊನಗನಹಳ್ಳಿ ರೈಲ್ವೆ ಗೇಟ್ ಹತ್ತಿರ, ಮೇಲುಸೇತುವೆ ಕಾಮಗಾರಿ […]
Vijayapura News | ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜಯಪುರ ಕ್ರೀಡಾಪಟುಗಳ ಸಾಧನೆ

ವಿಜಯಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ನಡೆದ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗು ಶಾಲಾ ಶಿಕ್ಷಣ ಇಲಾಖೆ ಇವರ ವತಿಯಿಂದ ಹಮ್ಮಿಕೊಳ್ಳಲಾದ 2024-25 ನೇ ಸಾಲಿನ 14 ರ ವಯೋಮಿತಿಯ ಬಾಲಕ ಮತ್ತು ಬಾಲಕಿಯರ (SGFI) ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಮ್ಮ ವಿಜಯಪುರ ಯುಥ್ ಮಾರ್ಷಲ್ ಆಟ್ರ್ಸ್ ಕರಾಟೆ ಪಟುಗಳಾದ ಚಿರಂಜೀವಿ ಮಂಜುನಾಥ ಮಠಪತಿ, ಬಾಲಕರ -25 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಹಾಗು ಹಜರತ್ ಅಲಿ ಶೇಖ್ -45 ಕೆ.ಜಿ. ವಿಭಾಗದಲ್ಲಿ […]
Vijayapura News | ಗ್ಯಾಸ್ ಸಿಲಿಂಡರ್ ಬಳಸುವಾಗ ಅಗತ್ಯ ಸುರಕ್ಷಾ ಮುನ್ನೆಚ್ಚರಿಕಾ ಕ್ರಮವಹಿಸಿ: :ವಿನಯಕುಮಾರ ಪಾಟೀಲ

ವಿಜಯಪುರ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ತಿಳುವಳಿಕೆ ಹೊಂದಿ, ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಹೇಳಿದರು. ಭಾರತ ಸರ್ಕಾರದ ಪೆಟ್ರೋಲಿಯಂ ಮಂತ್ರಾಲಯ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಬಿಪಿಸಿಎಲ್ ಹಾಗೂ ಎಚ್ ಪಿಸಿಎಲ್ ಆಯಿಲ್ ಕಂಪನಿ ಗಳ ಸಹಯೋಗದಲ್ಲಿ ರವಿವಾರ ಹೊಟೇಲ್ ಮಧುವನ ಇಂಟರ್ ನ್ಯಾಷನಲ್‍ನಲ್ಲಿ ನಡೆದ ನಮ್ಮ ಅಡುಗೆ ನಮ್ಮ ಜವಾಬ್ದಾರಿ -2024ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. […]
Vijayapura News | ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ: ಸೇವಾ ಮನೋಭಾವನೆಗೆ ಕರೆ

ವಿಜಯಪುರ: ನಗರದ ಬಾಲಿಕೆಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. NSS (ರಾಷ್ಟ್ರೀಯ ಸೇವಾ ಯೋಜನೆ) ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಮಾರುತಿ ಮಂದಿರದ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು. ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರವಿಕುಮಾರ ಕಡೆಮನಿ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸೈನಿಕರು , ಸಮಾಜ ಸೇವಕರು ಆದ ಗುರುಲಿಂಗಪ್ಪ ನಾಟಿಕಾರ ರವರು ಮಾತನಾಡಿ “ಯುವಜನರು ಸಮಾಜದ ಸತ್ಯಶೋಧನೆ ಮತ್ತು ಸೇವಾ ಮನೋಭಾವನೆಯಲ್ಲಿ ತೊಡಗಿಸಿಕೊಳ್ಳುವುದು ರಾಷ್ಟ್ರದ […]
Vijayapura News | ಸಮಗ್ರ ವೀರಾಗ್ರಣಿ ಪ್ರಶಸ್ತಿ | ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್ ಮುಡಿಗೆ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮೂರು ದಿನಗಳ ಕಾಲ ನಡೆದ 19ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ದಲ್ಲಿ ಅತೀ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಗರಿಷ್ಠ ಅಂಕಗಳನ್ನು ಗಳಿಸಿದ ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ತಂಡವು ಸಮಗ್ರ ವೀರಾಗ್ರಣಿ ಪ್ರಶಸ್ತಿ ಯನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಎರಡನೆಯ (ರನ್ನರ್ ಅಪ್) ಸ್ಥಾನವನ್ನು ಕಲಬುರ್ಗಿಯ ಗೋದುತಾಯಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಕಾಲೇಜು ತಂಡವು ಅಲಂಕರಿಸಿದೆ. ಸಂಗೀತ, ನೃತ್ಯ, ಸಾಹಿತ್ಯ, […]
Vijayapura News | ಡಿ.22ರಂದು ನಗರದಲ್ಲಿ ವೃಕ್ಷೋತ್ಥಾನ ಪಾರಂಪರಿಕ ಓಟ | ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿ- ಯಶಸ್ವಿಗೆ ಮನವಿ

ವಿಜಯಪುರ: ಹಸರೀಕರಣ-ಅರಣ್ಯೀಕರಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿ.22ರಂದು ನಗರದಲ್ಲಿ ವೃಕ್ಷೋತ್ಥಾನ ಪಾರಂಪರಿಕ ಓಟ-2024 vrukshathon 2024 ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಂಡು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನ ವಿಜಯಪುರ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳುವ ವೃಕ್ಷೋತ್ಥಾನ ಕಾರ್ಯಕ್ರಮದ ಕುರಿತು ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಪಾರಂಪರಿಕ ಓಟದಲ್ಲಿ ಭಾಗವಹಿಸಲು ಈಗಾಗಲೇ ಹಲವರು ಆನ್‍ಲೈನ್ ಮೂಲಕ ನೊಂದಾಯಿಸಿಕೊಂಡಿದ್ದು, ನೊಂದಣಿಗೆ […]
Vijayapura News | ತೊಗರಿ ಬೆಳೆ ಹೂ-ಕಾಯಿ ಉದುರುವ ಸಮಸ್ಯೆ | ರೈತರು ಬೆಳೆ ವಿಮೆ ನೊಂದಣಿ ಮಾಡಿಸಿ.

ವಿಜಯಪುರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಲ್ಲಲ್ಲಿ ತೊಗರಿ ಬೆಳೆದ ರೈತರ ಜಮೀನುಗಳಲ್ಲಿ ಹವಾಮಾನ ವೈಪರಿತ್ಯದಿಂದ ಹೂ ಮತ್ತು ಕಾಯಿ ಉದುರುತ್ತಿರುವುದು ಕಂಡು ಬಂದಲ್ಲಿ ರೈತರು ಬೆಳೆ ವಿಮೆ ನೊಂದಣಿ Farmers’ crop insurance registration ಮಾಡಿದ ರಶೀದಿ, ಜಿಪಿಎಸ್ ಫೋಟೋದೊಂದಿಗೆ ಅರ್ಜಿಯನ್ನು ಆಯಾ ರೈತ ಸಂಪರ್ಕ ಕೇಂದ್ರ ಅಥವಾ ವಿಮಾ ಸಂಸ್ಥೆಯ ಪ್ರತಿನಿಧಿಗಳಿಗೆ ಸಂಪರ್ಕಿಸುವಂತೆ ವಿಜಯಪುರ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಇದನ್ನೂ ಓದಿ: Vijayapura News | ಕಳಪೆ ತೊಗರಿ ಬೀಜ ವಿತರಿಸಿದ ಕಂಪನಿ | […]
Vijayapura News | ಜನತಾ ಬಜಾರ, ನೆಹರು ಮಾರುಕಟ್ಟೆ ಬಳಿ ಹಾಗೂ ಎಲ್‍ಬಿಎಸ್ ಮಾರುಕಟ್ಟೆ ಹತ್ತಿರ ಅತಿಕ್ರಮಣ ತೆರವು ಕಾರ್ಯಾಚರಣೆ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ವತಿಯಿಂದ ವಾರ್ಡ ನಂ.13ರ ಜನತಾ ಬಜಾರ, ನೆಹರು ಮಾರುಕಟ್ಟೆ ಬಳಿ ಹಾಗೂ ಎಲ್‍ಬಿಎಸ್ ಮಾರುಕಟ್ಟೆ ಹತ್ತಿರ ಅತಿಕ್ರಮಣವನ್ನು Encroachment clearance ತೆರವುಗೊಳಿಸಲಾಯಿತು. ಇದನ್ನೂ ಓದಿ: Vijayapura News | ಬಾಲಮಂದಿರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ಅವರ ನೇತೃತ್ವದಲ್ಲಿ ಶುಕ್ರವಾರ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಂಡಿದ್ದು, ನಗರದ ನೆಹರು ಮಾರ್ಕೆಟ್ ಹಿಂಭಾಗ, ಎಂ.ಆರ್.ಹೋಟೆಲ್ ಹತ್ತಿರ, ಕೆಎಸ್‍ಆರ್‍ಟಿಸಿ […]
Vijayapura News | ಬಾಲಮಂದಿರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ

ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರ Childcare cleanliness ಹಾಗೂ ಸರ್ಕಾರಿ ಬಾಲಕರ ಬಾಲ ಮಂದಿರಕ್ಕೆ ಗುರುವಾರ ಸಂಜೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: Bagalkote News | ಮಕ್ಕಳಲ್ಲಿನ ಅಪೌಷ್ಠಿಕತೆ ತಡೆಗೆ ಕ್ರಮ : ಸಿಇಒ ಕುರೇರ್ ಬಾಲ ಮಂದಿರಗಳ ಮೂಲಭೂತ ಸೌಕರ್ಯ ಪರಿಶೀಲಿಸಿದ […]
Vijayapura News | ಕಳಪೆ ತೊಗರಿ ಬೀಜ ವಿತರಿಸಿದ ಕಂಪನಿ | ರೈತರಿಗೆ ಪರಿಹಾರ ನೀಡಲು ಆಗ್ರಹ

ತಾಳಿಕೋಟಿ: ತಾಲೂಕಿನ ಕಲಕೇರಿ ಸೇರಿದಂತೆ ಸುತ್ತಮುತ್ತಲಿನ ಬಹುತೇಕ ಹಳ್ಳಿಗಳಲ್ಲಿ ರೈತರು ವಾಣಿಜ್ಯ ಬೆಳೆ ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ, ಇದಿಗ ಹೂವು ಉದರಿ ಕಾಳು ಕಟ್ಟದೆ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ, ಇದಕ್ಕೆ ಕಳಪೆ ಬೀಜ ವಿತರಣೆಯೇ ಮುಖ್ಯ ಕಾರಣ ಆದ್ದರಿಂದ ನಷ್ಟಗೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಉಪ ತಹಶಿಲ್ದಾರರಾದ ಜೆ.ಐ.ತುಬಾಕೆ ಹಾಗೂ ಕೃಷಿ ಅಧಿಕಾರಿಗಳಾದ ಎಂ.ಹೆಚ್ ಬೀಳಗಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ […]