ಐದನೇ ಹಂತದ ಲಾಕ್ ಡೌನ್ ಜಾರಿಯಾಗುತ್ತಾ ?

0
297
ಸಾಂದರ್ಭಿಕ ಚಿತ್ರ

ದೇಶದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಕ್ಕಳು, ಹಿರಿಯರು, ವಯಸ್ಕರು ಹೀಗೆ ಯಾರನ್ನೂ ಬಿಡದೆ ತನ್ನ ಸುಳಿಗೆ ಸೆಳೆಯುತ್ತಿದೆ ಕೊರೋನಾ ಎಂಬ ಮಹಾ ವೈರಸ್. ಈ ವೈರಸನ್ನು ಕಟ್ಟಿಹಾಕಲು ಇಡೀ ದೇಶವನ್ನೇ ನಾಲ್ಕು ಸಲ ಲಾಕ್ ಡೌನ್ ಮಾಡಿದರೂ ವೈರಸ್ ನಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುವಂತಾಗಿದೆ ದೇಶದ ಜನ.

ಮೇ 31 ಕ್ಕೆ ನಾಲ್ಕನೇ ಲಾಕ್ ಡೌನ್ ಅಂತ್ಯವಾಗಬೇಕಿದೆ. ಲಾಕ್ ಡೌನ್ ಸಮಯದಲ್ಲಿ ಒಂದು ಹಂತಕ್ಕೆ ಇದ್ದ ಸೋಂಕಿತರ ಸಂಖ್ಯೆ, ಲಾಕ್ ಡೌನ್ ಸ್ವಲ್ಪ ಸಡಿಲಿಕೆಯಾದ ನಂತರ ಸೋಂಕಿತರ ಸಂಖ್ಯೆ ಲಕ್ಷ ದಾಟಿದೆ. ಇದು ಭಾರತ ದೇಶಕ್ಕೆ ಬಹು ದೊಡ್ಡ ಸಮಸ್ಯೆಯಾಗಿದೆ.

ಸಧ್ಯ ದೇಶದ ಜನತೆ ಮೇ 31 ರ ನಂತರ ಲಾಕ್ ಡೌನ್ ಇರುತ್ತಾ ಅಥವಾ ಅಂತ್ಯವಾಗುತ್ತಾ ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ.  ಒಂದು ವೇಳೆ ಕೇಂದ್ರ ಸರಕಾರ ಲಾಕ್ ಡೌನ್ ವಿಸ್ತರಣೆ ಮಾಡುವ ಮುನ್ನ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮತ್ತೊಮ್ಮೆ ಸಭೆ ನಡೆಸಬಹುದು ಇಲ್ಲವೇ ನಾಲ್ಕನೇ ಹಂತದ ಲಾಕ್ ಡೌನ್ ವೇಳೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಎಂದು ರಾಜ್ಯ ಸರಕಾರಗಳಿಂದ ವರದಿಯನ್ನು ತರಿಸಿಕೊಳ್ಳಬಹುದು. ಆ ವರದಿಗಳನ್ನು ಆಧರಿಸಿ ಐದನೇ ಹಂತದ ಲಾಕ್ ಡೌನ್ ನಿಯಮಗಳನ್ನು ತಯಾರಿಸಬಹುದು.

ಸಧ್ಯ ಸೋಂಕಿರ ಸಂಖ್ಯೆ ನೋಡಿದರೆ ಭಾರತದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 1.54 ಲಕ್ಷದಾಟಿದೆ. ಸಾವಿನ ಸಂಖ್ಯೆ 4167 ಆಗಿದೆ.  ಅಮೇರಿಕಾವನ್ನು ಹಿಂದಿಕ್ಕುವ ರೀತಿಯಲ್ಲಿ ಭಾರತದ ಸೋಂಕಿತರ ಸಂಖ್ಯೆ ಹೆಚ್ಛಳವಾಗತೊಡಗಿದೆ. ವಿಶ್ವಪಟ್ಟಿಯಲ್ಲಿ ಭಾರತ ತನ್ನ ಸ್ಥಾನವನ್ನು ಮೇಲೆರಿಸುತ್ತಿದೆ. ಲಾಕ್ ಡೌನ್ ಸಡಿಲಿಕೆಯು ಕೂಡ ಇದಕ್ಕೆ ಕಾರಣವಾಗಿರಬಹುದು. ಒಂದು ವೇಳೆ ಐದನೆ ಹಂತದ ಲಾಕ್ ಡೌನ್ ಜಾರಿಯಾದರೆ ಯಾವೆಲ್ಲ ನಿಯಮಗಳು ಇರಬಹುದು, ಮತ್ತುಷ್ಟು ಕಠಿಣ ನಿಯಮಗಳು ಇರಬಹುದಾ ಅಥವಾ ಸಡಿಲಿಕೆಯಾಗಬಹುದಾ ಕಾದುನೋಡಬೇಕು.


 

LEAVE A REPLY

Please enter your comment!
Please enter your name here