ವಿಜಯಪುರ: Power Supply Interruption ಹಿನ್ನೆಲೆ ವಿಜಯಪುರ ನಗರದ ಜಲನಗರ ಮುಖ್ಯ ರಸ್ತೆಯಲ್ಲಿ ಹೊಸ ಬೀದಿ ದೀಪಗಳ ಕಾಮಗಾರಿಗೆ ಸಂಬಂಧಿಸಿದ ಕಂಬ ಸ್ಥಳಾಂತರ ಕಾರ್ಯ ಕೈಗೊಳ್ಳಲಾಗುತ್ತಿದೆ.
ಹೆಸ್ಕಾಂ ವಿಜಯಪುರದ ಶಾಖಾ-3 ವ್ಯಾಪ್ತಿಯಲ್ಲಿ ಬರುವ ಜಲನಗರ ಮುಖ್ಯ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಬೀದಿ ದೀಪಗಳ ಕಾಮಗಾರಿಗೆ ಸಂಬಂಧಿಸಿದ ಕಂಬಗಳನ್ನು ಸ್ಥಳಾಂತರಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ Power Supply Interruption ಉಂಟಾಗಲಿದ್ದು, ಜಲನಗರ ಫೀಡರ್‌ನ ವ್ಯಾಪ್ತಿಯ ನವರಸಪುರ ಕಾಲೋನಿ, ರಾಘವೇಂದ್ರ ಕಾಲೋನಿ, ಯಾಸಿನ್ ಮಸೀದಿ ಹತ್ತಿರ, ಗಿರೀಶ ಬಡಾವಣೆ, ಜಲನಗರ, ಎಸ್.ಆರ್ ಕಾಲೋನಿ, ವಿವೇಕನಗರ, ಕೀರ್ತಿ ನಗರ ಹಾಗೂ ಬಿಡಿಎ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 31ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಗ್ರಾಹಕರು ಹೆಸ್ಕಾಂ ಇಲಾಖೆಯೊಂದಿಗೆ ಸಹಕರಿಸುವಂತೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







