Bagalkote News | ಬಾಗಲಕೋಟೆಯಲ್ಲಿ ಇಂಡೋ-ಇಸ್ರೇಲ್ ಸಹಯೋಗದಲ್ಲಿ ಹನಿ ನೀರಾವರಿ ತರಬೇತಿ ಕಾರ್ಯಾಗಾರ

Indo-Israel Cooperation image
ಬಾಗಲಕೋಟೆ: Indo-Israel Cooperation ಇಂಡೋ-ಇಸ್ರೇಲ್ ಸಹಯೋಗದಲ್ಲಿ ನೀರಾವರಿ ಹಾಗೂ ರಸಾವರಿ ಕುರಿತು ನಡೆಯುತ್ತಿರುವ ಮೂರು ದಿನಗಳ ತರಬೇತಿ ಕಾರ್ಯಾಗಾರದ ಎರಡನೇ ದಿನವಾದ ಬುಧವಾರದಂದು ತಾಲೂಕಿನ ಚಿಕ್ಕಸಂಶಿ ಗ್ರಾಮದ ಜಮೀನಿನಲ್ಲಿ ಅಳವಡಿಸಲಾದ ಹನಿ ನೀರಾವರಿ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು.
ಮಹಾರಾಷ್ಟ್ರ, ಗೋವಾ, ಗುಜರಾತ, ಕೇರಳ ಹಾಗೂ ಕರ್ನಾಟಕ ರಾಜ್ಯ ಸೇರಿದಂತೆ ಒಟ್ಟು 32 ಜನ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪಡೆಯಲು ಬಂದ ತಂಡಕ್ಕೆ ಚಿಕ್ಕಸಂಶಿ ಗ್ರಾಮದ ಈರಪ್ಪ ಭೀಮಪ್ಪ ಕೋಮಾರ ಅವರ ಸರ್ವೆ ನಂ.16ರ ಜಮೀನಿಗೆ ಭೇಟಿ ನೀಡಿ ಜಮೀನಿನಲ್ಲಿ ಅಳವಡಿಸಲಾದ ಹನಿ ನೀರಾವರಿ ಕುರಿತು ನೆಟಾಪಿನ್ ಕಂಪನಿಯ ಪರಿಣಿತ ಸಂದೀಪ ಜಾವಳೇಕರ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಇದನ್ನೂ ಓದಿ: Vijanapura News : ಕನ್ನಡ ಸಾಹಿತ್ಯ ಪರಿಷತ್ತಿಗೆ ಐತಿಹಾಸಿಕ ಹಿನ್ನೆಲೆ: ಜಿಲ್ಲಾಧಿಕಾರಿ T ಭೂಬಾಲನ್
Indo-Israel Cooperation ಹನಿ ನೀರಾವರಿಯಲ್ಲಿ ಅಳವಡಿಸಲಾದ ತಾಂತ್ರಿಕತೆಯ ಪ್ರತಿಯೊಂದು ಹಂತದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿ, ಜಮೀನುಗಳಿಗೆ ನೀರು ಪೂರೈಕೆಯ ಡೆಮೋ ಕೂಡಾ ತಿಳಿಸಿಕೊಡಲಾಯಿತು. ಸೇವಂತಿ ಹೂ ಬೆಳೆದ ಜಮೀನಿನಲ್ಲಿ ಅಳವಡಿಸಲಾದ ವಾಲ್‍ಗಳ ಮೂಲಕ ಸರಬರಾಜು ಆಗುವ ನೀರಿನ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಂದು ಹಂತದಲ್ಲಿ ನೀರಿನ ಒತ್ತಡದ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಲಾಲ್‍ಬಾಗ್‍ನ ಅಪರ ನಿರ್ದೇಶಕ ಕೆ.ಬಿ.ದುಂಡಿ ಅವರು ಇಂಡೋ-ಇಸ್ರೇಲ್ ಸಹಯೋಗದಲ್ಲಿ ರಸಾವರಿ ಪದ್ದತಿಯನ್ನು ಹೇಗೆ ಅಳವಡಿಸಿಕೊಂಡಿದ್ದೇ ಆದರೆ ಹೆಚ್ಚಿನ ಇಳುವರಿ ಪಡೆಯಲು ಸಾದ್ಯತೆ ಬಗ್ಗೆ ರೈತರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಅಧಿಕಾರಿಗಳಿಗೆ ಉತ್ಕøಷ್ಟ ಕೇಂದ್ರದ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ:Bagalkote News : ಸಿಇಓ ಕುರೇರ ಅನಿರೀಕ್ಷಿತ ಭೇಟಿ ಪರಿಶೀಲನೆ
ಈಗಾಗಲೇ ರೈತರು ಅಳವಡಿಸಿಕೊಂಡು ರಸಾವರಿ ಮಾಡುತ್ತಿದ್ದಾರೆ. ಅದನ್ನು ಯಾವ ರೀತಿಯಾಗಿ ತಾಂತ್ರಿಕತೆ ಅಳವಡಿಸಿದ್ದೇ ಆದರೆ ಅದನ್ನು ಸರಿಯಾಗಿ ಉಪಯೋಗ ಹಾಗೂ ನಿರ್ವಹಣೆ ಮಾಡುವ ಬಗ್ಗೆ ರೈತರಿಗೆ ತೊಂದರೆಯಾದಾಗ ಅದನ್ನು ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ತರಬೇತಿ ಮೂಲಕ ತಿಳಿಸಿಕೊಡಲಾಗುತ್ತಿದೆ. ಇದಕ್ಕಾಗಿ  ಪರಿಣಿತರು ತರಬೇತಿ ನೀಡಲು ಬಂದಿದ್ದಾರೆ. ಪರಿಣಿತರು ಹಾಗೂ ಅಧಿಕಾರಿಗಳು ಇದ್ದಾರೆ ಅವರುಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರು ಮುಂದೆ ತಮ್ಮ ರಾಜ್ಯದ ರೈತರಿಗೆ ಮಾಹಿತಿ ನೀಡಲಿದ್ದಾರೆಂದು ತಿಳಿಸಿದರು.
ಪ್ರಾಯೋಗಿಕ ತರಬೇತಿ ಸಂದರ್ಭದಲ್ಲಿ ಇಂಡೋ-ಇಸ್ರೇಲ್ ಯೋಜನೆಯ ಯೋಜನಾಧಿಕಾರಿ ಬ್ರಹ್ಮದೇವ, ನೆಟಾಪಿನ್ ಕಂಪನಿಯ ಪರಿಣಿತ ಪ್ರಶಾಂತ ಮಂಚೋಳಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟೆ ಸೇರಿದಂತೆ ತೋಟಗಾರಿಕೆ ಇಲಾಖೆಯ ಇತರೆ ಅಧಿಕಾರಿಗಳು ಇದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »