ವಿಜಯಪುರ: ನಗರದ ಬಾಲಿಕೆಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. NSS (ರಾಷ್ಟ್ರೀಯ ಸೇವಾ ಯೋಜನೆ) ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಮಾರುತಿ ಮಂದಿರದ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರವಿಕುಮಾರ ಕಡೆಮನಿ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸೈನಿಕರು , ಸಮಾಜ ಸೇವಕರು ಆದ ಗುರುಲಿಂಗಪ್ಪ ನಾಟಿಕಾರ ರವರು ಮಾತನಾಡಿ “ಯುವಜನರು ಸಮಾಜದ ಸತ್ಯಶೋಧನೆ ಮತ್ತು ಸೇವಾ ಮನೋಭಾವನೆಯಲ್ಲಿ ತೊಡಗಿಸಿಕೊಳ್ಳುವುದು ರಾಷ್ಟ್ರದ ಪ್ರಗತಿಗೆ ತುಂಬಾ ಅವಶ್ಯಕ, NSS ಇಂತಹ ಶಿಬಿರಗಳು ಯುವಕ – ಯುವತಿಯರಲ್ಲಿ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುತ್ತವೆ ” ಎಂದು ಹೇಳಿದರು.
ಇದನ್ನೂ ಓದಿ: Vijayapura News | ಸಮಗ್ರ ವೀರಾಗ್ರಣಿ ಪ್ರಶಸ್ತಿ | ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್ ಮುಡಿಗೆ
ಗ್ರಾಮ ಪಂಚಾಯತಿಯ ಅಧಿಕಾರಿಗಳಾದ ಡಿ. ಎಸ್. ತಳವಾರ ರವರು ಶಿಬಿರಾರ್ಥಿಗಳನ್ನು ಉದ್ದೇಶಿ ಮಾತನಾಡುತ್ತ “ಸಮಾಜಮುಖಿ ಚಟುವಟಿಕೆಗಳಲ್ಲಿ ಯುವಜನತೆ ತೊಡಗಿಸಿಕೊಳ್ಳಲು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಿ.ಬಿ. ನಾಟಿಕಾರ ರವರು ವಹಿಸಿಕೊಂಡು ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು. ಎನ್. ಎಸ್. ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಡಾ.ಮಹಾದೇವಿ ಸುಂಗಾರೆ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಶಿಬಿರದ ಗುರಿ – ಉದ್ದೇಶಗಳನ್ನು ತಿಳಿಸಿದರು .
ಕಾರ್ಯಕ್ರಮದ ನಿರೂಪಣೆಯನ್ನು ಸಮಾಜಶಾಸ್ತ್ರದ ಉಪನ್ಯಾಸಕರಾದ ಪಿ. ಎ. ಮೇತ್ರಿ ರವರು ಮತ್ತು ವಂದನಾರ್ಪಣೆಯನ್ನು ಆಂಗ್ಲ ಭಾಷೆ ಉಪನ್ಯಾಸಕರಾದ ಆರ್.ಎಮ್.ಜೋಶಿರವರು ಮಾಡಿದರು. ಅತಿಥಿ ಉಪನ್ಯಾಸಕರಾದ ಶ್ರೀಮತಿ ರಾಧಿಕಾ ಕನ್ನೂರ , ಶ್ರೀಮತಿ ಸೀಮಾ ಹುಣಿಸ್ಯಾಳ ಮತ್ತು ಕುಮಾರಿ ಜ್ಯೋತಿ ಓಂಕಾರ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್.ಎಸ್ ಎಸ್. ಶಿಬಿರಾರ್ಥಿಗಳು ಮತ್ತು ಸ್ಥಳಿಯರು ದೊಡ್ಡ ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದರು.
ಇದನ್ನೂ ಓದಿ: ವಿಜಯಪುರ ಶಾಸಕ ಯತ್ನಾಳ ಹಿಂದೂ ಹುಲಿಯಲ್ಲ, ಹಿಂದೂ ಇಲಿ: ರೇಣುಕಾಚಾರ್ಯ ವಾಗ್ದಾಳಿ






