Bagalkote News | ಬೆಳ್ಳಿ ಬೆಳಕು – ಅಕ್ಕಸಾಲಿಕೆ ಗ್ರಂಥ ಲೋಕಾರ್ಪಣೆ

ಬಾಗಲಕೋಟೆ: Granth Lokarpane ವಿಶ್ವಕರ್ಮ ಸಮಾಜದ ಬಗ್ಗೆ ಸಾಕಷ್ಟು ಸಾಹಿತ್ಯ ಭಂಡಾರವಿದ್ದು ಅದು ಸಮಗ್ರ ಸಾಹಿತ್ಯ ಸಂಪೂಟದ ಅವಶ್ಯಕತೆ ಇದೆ ಎಂದು ವಿದ್ಯಾಗಿರಿಯ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ವಿ.ಎನ್.ಕಮ್ಮಾರ ಹೇಳಿದರು.

ಅವರು ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ, ವಿಶ್ವಕರ್ಮ ಸಮಾಜ ಸಂಘ ಬಾಗಲಕೋಟೆ ಇವರ ಸಹಯೋಗದಲ್ಲಿ ವಿಶ್ವಕರ್ಮ ಸಾಹಿತ್ಯ ಪ್ರಚಾರ ಸಮಿತಿ ಇದರ ರಜತಮಹೋತ್ಸವ ಸಂಭ್ರಾಚರಣೆಯ ಅಂಗವಾಗಿ ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಜ್ಯೋತಿ ಬೇಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: Vijayapura News | ಸಚಿವ ಜಮೀರ ಅಹಮದ ಖಾನ್‍ಗೆ ಅಭಿಮಾನಿಗಳಿಂದ ಸನ್ಮಾನ

Granth Lokarpane ವಿಶ್ವಕರ್ಮ ಸಾಹಿತ್ಯ ಕುರಿತಂತೆ ಹುಬ್ಬಳ್ಳಿಯ ವಿಶ್ವಮಯ ಸಾಹಿತ್ಯ ಪ್ರಚಾರ ಸಮೀತಿ ಸಂಚಾಲಕ ಬೀಮಶೇನ್ ಬಡಿಗೇರ ಅವರ ನೇತೃತದಲ್ಲಿ ಸಮಾಜದ ಕುರಿತು, ಸಮುದಾಯದ ಸಾಧಕರ ಕುರಿತು ಮತ್ತು ಸಮಾಜದ ಸಂಸ್ಕøತಿ ಆಚಾರ ವಿಚಾರಗಳು ಕುರಿತಂತೆ ಸಾಕಷ್ಟು ಗ್ರಂಥಗಳನ್ನು ಹೊರತಂದಿರುವುದು ಶ್ಲಾಘನೀಯವಾಗಿದೆ, ಆ ನಿಟ್ಟಿನಲ್ಲಿ ಸಮುದಾಯ ನಡೆದು ಬಂದ ಪರಂಪರೆ, ಸಾಧಕರ ಜೀವನ ಗಾಥೆ, ವಿಶ್ವಕರ್ಮ ಮತ್ತು ವಿಶ್ವಕರ್ಮ ತತ್ವದ ಬಗ್ಗೆ ಸಾಕಷ್ಟು ಸಾಹಿತ್ಯ ಭಂಡಾರವಿದೆ ಇದು ಎಲ್ಲವೂ ಒಂದು ವಿಶ್ವಕರ್ಮ ಸಮಗ್ರ ಸಾಹಿತ್ಯ ಸಂಪೂಟವಾಗಿ ಹೊರ ಬರಬೇಕಾಗಿದೆ ಎಂದರು.

ಡಾ.ಶೀಲಾಕಾಂತ ಪತ್ತಾರ ರಚನೆಯಲ್ಲಿ ಮುಡಿಬಂದ ಅಕ್ಕಸಾಲಿಕೆ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಎಂ.ಅಗಳತಕಟ್ಟಿ ವಿಶ್ವಕರ್ಮ ಸಮಾಜ ಪಂಚ ವೃತಿಯ ಕರಿತು ಈ ಗ್ರಂಥ ಬೇಳಕು ಚೆಲ್ಲಲಿದೆ ಎಂದರು.

ಬೀಮಶೇನ್ ಬಡಿಗೇರ ಸಂಪಾದಕಿಯಲ್ಲಿ ಬಂದ ಬೆಳ್ಳಿ ಬೇಡಗು ಗ್ರಂಥವನ್ನು ಸಾಹಿತಿ ಆನಂದ ಮಸಳಿ ಅವರು ಬಿಡುಗಡೆ ಮಾಡಿ ಮಾತನಾಡಿ ಸಮಾಜದ ಸಾಧಕರ ಪರಿಚಯ ಮತ್ತು ಪರಂಪರೆಯನ್ನು ಕುರಿತು ಅನೇಕ ವಿಷಯಗಳ ಬಗ್ಗೆ ಜ್ಞಾನವನ್ನು ಬೀರುತ್ತದೆ ಎಂದರು.

ಇದನ್ನೂ ಓದಿ: Vijayapura News | ಎಸ್ ಎಸ್ ಕಾಲೇಜಿನ ಬಾಲಕಿಯರು ಖೋ ಖೋ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸದ ಬಾಗಲಕೋಟೆ ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಮೌನೇಶ ಪತ್ತಾರ ಕೆರೂರ ಮಾತನಾಡಿ ಸಂಸ್ಕøತಿಗಳ ಭಂಡಾರವೇ ವಿಶ್ವಕರ್ಮ ಸಮಾಜವಾಗಿದ್ದು, ಎಲ್ಲರನ್ನು ಪ್ರೀತಿಸುತ್ತಾ ಎಲ್ಲವನ್ನು ಪ್ರಿತಿಸುತ್ತಾ ನಮ್ಮ ಕಲೆ,ಸಂಸ್ಕøತಿಗಳನ್ನು ಉಳಿಸಿ ಬೆಳಿಸುವ ಕರ್ತವ್ಯ ನಮ್ಮೆಲರದಾಗಿದೆ ಎಂದರು.

ಪ್ರಸ್ತಾವಿಕವಾಗಿ ವಿಶ್ವಮಯ ಸಾಹಿತ್ಯ ಪ್ರಚಾರ ಸಮೀತಿ ಸಂಚಾಲಕ ಬೀಮಶೇನ್ ಬಡಿಗೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ವಿ.ಎಸ್. ಪತ್ತಾರ. ವಿ.ವಿ.ಪತ್ತಾರ ಐಹೊಳೆ. ನಾಗರಾಜ ಕಮ್ಮಾರ, ಎಸ್.ಎನ್.ಪತ್ತಾರ. ಎ.ಎಲ್.ಬಡಿಗೇರ. ಪ್ರಕಾಶ ಪತ್ತಾರ ಸೇರಿದಂತೆ ಅನೇಕರು ಇದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »