Bagalkote News | ಜಿಲ್ಲಾಡಳಿತದಿಂದ ಗಾಂಧಿ ಹಾಗೂ ಶಾಸ್ತ್ರೀ ಜಯಂತಿ ಆಚರಣೆ

ಬಾಗಲಕೋಟೆ: Bagalkote News ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಆಶ್ರಯದಲ್ಲಿ ಗಾಂಧಿ ಜಯಂತಿ ಹಾಗೂ ಲಾಲಬಹದ್ದೂರ ಶಾಸ್ತ್ರೀಯವರ ಜನ್ಮ ದಿನಾಚರಣೆಯನ್ನು ಜಿಲ್ಲಾಡಳಿತದ ಮುಖ್ಯದ್ವಾರದಲ್ಲಿ ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ ಸೇರಿದಂತೆ ಇತರರು […]
Bagalkote News | ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಶ್ರಮಧಾನ

ಬಾಗಲಕೋಟೆ: ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ, ಎಂಬ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ನಿಮಿತ್ಯ ಸ್ವಚ್ಛತಾ ಅಭಿಯಾನವನ್ನು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಾಗೃತಿ ಜಾಥಾ ಮೂಲಕ ಅರಿವು ಮೂಡಿಸುವುದುರ ಜೊತೆಗೆ ಹಳೆ ಬಾಗಲಕೋಟೆ ಬಸ್ ನಿಲ್ದಾಣದಲ್ಲಿ ಶ್ರಮಧಾನ (Shramdhana) ಗೈದು ಜಾಗೃತಿ ಮೂಡಿಸಿದರು. ಬಿ.ವಿ.ವಿ.ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಭಾರತ ಸ್ಕೌಟ್ ಅಂಡ್ ಗೈಡ್ ಹಾಗೂ ಭಾರತೀಯ ನೆಹರು ಯುವ ಕೇಂದ್ರ ಮತ್ತು ಗೌರಿ ಗಣೇಶ ಸಂಸ್ಕøತಿಕ ಸಂಘ ಕೆರೂರ ಸಹಯೋಗದಲ್ಲಿ […]
Bagalkote News | ನೇಕಾರ ಸಮ್ಮಾನ್ ಯೋಜನೆಯಡಿ ಕೈಮಗ್ಗ ನೇಕಾರರಿಗೆ ವಾರ್ಷಿಕ 5 ಸಾವಿರ ರೂ.ಗಳ ಆರ್ಥಿಕ ನೆರವು

ಬಾಗಲಕೋಟೆ: ಪ್ರಸಕ್ತ ಸಾಲಿಗೆ ನೇಕಾರ ಸಮ್ಮಾನ್ ಯೋಜನೆಯಡಿ (Nekara Samman Yojana) ಕೈಮಗ್ಗ ನೇಕಾರರಿಗೆ ವಾರ್ಷಿಕ 5 ಸಾವಿರ ರೂ.ಗಳ ಆರ್ಥಿಕ ನೆರವು ನೀಡುವ ಸಲುವಾಗಿ ವೈಯಕ್ತಿಕ ನೇಕಾರರು, ಕೆ.ಎಚ್.ಡಿ.ಸಿ ನೇಕಾರರು, ಕೈಮಗ್ಗ ನೇಕಾರ ಸಹಕಾರ ಸಂಘಗಳಲ್ಲಿ ಕೈಮಗ್ಗ ನೇಕಾರಿಕೆ ವೃತ್ತಿ ಮಾಡುತ್ತಿರುವ ಅರ್ಹ ಕಾರ್ಯನಿರತ ಕೈಮಗ್ಗ ನೇಕಾರರನ್ನು ಈಗಾಗಲೇ ಕಳೆದ ಸಾಲಿನಲ್ಲಿ ಈ ಯೋಜನೆಯಡಿ ಸೇವಾ ಸಿಂಧು ಪೋರ್ಟಲ್‍ನಲ್ಲಿ ಕೈಮಗ್ಗ ನೇಕಾರರಿಂದ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: Bagalkote News | ಸುಸ್ಥಿರ ಕೃಷಿ, ತೋಟಗಾರಿಕೆಗೆ […]
Bagalkote News | ಸುಸ್ಥಿರ ಕೃಷಿ, ತೋಟಗಾರಿಕೆಗೆ ಜೀವಾಳ : ಕಲೈಸೆಲ್ವಿ

