“ಕರಿಜನ” ಕನ್ನಡ ಪಾಕ್ಷಿಕ ಪತ್ರಿಕೆಯ ಸಂಪಾದಕರಿಗೆ ಸಂದ “ಭೀಮರತ್ನ” ಗೌರವ

0
485
"ಭೀಮ ರತ್ನ" ಪ್ರಶಸ್ತಿ ಪುರಸ್ಕೃತರಾದ ಶ್ರೀ ರವೀಂದ್ರ ಎನ್,ಎಸ್

ಎಪ್ರಿಲ್‌ 14 ನಿಜಕ್ಕೂ ಒಂದು ಬಹು ದೊಡ್ಡ ದಿವಸ. ಅವತ್ತು ಮಹಾನಾಯಕ, ವಿಶ್ವರತ್ನ, ಬೋಧೀಸತ್ವ ಡಾ|| B.R ಅಂಬೇಡ್ಕರ್ ಅವರು ಹುಟ್ಟಿದ ದಿನ. ಜಗತ್ತು ಅವರ ಜನ್ಮ ದಿನವನ್ನು Symbol of Knowledge ಎಂದು ಆಚರಿಸುತ್ತಿದೆ, ನಿಜ ಅವರು ಜ್ಞಾನದ ಸಂಕೇತವೇ ಅದರಲ್ಲಿ ಎರಡು ಮಾತೇ ಇಲ್ಲ , ಶೋಷಿತರ ಪಾಲಿನ ಜ್ಞಾನ ಸೂರ್ಯ ಕೋಟ್ಯಾನು ಕೋಟಿ ಜನಗಳ ಬದುಕಲ್ಲಿ ಬೆಳಕಾಗಿದ್ದು ಈಗ ಇತಿಹಾಸ, ಈ ವರ್ಷದ ವಿಶ್ವ ಜ್ಞಾನಿಯ ಜನ್ಮ ದಿನ (ಎಪ್ರಿಲ್ 14) “ಕರಿಜನ ಕನ್ನಡ ಪಾಕ್ಷಿಕ ಪತ್ರಿಕೆ”ಗೆ ಸ್ವಲ್ಪ ಹೆಚ್ಚಿನ ಖುಷಿ ಕೊಟ್ಟಿದೆ ಏಕೆಂದರೆ ಮೊದಲನೆಯದಾಗಿ ‘ಕರಿಜನ’ ಕನ್ನಡ ಪತ್ರಿಕೆ ಹುಟ್ಟಿದ್ದೇ ಡಾ| ಬಾಬಾಸಾಹೇಬರ ಜನ್ಮ‌ದಿನವಾದ ಎಪ್ರಿಲ್‌ 14 ರಂದು. ಇವತ್ತಿಗೆ ಪತ್ರಿಕೆಗೆ ಎಂಟನೆಯ ವರ್ಷದ ಜನ್ಮ‌ ದಿನದ ಸಂತೋಷ ಒಂದು ಕಡೆಯಾದರೆ ಕರಿಜನ ಪತ್ರಿಕೆಯ ವರದಿಗಾರ, ಅಂಕಣಕಾರ, ಸಂಪಾದಕರಾದ ರವೀಂದ್ರ ಎನ್ .ಎಸ್ ಅವರಿಗೆ ಕರ್ನಾಟಕ ಬೌದ್ಧ ಸಮಾಜವು ರವಿಂದ್ರ ಎನ್ ಎಸ್ ಅವರ ಪತ್ರಿಕಾ ರಂಗದಲ್ಲಿನ ಸೇವೆಯನ್ನು ಗುರುತಿಸಿ ಈ ವರ್ಷದ “ಭೀಮ ರತ್ನ” ಪ್ರಶಸ್ತಿ ಯನ್ನು ನೀಡಿ ಗೌರವಿಸಿದೆ.ಶ್ರೀಯುತ ರವೀಂದ್ರ ರವರಿಗೆ ದೊರೆತ ಗೌರವವು ಕೇವಲ ಅವರಿಗೆ ಮಾತ್ರವಲ್ಲ ಕರಿಜನ “ಕನ್ನಡ ಪಾಕ್ಷಿಕ ಪತ್ರಿಕೆ”ಗೆ ಮತ್ತು ಓದುಗ ಬಳಗಕ್ಕೆ ಸಂದ ಗೌರವವಾಗಿದೆ.

“ಕರಿಜನ” ಪತ್ರಿಕೆಯ ಎಂಟನೆಯ ವಾರ್ಷಿಕೋತ್ಸವವನ್ನು ಪ್ರಧಾನ ಸಂಪಾದಕರಾದ ಶ್ರೀ ಎಸ್.ಪಿ.ಯಂಭತ್ನಾಳ ಹಾಗೂ ಪತ್ರಿಕಾ ತಂಡ ಸಂಭ್ರಮಿಸಿದ ಕ್ಷಣ.


LEAVE A REPLY

Please enter your comment!
Please enter your name here