ಸಾಂಸ್ಕೃತಿಕ ನೆಲಗಟ್ಟಿನ ಬೆಸುಗೆ ಬೆಸೆಯುವ ಅತ್ಯಮೂಲ್ಯವಾದ ಕಲೆಗಳನ್ನು ಪ್ರೋತ್ಸಾಹಿಸಬೇಕು:ಸಿ.ಬಿ.ನಾಟೀಕಾರ

ಸಾಂಸ್ಕೃತಿಕ ನೆಲಗಟ್ಟಿನ ಬೆಸುಗೆ ಬೆಸೆಯುವ ಅತ್ಯಮೂಲ್ಯವಾದ ಕಲೆಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಉಳಿಸಿಕೊಳ್ಳಬೇಕು ನಶಿಸಿ ಹೋಗುತ್ತಿರುವ ಕಲೆಗಳನ್ನು ಮುಂದಿನ ಯುವ ಪೀಳಿಗೆಗೆ ಕೊಂಡೊಯ್ಯಬೇಕು ಯುವ ಜನತೆಯಲ್ಲಿನ ಸೃಜನಾತ್ಮಕ ಕಲೆಗಳ ಪ್ರಸ್ತುತಪಡಿಸಲು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಇಂತಹ ವೇದಿಕೆ ಕಲ್ಪಿಸಿಕೊಡಬೇಕು ಎಂದು ಅವರು ಹೇಳಿದರು.

0
70
ಯುವ ಸೌರಭ ಚಿತ್ರ

ವಿಜಯಪುರ ನ.28: ನಮ್ಮ ದೇಶವು ಭವ್ಯ ಪರಂಪರೆ ಇತಿಹಾಸ ಹೊಂದಿದ ದೇಶವಾಗಿದೆ. ಜಗತ್ಪ್ರಸಿದ್ಧಿಯಾದ ನಮ್ಮ ಸಂಸ್ಕೃತಿ, ಕಲೆ, ಸಾಹಿತ್ಯ, ಜಾನಪದ ಕಲೆಗಳನ್ನು ಪ್ರೋತ್ಸಾಹಿಸಬೇಕು ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಸಿ.ಬಿ ನಾಟೀಕಾರ ಹೇಳಿದರು.

ಇಂದು ನಗರದ ಬಾಲಕೀಯರ ಸರ್ಕಾರಿ ಪದವ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಸಂಭ್ರಮ-50 ಅಂಗವಾಗಿ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಜನಪದರು ತಮ್ಮ ದೈನಂದಿನ ಬದುಕಿನಲ್ಲಿ ಜಾನಪದ ಸೊಗಡನ್ನು ಮೈಗೂಡಿಸಿಕೊಂಡಿದ್ದು, ಅವುಗಳಲ್ಲಿ ಪ್ರಮುಖವಾಗಿ ಲಾವಣಿ, ಹಂತಿ ಪದ, ಸಂಪ್ರದಾಯ ಪದ ಸೇರಿದಂತೆ ಅನೇಕ ಜಾನಪದ ಕಲೆಗಳೊಂದಿಗೆ ಸ್ವಚ್ಛಂದದ ಬದುಕನ್ನು ರೂಪಿಸಿಕೊಂಡಿದ್ದಾರೆ. ನಮ್ಮ ಜನಪದರ ಇಂತಹ ಗ್ರಾಮೀಣ ಸೊಗಡಿನ ಜಾನಪದ ಕಲೆಗಳನ್ನು ಇಂದಿನ ಯುವ ಜನತೆ ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಗುರುತರ ಹಿರಿಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಮಾನವನ ಆರೋಗ್ಯದ ಮೇಲೆ ಮೊಬೈಲ್ ತರಂಗಗಳ ಪ್ರಭಾವ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಾಟಕಕಾರರಾದ ಡಿ.ಎಚ್ ಕೊಲ್ಹಾರ ಮಾತನಾಡಿ, ಇಂದಿನ ಯುವಕರು ತಾಂತ್ರಿಕತೆಯೊಂದಿಗೆ ಯುವಕರು ನಮ್ಮ ಕಲೆ, ಸಂಸ್ಕøತಿ ಹಾಗೂ ಪಂರಪರೆ ಉಳಿಯುವಿಕೆಗೆ ಇಂತಹ ಕಾರ್ಯಕ್ರಮ ಕಾರ್ಯಕ್ರಮಗಳನ್ನು ಆಯೋಜಿಸಿ, ಜಾಗೃತಿ ಮೂಡಿಸಬೇಕು. ನಮ್ಮ ಪೂರ್ವಜರು ಕಲೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು ಈಗಲೂ ಅದು ಮುಂದುವರೆಯಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಮುಂಚೆ ಗಾಂಧೀ ವೃತ್ತದಿಂದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್‍ವರೆಗೆ ಗೊಂಬೆ ಹಾಗೂ ಡೊಳ್ಳು ಕುಣಿತದೊಂದಿಗೆ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕುಮಾರಿ ರಕ್ಷಂದ ತಿಳಗೊಳ ಅವರಿಂದ ಸುಗಮ ಸಂಗೀತ, ಕುಮಾರಿ ದಿವ್ಯಾ ಭಿಸೆ ಮತ್ತು ದೀಕ್ಷಾ ಭಿಸೆ ಸಮೂಹ ನೃತ್ಯ, ವಿನೋದ ಕಟಗೇರಿ ಜಾನಪದ ಗೀತೆ, ಕುಮಾರಿ ಶುಭನಂ ದಂದರಗಿ ಮತ್ತು ಸಂಗಡಿಗರಿಂದ ಕರುಳಿನ ಕೂಗು ನಾಟಕ, ಬಬಲೇಶ್ವರದ ರಾಕೇಶ ಮಾಳಪ್ಪಗೋಳ ಹಾಗೂ ಸಂಗಡಿಗರಿಂದ ಗೊಂಬೆ ಕುಣಿತ ಹಾಗೂ ಬಬಲೇಶ್ವರದ ಕಾಶಿಲಿಂಗ ಲೋಕೂರಿ ಅವರಿಂದ ಡೊಳ್ಳು ಕುಣಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ವೇದಿಕೆ ಮೇಲೆ ಉಪನ್ಯಾಸಕಾದ ಎಸ್. ಲೇಸನ್ನವರ, ಮೇತ್ರಿ ಕಲಾವಿದರಾದ ವೀರೇಶ ವಾಲಿ, ಕಾಲಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೆಶಕರದ ಬಿ. ನಾಗರಾಜ ಸ್ವಾಗತಿಸಿ ವಂದಿಸಿದರು.


ambedkar image

LEAVE A REPLY

Please enter your comment!
Please enter your name here