ಹಿರಿಯ ಕಲಾವಿದ ಚನ್ನವೀರ ಝಳಕಿ ನೆನಪು: ವಿಜಯಪುರದ ಕಿತ್ತೂರ ಚನ್ನಮ್ಮ ರಂಗಮಂದಿರದ ಸ್ಥಳ ಸಂರಕ್ಷಣೆಗೆ ಕೂಗು

0
211

ವಿಜಯಪುರ ನ 03: ಹಲವು ಖ್ಯಾತಕಲಾವಿದರಾದವರು ಒಂದಿಲ್ಲಾ ಒಂದು ಚಟಕ್ಕೆ ಅಂಟಿಕೊಂಡು ಇನ್ನೂ ಹೆಚ್ಚು ವರ್ಷಗಳವರೆಗೆ ಬದುಕಬೇಕಿದ್ದ ಅವರ ಜೀವನ ಅದಾವದೊ ರೋಗಗಳಿಗೆ ತುತ್ತಾಗಿ ಅಂತ್ಯವಾಗಿರುವುದು ನಾವು ಕಲಾವಿದರ ಜೀವನದ ಇತಿಹಾಸದಿಂದ ತಿಳಿದು ಬರುತ್ತದೆ, ಇದರಿಂದಾಗಿ ಅದೆಷ್ಟೋ ಜನ ಕಲಾರಷಿಕರ ಮನಸ್ಸಿಗೆ ತುಂಬಲಾಗದ ನಷ್ಟವಾಗುತ್ತದೆ ಎಂದು ಇತಿಹಾಸಕಾರ ಸಂಶೋಧಕ ಡಾ ಆನಂದ ಕುಲಕರ್ಣಿ ಹೇಳಿದರು,

ಮಲ್ಲಿಕಾರ್ಜುನ ಭೃಂಗಿಮಠ ಕಾನೂನು ಕ್ರಿಯಾತ್ಮಕ ವೇದಿಕೆ ಹಾಗು ಕರ್ನಾಟಕ ಪಬ್ಲಿಕ್ ಪವರ್ ಸಂಘಟೆನೆಗಳ ಆಶ್ರಯದಲ್ಲಿ ನಡೆದ ಚನ್ನವೀರ ಝಳಕಿ ನೆನಪು-4 ಗಾಯನ ಕಾರ್ಯಕ್ರಮದ ಮುಖ್ಯಅತಿಥಿ ಸ್ಥಾನವಹಿಸಿ ಮಾತನಾಡುತ್ತಿದ್ದರು.
ಚನ್ನವೀರ ಝಳಕಿ ಅವರೊಬ್ಬ ಅದ್ಭುತ ರಂಗಭೂಮಿ ಕಲಾವಿದರಾಗಿದ್ದರು, ಅಪ್ಪಟಕನ್ನಡ ಸಂಘಟಕರಾಗಿದ್ದರು, ವಿಶೇಷವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆಗೆ ವಿಜಯಪುರ ಸಾರಿಗೆ ಎಂದು ಹೆಸರಿಡುವಲ್ಲಿ ಅವರ ಸೇವೆ ಹಿರಿದಾಗಿದೆ, ವಿಜಯಪುರ ಮರು ನಾಮಕರಣದಲ್ಲೂ ಅವರ ಸೇವೆ ಎಲೆಮರೆಯಕಾಯಂತಾಗಿದೆ, ಸದಾರಂಗಭೂಮಿಯ ವಿಚಾರದಲ್ಲೇ ಕಾಲ ಕಳೆಯುತ್ತಿದ್ದ ಝಳಕಿ ಬಡ ಮತ್ತು ನೊಂದಕಲಾವಿದರಿಗೆ ದಾರಿ ದೀಪವಾಗಿದ್ದರು ಅವರು ನಮ್ಮನ್ನು ಅಗಲಿ ನಾಲ್ಕು ವರುಷಗಳಾದರೂ ಅವರ ನೆನಪು ರಂಗ ಸೇವೆಯ ಹಚ್ಚ ಹಸಿರಾಗಿದೆ ಎಂದರು.

ಹಿರಿಯಕಲಾವಿದ ಸರಕಾರಿ ಪ್ರೌಢ ಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯ ರವಿಂದ್ರ ಮೇಡೆಗಾರ ಅವರು ಮಾತನಾಡಿ ಝಳಕಿ ಅವರೊಡನೇ ಗಂಗಾ ಹಾಗೂ ಇತರ ಧಾರವಾಹಿ, ನಾಟಕಗಳಲ್ಲಿ ಅಭಿನಯಿಸಿದ್ದನ್ನು ನೆನಪಸಿ, ಝಳಕಿ ಅವರು ಖ್ಯಾತ ಕಲಾವಿದ ಶ್ರೀನಿವಾಸ ತಾವರಗೇರೆ ಅವರ ಜೊತೆ ಕಲಾ ಕ್ಷೇತ್ರದಲ್ಲಿ ಪಳಗಿದವರಾಗಿದ್ದರು, ಅಶೋಕ ಬಾದರದಿನ್ನಿ ಮುಂತಾದ ಖ್ಯಾತ ರಂಗ ಕಲಾವಿದರ ನಿರ್ಧೇಶನದ ಅದೆಷ್ಟೋ ನಾಟಕಗಳಲ್ಲಿ ನಟಿಸಿ ರಂಗ ಭೂಮಿಗೆ ಜೀವ ತುಂಬಿದ್ದರು, ಬಹಳಷ್ಟು ನಾಟಕಗಳನ್ನು ನಿರ್ದೇಶಿಸಿದ್ದರು ಎಂದು ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ, ಚನ್ನವೀರ ಝಳಕಿ ಅವರು ವಿಜಯಪುರದಲ್ಲಿ ಕನ್ನಡ ಕ್ರಿಯಾ ಸಮಿತಿಯನ್ನು 25ಕ್ಕೂ ಹೆಚ್ಚು ವರ್ಷಗಳಿಂದ ಉಳಿಸಿ ಬೆಳಸಿಕೊಂಡು ಬಂದ ಕನ್ನಡ ಸೇವಕರಾಗಿದ್ದರು, ಕನ್ನಡ ರಾಜ್ಯೋತ್ಸವ ಸಂಧರ್ಭದಲ್ಲಿ ಸಾರಿಗೆ ಸಂಸ್ಥೆಯವರ ಪರ ಸ್ಥಬ್ದ ಚಿತ್ರ ಪ್ರದರ್ಶನ ಮಾಡಿಸಿ ಸತತ 30 ವರ್ಷ ಸಂಸ್ಥೆಗೆ ಪ್ರಥಮ ಬಹುಮಾನ ಗಿಟ್ಟಿಸಿಕೊಳ್ಳುವ ಸಾಧಕರಾಗಿದ್ದರು. ಒಬ್ಬ ಸಾಮಾನ್ಯ ಕಾರ್ಮಿಕನಾಗಿದ್ದರೂ ಅವರಲ್ಲಿ ಅಡಗಿದ್ದ ಕಲಾ ಪ್ರತಿಭೆಗೆಎಂಥವರೂ ತಲೆ ತೂಗಿಸುವಂತಿತ್ತು. ಸದಾ ಸ್ನೇಹಕ್ಕೆ ಮಾತ್ರ ಬೆಲೆ ಕೊಡುತ್ತಿದ್ದ ಝಳಕಿ ಅವರು ಎಂದೂ ಜಾತಿಗೋಜಿಗೆ ಹೋಗದವರಲ್ಲ.

79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ನುಡಿತೇರು ಸಮಿತಿಯ ಅಧ್ಯಕ್ಷರಾಗಿ ಇಡೀ ಜಿಲ್ಲೇ ತಿರುಗಿ ಕನ್ನಡ ಮನಸ್ಸುಗಳಿಗೆ ಸಮ್ಮೇಳನಕ್ಕೆ ಆಹ್ವಾನಿಸಿದ್ದ ಅವರ ನಿರಂತರ ಶ್ರಮ ಜನರಿಗೆ ಮೆಚ್ಚುಗೆ ಆಗಿತ್ತು, ನಗರದ ಬಸ್ ಸ್ಟ್ಯಾಂಡ್ ಪಕ್ಕದ ಕಿತ್ತೂರ ಚನ್ನಮ್ಮ ನಾಟಕ ಮಂದಿರ ಸಂರಕ್ಷಿಸಬೇಕೆಂದು ಪ್ರಯತ್ನ ಮಾಡತ್ತಿದ್ದ ಅವರು ಇರುವವರೆಗೆ ಅದನ್ನು ರಕ್ಷಿಸುತ್ತಾ ಬಂದರು ಆದರೆ ಈಗ ಆ ಸ್ಥಳವು ಯಾರ ಪಾಲಾಗುತ್ತಿದೆ ಗೊತ್ತಾಗುತ್ತಿಲ್ಲ, ಆದ್ದರಿಂದ ರಾಜಕಾರಣಿಗಳು ಮತ್ತು ಕಿತ್ತೂರ ಚನ್ನಮ್ಮ ಅಭಿಮಾನಿಗಳು, ಮತ್ತು ಕಲಾವಿದರು ವಿಜಯಪುರದ ಕಿತ್ತೂರ ಚನ್ನಮ್ಮರಂಗ ಮಂದಿರದ ಸ್ಥಳವನ್ನು ರಕ್ಷಿಸಲು ಹೋರಾಟ ಮಾಡಲ ಮುಂದೆ ಬರಬೇಕೆಂದು ಕರೆಕೊಟ್ಟರು. ಶ್ರಿ ತೊಂಡಿಕೊಟ್ಟ ಹಾಗೂ ಪ್ರಕಾಶ ಕುಂಬಾರ ಅವರು ಮಾತನಾಡಿ ಝಳಕಿ ಅವರೊಬ್ಬ ಸಹೋದರ ಬಾವಬಿತ್ತಿದ ಕಲಾವಿದರಾಗಿದ್ದರು ಅದೆಷ್ಟೋ ಜನ ಕಲಾವಿದರನ್ನು ಗುರುತಿಸಿ ವೇದಿಕೆ ಕಲ್ಪಿಸಿದ್ದ ಹಿರಿಯರಾಗಿದ್ದರು ಎಂದರು. ಆರ್ ಜಿ ಮೇಡೆಗಾರ ನಾಟಕ್‍ಡೈಲಾಕ್ ಹೇಳಿದರು, ವಿವಿಧ ಕಲಾವಿದರು ಕನ್ನಡ ಗೀತೆಗಳನ್ನೂ ಹಾಡಿದರು. ದಸ್ತಗೀರ ಸಾಲೋಟಗಿ ವಂದಿಸಿದರು. ಅಜೀತ ಕುಂಬಾರ ಸ್ವಾಗತಿಸಿದರು. ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ರುಕ್ಷ್ಮಿಣಿ ಚವ್ಹಾಣ, ಮುಂತಾದವರು ಉಪಸ್ಥಿತರಿದ್ದರು.


 

ambedkar image

LEAVE A REPLY

Please enter your comment!
Please enter your name here