ಬಾಗಲಕೋಟೆ: ದೇಶದ ಆರ್ಥಿಕತೆಯ ತೀವ್ರ ಬೆಳವಣಿಗೆಗೆ ತೋಟಗಾರಿಕೆಯು ಸಂಭಾವ್ಯ ಕೃಷಿ ಉದ್ಯಮವಾಗಿ ಹೊರಹೊಮ್ಮಿದ್ದು, ಇದು ಬೆಳೆ ವೈವಿದ್ಯೀಕರಣಕ್ಕಾಗಿ ರೈತರಿಗೆ ವಿವಿಧ ಆಯ್ಕೆಗಳನ್ನು ಒದಗಿಸುತ್ತಿದೆ ಎಂದು ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದ ಕಾರ್ಯದರ್ಶಿ ಹಾಗೂ ವೈಜ್ಞನಿಕ ಮತ್ತು ಕೈಗಾರಿಕಾ ಅನುಸಂಧಾನ ಪರಿಷತ್‍ನ ಮಹಾ ನಿರ್ದೇಶಕಿ ಡಾ.ಎನ್.ಕಲೈಸೆಲ್ಟಿ (Kalaiselvi) ಹೇಳಿದರು. ಉದ್ಯಾನಗಿರಿಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಸೋಮವಾರ ನಡೆದ 13ನೇ ಘಟಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಪೌಷ್ಠಿಕಾಂಶದ ಸಮರ್ಪಕತೆ, ಉದ್ಯೋಗ ಅವಕಾಶ ಹೆಚ್ಚಿಸುವುದು, ಕೃಷಿ […]
Bagalkote News | ಅಮೂಲ್ಯಗೆ 16 ಚಿನ್ನದ ಪದಕ | ತೋವಿವಿಯಲ್ಲಿ 13ನೇ ಘಟಿಕೋತ್ಸವ |

ಬಾಗಲಕೋಟೆ: ತೋಟಗಾರಿಕೆ ವಿವಿಯಲ್ಲಿ ಸೋಮವಾರ ನಡೆದ 13ನೇ ಘಟಿಕೋತ್ಸವದಲ್ಲಿ ಬೀದರನ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಮಗಳಾದ ಅಮೂಲ್ಯ ಪಾಟೀಲಗೆ ಬಿ.ಎಸ್.ಸಿ ಪದವಿಯಲ್ಲಿ 16 ಚಿನ್ನದ ಪಕದ ಲಭಿಸಿದ್ದು, (16 gold medals for Amulya) ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಚಿನ್ನದ ಪದಕಗಳನ್ನು ಪ್ರಧಾನ ಮಾಡಿದರು. ಚಿನ್ನದ ಪದಕ ಪಡೆದ ಅಮೂಲ್ಯ ಅವರು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಂಗಪ್ಪ ಪಾಟೀಲ ಅವರ ಹಿರಿಯ ಮಗಳಾಗಿದ್ದು, ತಾಯಿ ಬೀದರ ಜಿಲ್ಲೆ ಮನ್ನಳ್ಳಿ ಸರ್ಕಾರಿ ಪ್ರಥಮ […]
ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ರೇಬಿಸ್ ದಿನಾಚರಣೆ

ಬಾಗಲಕೋಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಸಮೀಕ್ಷಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ನಗರದ ಕಾಲೇಜ್ ಆಫ್ ನರ್ಸಿಂಗ್‍ನ ಸಭಾಭವನದಲ್ಲಿ ವಿಶ್ವ ರೇಬಿಸ್ ದಿನಾಚರಣೆ World Rabies Day ಕಾರ್ಯಕ್ರಮ ಆಚರಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ರೇಬೀಸ್ ಮಾರಣಾಂತಿಕವಾಗಿದ್ದು ನಿರ್ಲಕ್ಷ ವಹಿಸಬಾರದು. ಮೂರು ಹೆಜ್ಜೆಗಳನ್ನು ಅನುಸರಿಸಬೇಕು. ಈ ವರ್ಷದ ಘೋಷಣೆ ರೇಬೀಸ್ ಗಡಿಗಳನ್ನು ಮೀರಿ […]
ವಿಶ್ವ ಪ್ರವಾಸೋದ್ಯಮ ದಿನಾಚರಣೆ | ನಾಡಿನ ಕಲೆ, ಸಂಸ್ಕøತಿ ಉಳಿಸಿ ಬೆಳೆಸುವ ಕೆಲಸವಾಗಲಿ : ಭಾಂಡಗೆ

