Caste Census Report : ಜಾರಿ ಆಗುವವರೆಗೆ ಸಿದ್ದರಾಮಯ್ಯನವರೇ CM- ಅಹಿಂದ

Caste Census Report press meet

Caste Census Report ಜಾರಿಗೆ ಬರುವವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಬಾರದು ಎಂದು ವಿಜಯಪುರ ಅಹಿಂದ ಒಕ್ಕೂಟ ಹೈಕಮಾಂಡ್‌ಗೆ ಸಂದೇಶ ರವಾನಿಸಿದೆ. Caste Census Report ಅನುಷ್ಠಾನವೇ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ದೊಡ್ಡ ಹೆಜ್ಜೆಯಾಗಲಿದೆ ಎಂದು ಮುಖಂಡರು ತಿಳಿಸಿದ್ದಾರೆ.


ಜಾತಿ ಜನಗಣತಿ ಜಾರಿಗೆ ಸಿದ್ದರಾಮಯ್ಯ ಮುಂದುವರಿಕೆಗೆ ಒತ್ತಾಯ

ವಿಜಯಪುರ : ಜಾತಿ ಜನಗಣತಿ ಸಿದ್ದರಾಮಯ್ಯ ಕನಸಿನ ಕೂಸು ಆಗಿದ್ದು, ಅದರ ಯಶಸ್ವಿ ಅನುಷ್ಠಾನವಾಗುವವರೆಗೂ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಎಂದು ವಿಜಯಪುರ ಅಹಿಂದ ಒಕ್ಕೂಟ ಆಗ್ರಹಿಸಿದೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಅಹಿಂದ ಒಕ್ಕೂಟದ ಪ್ರಮುಖರಾದ ಸೋಮನಾಥ ಕಳ್ಳಿಮನಿ, ಬೀರಪ್ಪ ಜುಮನಾಳ ಸೇರಿದಂತೆ ಅನೇಕ ಮುಖಂಡರು ಮಾತನಾಡಿ, ಜಾತಿ ಜನಗಣತಿ ವರದಿ ಕೇವಲ ಪ್ರಕಟವಾದರೆ ಸಾಲದು, ಅದು ಸಂಪೂರ್ಣ ಅನುಷ್ಠಾನಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ಸೋಮನಾಥ ಕಳ್ಳಿಮನಿ ಮಾತನಾಡಿ, “ನಾವು ಡಿ.ಕೆ. ಶಿವಕುಮಾರ ಅಥವಾ ಕಾಂಗ್ರೆಸ್ ವಿರೋಧಿಗಳಲ್ಲ. ಆದರೆ ಜಾತಿ ಜನಗಣತಿ ಅನುಷ್ಠಾನದ ಬಗ್ಗೆ ಸಂಪೂರ್ಣ ಬದ್ಧತೆ ತೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕು” ಎಂದರು. ಎಲ್.ಜಿ. ಹಾವನೂರ ವರದಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಮುನ್ನುಡಿ ಬರೆದಂತೆ, ಈಗಿನ ಜಾತಿ ಜನಗಣತಿ ವರದಿ ಹೊಸ ಸಾಮಾಜಿಕ ಕ್ರಾಂತಿಗೆ ಕಾರಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಮಾತ್ರ ಅಹಿಂದ ಸಿದ್ಧಾಂತದ ಪ್ರತಿನಿಧಿಯಾಗಿದ್ದಾರೆ. ಹೀಗಾಗಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಅಹಿಂದ ಆಶಯಕ್ಕೆ ಹಿನ್ನಡೆಯಾಗಲಿದೆ ಎಂದು ಮುಖಂಡರು ತಿಳಿಸಿದರು.

ಚುನಾವಣೆ ಹೊಸ್ತಿಲಲ್ಲಿ ಮುಖ್ಯಮಂತ್ರಿ ಬದಲಾವಣೆ ಯಾಕೆ ಎಂಬ ಪ್ರಶ್ನೆಯನ್ನು ಕೇವಲ ಅಹಿಂದ ವರ್ಗ ಮಾತ್ರವಲ್ಲ, ರಾಜ್ಯದ ಜನತೆಯೇ ಕೇಳುತ್ತಿದೆ ಎಂದು ಮುಖಂಡರು ಹೇಳಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಬೀರಪ್ಪ ಜುಮನಾಳ, ಸಂಜು ಕಂಬಾಗಿ, ಫಯಾಜ್ ಕಲಾದಗಿ, ರಜಾಕ್‌ಸಾಬ್ ಕಾಖಂಡಕಿ ಹಾಗೂ ಮಲ್ಲು ಬಿದರಿ ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು