Bagalkote News : ಕಬ್ಬು ಬೆಳೆಗಾರರು & ಮುಖಂಡರೊಂದಿಗೆ ಸಭೆ: ರೈತರ ಬಾಕಿ ಪಾವತಿಗಾಗಿ ಡಿಸಿ ಜಾನಕಿ ಗುಡುವು

ಕಬ್ಬು ಬೆಳೆಗಾರರು image

ಬಾಗಲಕೋಟೆ: ಕಬ್ಬು ಬೆಳೆಗಾರರು ಬೆಳೆದ ಕಬ್ಬಿನ ಮೊತ್ತವನ್ನು ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‍ಗೆ ಹೆಚ್ಚುವರಿಯಾಗಿ ಘೋಷಿಸಿದ ಮೊತ್ತದ ಬಾಕಿ ಹಣವನ್ನು ಅಕ್ಟೋಬರ 20 ರೊಳಗಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಗಡುವು ನೀಡಿದರು. ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಮಂಗಳವಾರ ಕಬ್ಬು ಬೆಳೆಗಾರರು ಹಾಗೂ ಮುಖಂಡರ ಜೊತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಫ್.ಆರ್.ಪಿ ಪ್ರಕಾರ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ಹಣವನ್ನು ಪಾವತಿಸಿದ್ದಾರೆ. ಆದರೆ ಹೆಚ್ಚುವರಿ ಘೋಷಿಸಿದ ಮೊತ್ತವನ್ನು ಪಾವತಿಸಲು […]

Bagalkote News | ಶ್ರದ್ದೆ ಮತ್ತು ಏಕಾಗ್ರತೆಯ ಮೂಲಕ ಯಶಸ್ಸು – ಮಾನಸಿಕ ಆರೋಗ್ಯ ದಿನಾಚರಣೆ : ನ್ಯಾ.ಚಂದ್ರಶೇಖರ ದಿಡ್ಡಿ

ಮಾನಸಿಕ ಆರೋಗ್ಯ (Mental Health) program image

ಬಾಗಲಕೋಟೆ: ಮಾನಸಿಕ ಆರೋಗ್ಯ (Mental Health) ಯಾವುದೇ ಒಂದು ಕೆಲಸ ಮಾಡಬೇಕಾದರೆ ಶ್ರದ್ದೆ ಮತ್ತು ಮನಸ್ಸು ಒಟ್ಟಿಗೆ ಕೂಡಿ ಕೆಲಸ ಮಾಡಿದರೆ ಆ ಕೆಲಸದಲ್ಲಿ ಯಶಸ್ಸು ಕಾಣಲು ಸಾದ್ಯವೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಹೇಳಿದರು. ವಿದ್ಯಾಗಿರಿಯ ಬವಿವ ಸಂಘದ ಶಾರದಾಂಭೆ ನರ್ಸಿಂಗ್ ಕಾಲೇಜನ ಸಭಾಭವನದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳ ಕಾರ್ಯಾಲಯದ […]

Bagalkote News | ಬಾಗಲಕೋಟೆಯಲ್ಲಿ ಇಂಡೋ-ಇಸ್ರೇಲ್ ಸಹಯೋಗದಲ್ಲಿ ಹನಿ ನೀರಾವರಿ ತರಬೇತಿ ಕಾರ್ಯಾಗಾರ

Indo-Israel Cooperation image

ಬಾಗಲಕೋಟೆ: Indo-Israel Cooperation ಇಂಡೋ-ಇಸ್ರೇಲ್ ಸಹಯೋಗದಲ್ಲಿ ನೀರಾವರಿ ಹಾಗೂ ರಸಾವರಿ ಕುರಿತು ನಡೆಯುತ್ತಿರುವ ಮೂರು ದಿನಗಳ ತರಬೇತಿ ಕಾರ್ಯಾಗಾರದ ಎರಡನೇ ದಿನವಾದ ಬುಧವಾರದಂದು ತಾಲೂಕಿನ ಚಿಕ್ಕಸಂಶಿ ಗ್ರಾಮದ ಜಮೀನಿನಲ್ಲಿ ಅಳವಡಿಸಲಾದ ಹನಿ ನೀರಾವರಿ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಮಹಾರಾಷ್ಟ್ರ, ಗೋವಾ, ಗುಜರಾತ, ಕೇರಳ ಹಾಗೂ ಕರ್ನಾಟಕ ರಾಜ್ಯ ಸೇರಿದಂತೆ ಒಟ್ಟು 32 ಜನ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪಡೆಯಲು ಬಂದ ತಂಡಕ್ಕೆ ಚಿಕ್ಕಸಂಶಿ ಗ್ರಾಮದ ಈರಪ್ಪ ಭೀಮಪ್ಪ ಕೋಮಾರ ಅವರ ಸರ್ವೆ ನಂ.16ರ ಜಮೀನಿಗೆ […]

Bagalkote News : ಸಿಇಓ ಕುರೇರ ಅನಿರೀಕ್ಷಿತ ಭೇಟಿ ಪರಿಶೀಲನೆ

ಬಾಗಲಕೋಟೆ: ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಂಗಳವಾರ ವಿವಿಧ ಗ್ರಾಮಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವಿವಿಧ ಕಾಮಗಾರಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: Vijayapura News | ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ದಿವ್ಯಾಂಗರಿಂದ ಪ್ರತಿಭಟನೆ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಸೂಳಿಕೇರಿ, ಕೆರಕಲಮಟ್ಟಿ, ಹೂಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂದಕೇರಿ, ಅನವಾಲ, ಕೈನಕಟ್ಟಿ, ಕುಳಗೇರಿ ಕ್ರಾಸ್ ಗ್ರಾಮಗಳಿಗೆ ಭೇಟಿ ನೀಡಿ ನರೇಗಾದಡಿ ಕೈಗೊಂಡ ಕಾಮಗಾರಿಗಳನ್ನು […]

Bagalkote News : ನೀರಾವರಿ & ರಸಾವರಿ ಕುರಿತು ತರಬೇತಿ | ವಿವಿಧ ರಾಜ್ಯದ 32 ಜನರಿಗೆ ತರಬೇತಿ | ತೋಟಗಾರಿಕೆಯಲ್ಲಿ ಸಾಕಷ್ಟು ಅವಕಾಶ : ಡಾ.ಕುಲಕರ್ಣಿ

ನೀರಾವರಿ ಮತ್ತು ರಸಾವರಿ ತರಬೇತಿ image

ಬಾಗಲಕೋಟೆ: ನೀರಾವರಿ ಮತ್ತು ರಸಾವರಿ ತರಬೇತಿ ದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಕಷ್ಟು ಅವಕಾಶವಿದ್ದು, ಮಿತವಾದ ನೀರು ಪೋಷಕಾಂಶ ಉಪಯೋಗಿಸಿ ಬೆಳೆಯುವದರಿಂದ ಹೆಚ್ಚಿನ ಆದಾಯ ಪಡೆಯಲು ಸಾದ್ಯವೆಂದು ತೋವಿವಿಯ ಡೀನ್ ಡಾ.ಬಾಲಾಜಿ ಕುಲಕರ್ಣಿ ಹೇಳಿದರು. ತೋವಿವಿಯ ಆವರಣದಲ್ಲಿರುವ ದಾಳಿಂಬೆ ಉತ್ಕøಷ್ಟ ಕೇಂದ್ರದಲ್ಲಿ ಇಂಡೋ-ಇಸ್ರೋ ಸಹಯೋಗದಲ್ಲಿ ಹಮ್ಮಿಕೊಂಡ ನೀರಾವರಿ ಹಾಗೂ ರಸಾವರಿ ಕುರಿತ ಮೂರು ದಿನದಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಣ್ಣ ದೇಶವಾದ ಇಸ್ರೇಲ್‍ನಲ್ಲಿ ನೀರಿನ ಮರು ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆಯುತ್ತಿರುವುದು ಒಂದು ಮಾದರಿ […]

Bagalkote News | ಬೆಳ್ಳಿ ಬೆಳಕು – ಅಕ್ಕಸಾಲಿಕೆ ಗ್ರಂಥ ಲೋಕಾರ್ಪಣೆ

ಬಾಗಲಕೋಟೆ: Granth Lokarpane ವಿಶ್ವಕರ್ಮ ಸಮಾಜದ ಬಗ್ಗೆ ಸಾಕಷ್ಟು ಸಾಹಿತ್ಯ ಭಂಡಾರವಿದ್ದು ಅದು ಸಮಗ್ರ ಸಾಹಿತ್ಯ ಸಂಪೂಟದ ಅವಶ್ಯಕತೆ ಇದೆ ಎಂದು ವಿದ್ಯಾಗಿರಿಯ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ವಿ.ಎನ್.ಕಮ್ಮಾರ ಹೇಳಿದರು. ಅವರು ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ, ವಿಶ್ವಕರ್ಮ ಸಮಾಜ ಸಂಘ ಬಾಗಲಕೋಟೆ ಇವರ ಸಹಯೋಗದಲ್ಲಿ ವಿಶ್ವಕರ್ಮ ಸಾಹಿತ್ಯ ಪ್ರಚಾರ ಸಮಿತಿ ಇದರ ರಜತಮಹೋತ್ಸವ ಸಂಭ್ರಾಚರಣೆಯ ಅಂಗವಾಗಿ ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಜ್ಯೋತಿ ಬೇಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. […]

Bagalkote News | ಎಚ್.ಐ.ವಿ/ಏಡ್ಸ್ ಜಾಗೃತಿಗಾಗಿ ಕಬಡ್ಡಿ ಪಂದ್ಯಾವಳಿ ಕಬಡ್ಡಿ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಜಾನಕಿ ಚಾಲನೆ

ಬಾಗಲಕೋಟೆ:Kabaddi for AIDS awareness ಎಚ್.ಐ.ವಿ/ಏಡ್ಸ್ ಜಾಗೃತಿ ಅಂಗವಾಗಿ 18 ರಿಂದ 25 ವಯಸ್ಸಿನ ಪದವಿ, ಸ್ನಾತಕೋತ್ತರ, ವೃತ್ತಿಪರ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ಕ್ರೀಡಾ ಇಲಾಖೆ, ರೆಡ್ ರಿಬ್ಬನ್ ಕ್ಲಬ್ ಹಾಗೂ ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ […]

Bagalkote News | ಕನ್ನಡ ಉಳಿಸಿ, ಬೆಳೆಸುವ ಕೆಲಸವಾಗಲಿ : ಡಿಸಿ ಜಾನಕಿ

Kannada Jyoti Rath Yatra image

ಬಾಗಲಕೋಟೆ: Kannada Jyoti Rath Yatra ಹುಟ್ಟಿನಿಂದಲೂ ನಾವು ಕನ್ನಡಿಗರಾಗಿದ್ದು, ನಮ್ಮ ಉಸಿರು ಇರುವವರೆಗೂ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲೆಗೆ ಆಗಮಿಸಿರುವ ಕನ್ನಡ ಜ್ಯೊತಿ ರಥಯಾತ್ರೆ ಸೋಮವಾರ ಜಿಲ್ಲಾಡಳಿತಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಕನ್ನಡ ಜ್ಯೋತಿಯನ್ನು ಬೆಳೆಗಿಸಿ ಮಾತನಾಡಿದ ಅವರು ಕನ್ನಡ ನಮಗೆಲ್ಲ ಕೊಟ್ಟಿದೆ. ನಾವು ಏನು ಕೊಟ್ಟಿದ್ದೇವೆ ಎಂದು ಕನ್ನಡಿಗರು ಅರ್ಥ ಮಾಡಿಕೊಂಡು ಕನ್ನಡ […]

Bagalkote News : ಹಾನಗಲ್ ಶ್ರೀ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಪ್ರಧಾನ ಸಮಾರಂಭ

Hanagal Kumareshwar College of Medicine image

ಬಾಗಲಕೋಟೆ: ಕರೋನಾ ಸಮಯದಲ್ಲಿ ಭಾರತದ ವ್ಯಾಕ್ಸೀನ್ ಜಗತ್ತಿಗೆ ಜೀವ ರಕ್ಷಕವಾಗಿದ್ದು ಭಾರತದ ಹೆಮ್ಮೆಯಾಗಿದೆ, ಔಷಧ ತಂತ್ರಜ್ಞಾನದಲ್ಲಿ ಅವಕಾಶಗಳಿದ್ದು ಸಂಶೋದನೆಗೆ ಒತ್ತು ನೀಡಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಲಹೆಗಾರರಾದ ಡಾ. ಉಮೇಶದತ್ತ ಗುಪ್ತಾ ಹೇಳಿದರು. ಅವರು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಭವನದಲ್ಲಿ ಗುರವಾರ ಆಯೋಜಿಸಿದ್ದ ಹಾನಗಲ್ ಶ್ರೀ ಕುಮಾರೇಶ್ವರ ಔಷಧ ವಿಜ್ಞಾನ Hanagal Kumareshwar College of Medicine ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪದವಿ ಪ್ರಧಾನ ಮಾಡಿ ಮಾತನಾಡಿದರು. ಔಷಧ […]

Bagalkote News | ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ: ಪ್ರಶಸ್ತಿ ಮತ್ತು ನಗದು ಬಹುಮಾನ

Gandhi's 155th anniversary image

ಬಾಗಲಕೋಟೆ: Gandhi’s 155th anniversary ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಮಹಾತ್ಮಾಗಾಂಧೀಯವರ 155ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಬುಧವಾರ ವಿತರಿಸಿದರು. ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ನಡೆದ ಗಾಂಧೀ ಹಾಗೂ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರೌಡಶಾಲಾ ವಿಭಾಗದಲ್ಲಿ ಬೋಡನಾಯಕದಿನ್ನಿ ಸರಕಾರಿ ಪ್ರೌಡಶಾಲೆಯ […]