ಬೆಳಗಾವಿ- ಕೇಂದ್ರದ ಅನುದಾನದ ಬಗ್ಗೆ ತುಟಿ ಬಿಚ್ಚದ ತ್ರಿಮೂರ್ತಿ ಸಂಸದರು !

0
101

ಬೆಳಗಾವಿ ಜಿಲ್ಲೆಯಲ್ಲಿ ಮೂವರು ಸಂಸದರು ಇದ್ದಾರೆ. ಅದರಲ್ಲಿ ಒಬ್ಬರು ಕೇಂದ್ರದ ರಾಜ್ಯ ಮಂತ್ರಿ ಕೂಡಾ ಇದ್ದಾರೆ, ಅವರು ಇದೂವರೆಗೂ ಕೊರೋಣಾ ವಿರೂದ್ದ ಹೊರಾಡಲು ಕೇಂದ್ರದಿಂದ ಬಂದ ಅನುದಾನ ಎಷ್ಟು ಎಂಬುದರ ಬಗ್ಗೆ ತುಟಿ ಬಿಚ್ಚದೇ ಕೇವಲ ಬಿಟ್ಟಿ ಪ್ರಚಾರ ಪ್ರೀಯರಾಗಿದ್ದಾರೆ.

ಸಂಸದರಲ್ಲಿ ಒಬ್ಬರು ರೈಲು ಮಂತ್ರಿ ಹಾಗೂ ಬೆಳಗಾವಿ ಸಂಸದರಾದ ಸುರೇಶ ಅಂಗಡಿ, ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಮತ್ತು ಜಿಲ್ಲೆಯ ರಾಜ್ಯ ಸಭಾ ಸದಸ್ಯ ಡಾ ಪ್ರಭಾಕರ ಕೋರೆ ಈ ರೀತಿ ಮೂರು ಜನ ಸಂಸದರಿದ್ದು ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಂತು, ಎಷ್ಟು ತಂದಿದ್ದೇವೆ ಎಂಬುದನ್ನು ಬಹಿರಂಗ ಪಡಿಸಿಲ್ಲಾ. ಕೇವಲ ಭಾರತವು ಕೊರೋಣಾದ ಜೊತೆ ಹೊರಾಟ ಮಾಡುತ್ತಿದೆ ಎಂದು ಮಾದ್ಯಮದ ಮುಂದೆ ಬಿಟ್ಟಿ ಪ್ರಚಾರ ಪಡೆಯುವಲ್ಲಿ ನಿರತರಾಗಿದ್ದಾರೆ. ಕೇವಲ ಬಾಯಿ ಮಾತಲ್ಲಿ ಕೋರೋಣಾ ವಿರೂದ್ದ ಹೋರಾಟ ಮಾಡುತ್ತಿದ್ದೇವೆ ಎಂದರೆ ನಡೆಯುತ್ತದೆಯೇ ?

ಇನ್ನೂ ಜಿಲ್ಲೆಯ ರೈಲು ಮಂತ್ರಿಗಳು ಜಿಲ್ಲೆಯಲಿ ರೈಲು ಓಡಿಸುವದನ್ನು ಬಿಟ್ರೆ ಕೇಂದ್ರದಿಂದ ಬಂದ ಹಣಕಾಸಿನ ಬಗ್ಗೆ ತುಟಿ ಬಿಚ್ಚಿದ ಉದಾಹರಣೆನೇ ಇಲ್ಲವೇ ಇಲ್ಲಾ. ಜಿಲ್ಲೆಯ ಬಗ್ಗೆ ಅತೀ ಹೆಚ್ಚು ಜವಾಬ್ದಾರಿ ಮಂತ್ರಿಗಳಾದ ಅಂಗಡಿಯವರು ಪ್ರದಾನಿಯವರ ಮುಂದೆ ತುಟಿ ಬಿಚ್ಚಿ ರಾಜ್ಯಕ್ಕೆ ಹಣ ಬಿಡುಗಡೆ ಮಾಡಿಸುತ್ತಾರೆ ಅನ್ನೋ ಮಾತು ದೂರಾನೇ ಉಳಿತು. ಒಂದು ಕಡೆ ಚಿಕ್ಕೋಡಿ ಸಂಸದರು ನಿಪ್ಪಾಣಿ ಕ್ಷೇತ್ರ ಬಿಟ್ಟು ಹೊರಗೆ ಬಂದಿಲ್ಲಾ. ಕೇವಲ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಕ್ಷೇತ್ರದ ಹಳ್ಳಿಗಳಲ್ಲಿ ತಮ್ಮ ಕೊರೋಣಾ ವಿರುದ್ದದ ಬಿಟ್ಟಿ ಕಾರ್ಯಕ್ರಮದ ದಿನಚರಿಗಳನ್ನು ಪೋಟೊ ಸಮೇತ ಹಾಕುತ್ತಿದ್ದಾರೆ. ಇನ್ನೂ ರಾಜ್ಯ ಸಭಾ ಸದಸ್ಯ ಕೊರೆಯವರು ಅಂತೂ ಹೊರಗೇ ಬಿದ್ದಿಲ್ಲಾ. ಮಂತ್ರಿಗಳು ಬಂದಾಗ ಅವರ ಮುಂದೆ ಕೂತು ಪೋಟೊ ಪೊಸು ಕೊಟ್ರೆ ಮೂಗೀತು ಮತ್ತೇ ಮುಂದಿನ ಬಾರಿ ಮಂತ್ರಗಳು ಬಂದಾಗಲೇ ಹಾಜರಿ ಕೊಡಲು ಬರೋದು ಅನ್ನೋ ತರಹವಾಗಿದೆ.

ಇನ್ನೂ ಜಿಲ್ಲೆಯಲ್ಲಿ ವಿರೋದ ಪಕ್ಷವು ಇದ್ದೂ ಇಲ್ಲದಂತಿದೆ ಕೈ ಪಡೆ ಮತ್ತು ಹೊರೆ ಪಡೆ ಪ್ರಚಾರಕ್ಕೂ ಇಲ್ಲಾ ಇತ್ತ ಸಂಪರ್ಕಕ್ಕೂ ಇಲ್ಲಾ ಅನ್ನುವಂತಾಗಿದೆ. ಅಲ್ಲೊಮ್ಮೆ ರೈತ ಪರ ಕಾಳಜಿ ಹೊಂದಿದ ರೈತ ಸಂಘಟನೆ ಮಾತ್ರ ಅನ್ನದಾತನ ನಿಲ್ಲುವ ಪ್ರಯತ್ನ ಮಾಡುತ್ತಿದೆ. ಇನ್ನಾದರೂ ದೊಡ್ಡ ಜಿಲ್ಲೆಯಲ್ಲಿ ಇರುವ ಜನಪ್ರೀಯ ಸಂಸದರು ಕೇಂದ್ರದ ಮುಂದೆ ಮಂಡಿಯೂರಿ ಕುಳಿತು ರಾಜ್ಯಕ್ಕೆ ಅಲ್ಲದಿದ್ದರೂ ಬೆಳಗಾವಿ ಜಿಲ್ಲೆಗಾದರೂ ಅನೂದಾನ ತರಲಿ ಅನ್ನೂದು ಜಿಲ್ಲೆಯ ನಾಗರೀಕರ ಅನಿಸಿಕೆಯಾಗಿದೆ.

LEAVE A REPLY

Please enter your comment!
Please enter your name here