ಬಾಗಲಕೋಟೆ: World Tourism Day ಪ್ರಾಚೀನ ಇತಿಹಾಸಕ್ಕೆ ಹೆಸರಾದ ನಮ್ಮ ಭಾರತ ದೇಶದಲ್ಲಿನ ಕಲೆ ಸಂಸ್ಕøತಿ ಹಾಗೂ ವಾಸ್ತುಶಿಲ್ಪಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು. ಕೂಡಲಸಂಗಮ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೇರೆ ಬೇರೆ ದೇಶದ ಸಾಕಷ್ಟು ಜನ ಅಧ್ಯಯನಕ್ಕಾಗಿ ನಮ್ಮ ಭಾರತಕ್ಕೆ ಬರುತ್ತಾರೆ. ವಿದೇಶಕ್ಕೂ ನಾನು ಸಹ ಹೋಗಿಬಂದಿದ್ದು, ಅಲ್ಲಿ […]
ಕಿವುಡರ 14ನೇ ರಾಜ್ಯಮಟ್ಟದ ಕ್ರೀಡಾಕೂಟ. : ಮೌನ ಕ್ರೀಡಾಕೂಟದ ಕಲರವ

ಬಾಗಲಕೋಟೆ: ವಿಶೇಷಚೇತನರು ಅಗಾದ ಶಕ್ತಿಯುಳ್ಳವರು, ಅವರು ಕ್ರಿಡಾಕೂಟದಲ್ಲಿ ಗೆಲ್ಲುವುದರ Deaf Sports ಜೊತೆಗೆ ಜೀವನವನ್ನು ಗೆಲ್ಲಬೇಕಾಗಿದೆ, ನಿಮ್ಮ ಜೀವನ ಪಯಣದಲ್ಲಿ ಯಶಸ್ಸು ಸಿಗಲಿ ಎಂದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು. ಅವರು ಬಿ.ವಿ.ವಿ.ಸಂಘ ಆಟದ ಮೈದಾನದಲ್ಲಿ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದ ಸಹಯೋಗದಲ್ಲಿ ಶುಕ್ರವಾರ ನಡೆದ ಕಿವುಡರ ರಾಜ್ಯಮಟ್ಟದ 14ನೇ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ದಿಷ್ಟಾವಧಿ […]
ವಿಶ್ವ ಓಝೋನ್ ದಿನಾಚರಣೆ | ಓಝೋನ ಪದರಿನ ಸಂರಕ್ಷಣೆ ಅಗತ್ಯ : ಡಾ.ರಾಮಚಂದ್ರನ್

ಬಾಗಲಕೋಟೆ: ವಿದ್ಯಾರ್ಥಿಗಳು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರ ಮೂಲಕ (ವಿಶ್ವ ಓಝೋನ್ ದಿನಾಚರಣೆ) ಒಝೋನ್ ಪದರಿನ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕೆಂದು ತೋವಿವಿಯ ಡೀನ್ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಜಂಟಿ ಕಾರ್ಯದರ್ಶಿ ಡಾ.ರಾಮಚಂದ್ರನ್ ನಾಯಕ ಕರೆ ನೀಡಿದರು. ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ ಜಿಲ್ಲಾ ಬಿಜೆಪಿಯಿಂದ ಬೃಹತ ಪ್ರತಿಭಟನೆ | ಆರ್.ಎಸ್.ಪಾಟೀಲ ಕೂಚಬಾಳ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ಹೂಲಗೇರಿ ಸರಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಓಝೋನ್ ದಿನಾಚರಣೆ […]
ಹೊರಗುತ್ತಿಗೆ ನೌಕರರ ವೇತನದಲ್ಲಿ ಲೋಪವಾದಲ್ಲಿ ಶಿಸ್ತು ಕ್ರಮ : ತಿಮ್ಮಾಪೂರ

ಬಾಗಲಕೋಟೆ: ಹೊರಗುತ್ತಿಗೆ ನೌಕರ ರಿಗೆ ಸರಿಯಾದ ವೇತನ, ವಿನಾಕಾರಣ ನೌಕರಿಯಿಂದ ತೆಗೆದು ಹಾಕುವುದಾಗಿ ಹೆದರಿಸುವುದು, ಕಿರುಕುಳ ನೀಡುವುದು ಕಂಡುಬಂದಲ್ಲಿ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸೂಚಿಸಿದರು. ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಮಂಗಳವಾರ ಸರಕಾರದ ವಿವಿಧ ಇಲಾಖೆಗಳು ಹಾಗೂ ವಿವಿಧ ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯ ಎಲ್ಲ ಹೊರಗುತ್ತಿಗೆ […]