ಬಾಗಲಕೋಟೆ: ವಿಶೇಷಚೇತನರು ಅಗಾದ ಶಕ್ತಿಯುಳ್ಳವರು, ಅವರು ಕ್ರಿಡಾಕೂಟದಲ್ಲಿ ಗೆಲ್ಲುವುದರ Deaf Sports ಜೊತೆಗೆ ಜೀವನವನ್ನು ಗೆಲ್ಲಬೇಕಾಗಿದೆ, ನಿಮ್ಮ ಜೀವನ ಪಯಣದಲ್ಲಿ ಯಶಸ್ಸು ಸಿಗಲಿ ಎಂದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಬಿ.ವಿ.ವಿ.ಸಂಘ ಆಟದ ಮೈದಾನದಲ್ಲಿ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದ ಸಹಯೋಗದಲ್ಲಿ ಶುಕ್ರವಾರ ನಡೆದ ಕಿವುಡರ ರಾಜ್ಯಮಟ್ಟದ 14ನೇ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ
Deaf Sports ವಿಶೇಷ ಚೇತನರಲ್ಲಿ ಅಗಾದವಾದ ಶಕ್ತಿ ಇದ್ದು, ಅವರಲ್ಲಿರುವ ಕ್ರೀಡಾಪ್ರತಿಭೆಗೆ ಅನಾವರಣಕ್ಕೆ ಈ ಕ್ರೀಡಾಕೂಟ ಸಹಕಾರಿಯಾಗಲಿದ್ದು, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ರಾಷ್ಟ್ರೀಯಮಟ್ಟದಲ್ಲಿಯೂ ಸಾಧನೆ ಮುಂದುವರೆಯಲಿ, ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ಬಂದ ನಂತರ ಕ್ರೀಡಾಕ್ಷೇತ್ರಕ್ಕೆ ಅಪಾರವಾದ ಯೋಜನೆಗಳ ಮೂಲಕ ಶಕ್ತಿ ತುಂಬಿದ್ದರಿಂದ, ಇಂದು ಭಾರತದ ಕ್ರೀಡಾಪಟುಗಳು ಜಗತ್ತಿನಾದ್ಯಂತ ದಾಖಲೆಯ ಸಾಧನೆ ಮಾಡುತ್ತಿದ್ದಾರೆ. ವಿಶೇಷ ಚೇತನರು ಕ್ರೀಡೆಯಲ್ಲಿ ಕ್ರೀಡಾಕೂಟದಲ್ಲಿ ಗೆಲ್ಲೂವುದರ ಮೂಲಕ ತಮ್ಮ ಬದುಕಿನ ಜೀವನವನ್ನು ಗೆಲ್ಲಲ್ಲಿ ಆ ಭಗವಂತ ಅವರಿಗೆ ಶಕ್ತಿ ತುಂಬಲಿ ಎಂದರು.
ಮುಖ್ಯ ಅತಿಥಿಳಾಗಿ ಆಗಮಿಸಿ ಕ್ರೀಡಾಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಬಾಗಲಕೋಟೆ ಇನ್ನರ ವ್ಹಿಲ್ ಕ್ಲಬ್ ನ ಅಧ್ಯಕ್ಷೆ ಶ್ರೀಲತಾ ಹೆಂಜಲ್ ಮಾತನಾಡಿ ಜ್ಞಾನ ಹಾಗೂ ಮಾನಸಿಕ ಬೆಳವಣಿಗೆ ಜೋತೆಗೆ ಶಾರಿರಿಕ ಬೇಳವಣಿಗೆ ಮುಖ್ಯವಾಗಿದೆ ಎಂದರು.
ನವದೆಹಲಿ ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟದ ಅಧ್ಯಕ್ಷರಾದ ವಿ.ಕುಮಾರ ಸನ್ನೆಮೂಲಕ ಮಾತನಾಡಿ ನವೆಂಬರ ಅಥವಾ ಡಿಸೆಂಬರ ನಲ್ಲಿ ನಡೆಯುವ ಒಲಂಪಿಕ ಕ್ರೀಡಾಕೂಟ್ ದಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸಿರಿ ಎಂದರು.
ಇದನ್ನೂ ಓದಿ: ಎಸ್.ಎಸ್.ಮಾಧ್ಯಮಿಕ ʼಬʼ ವಿದ್ಯಾರ್ಥಿನಿಯರ ಥ್ರೋಬಾಲ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಪ್ರಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ರಾಘವೇಂದ್ರ ಜಾದವ ಮಾತನಾಡಿ 14ನೇ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದರು. ವೇದಿಕೆ ಮೇಲೆ ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಿ.ಎಸ್.ಪಾಟೀಲ, ಕ್ರೀಡಾ ಇಕ್ಕೂಟದ ರಾಜ್ಯ ಕಾರ್ಯದರ್ಶಿ ಜಿ.ಎಸ್.ನವೀನಕುಮಾರ.ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಸುನೀಲ ಕಂದಕೂರ ಇದ್ದರು.
ಕಾರ್ಯಕ್ರಮಕ್ಕೂ ಮುಂಚೆ ಬೇರೆ ಬೇರೆ ರಾಜ್ಯದಿಂದ ಬಂದಂತ ಕ್ರೀಡಾಪಟುಗಳಿಂದ ಪಥಸಂಚಲನ, ಕ್ರೀಡಾಧ್ವಜಾರೋಹ, ಕ್ರೀಡಾ ಪ್ರತಜ್ಞಾವಿಧಿಗಳು ಜರುಗಿದವು. 25 ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚೂ ಕ್ರೀಡಾಪಟುಗಳು ಕ್ರೀಡಾಕುಟದಲ್ಲಿ ಭಾಗವಹಿಸಿದ್ದಾರೆ, ಇಂದು ಓಟ. ಉದ್ದುಜೀಗಿತ, ಎತ್ತರ ಜೀಗಿತ, ಚಕ್ರಎಸೆತ, ಮಹಿಳೆಯರ ಹಾಗೂ 600ಮೀ. ಹಾಗೂ 1600 ಮೀ ಓಟ, ಸೇರಿಂದತೆ ಅನೇಕ ಕ್ರೀಡೆಗಳು ಜರುಗಿದವು.
ಇದನ್ನೂ ಓದಿ:ವಿಜಯಪುರ ಜಿಲ್ಲೆಯ ನಿರುದ್ಯೋಗ ಯುವಕ/ಯುವತಿಯರಿಗೆ ಅಕ್ಟೋಬರ್ 4ರಂದು ಉದ್ಯೋಗಮೇಳ
ಗಮನಸೇಳೆದ ಸನ್ನೆ ಭಾಷೆ : ಮನದ ಮಾತು, ಸನ್ನೆ ಮಾತು,ದೃಷ್ಟಿ ಮಾತು ನೋಡುಗರನ್ನು ಮುಗ್ದರನ್ನಾಗಿಸಿದ್ದು ಸುಳ್ಳಲ್ಲ, ಕಿವುಡ ಮತ್ತು ಮೂಗ ವಿಶೇಷ ಚೇತನರು ಸಮಯಕ್ಕನುಗುಣವಾಗಿ ಕ್ರೀಡಾಕೂಟದಲ್ಲಿ ಭಾಗಿಯಾಗಿ, ಪ್ರತಿ ಕ್ರೀಡಾಪಟುಗಳಿಗೆ ಸನ್ನೆ ಭಾಷೆಯ ಮೂಲಕ ಒಬ್ಬರನ್ನೊಬ್ಬರು ಪ್ರೋತ್ಸಹಿಸುವ ಪ್ರೇರೆಪಿಸುವ ಸನ್ನಿವೇಶಗಳು ಮನ ಮುಟ್ಟಯವಂತಿದ್ದವು, ಮನದ ಮಾತುಗಳು, ಕಣ್ಣಿನ ನೋಟಗಳು, ಕೈ ಸನ್ನೆ ಬಾಯಿ ಸನ್ನೆ ಕಣ್ಣ ಸನ್ನೆ ಎಲ್ಲವೂ ಶಾಂತವಾದರೂ ಕ್ರೀಡಾಪಟುಗಳು ಆನಂದ ತುಂಬಿ ಹರಿದಿತ್ತು.






