ರೆಮ್‍ಡಿಸಿವಿರ್ ಔಷಧಿ ಅಕ್ರಮ ಮಾರಾಟ: ಮೂವರ ಬಂಧನ

0
179

ವಿಜಯಪುರ ಮೇ 01: ಸೋಂಕಿತರ ಜೀವ ರಕ್ಷಕ ರೆಮ್‍ಡಿಸಿವಿರ್ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ಗಾಂಧಿಚೌಕ್ ಪೊಲೀಸರು ಬಂಧಿಸಿದ್ದಾರೆ. ಕೋವಿಡ್ ರೋಗಿಗಳಿಗೆ ನೀಡುವ ರೆಮ್‍ಡಿಸಿವರ್ ಚುಚ್ಚುಮದ್ದನ್ನು ಅಕ್ರಮವಾಗಿ ಇಟ್ಟುಕೊಂಡು, ಹಣ ಸಂಪಾದನೆ ಮಾಡುವ ಉದ್ದೇಶದಿಂದ 22,000/ ರೂಗಳಿಗೆ ಒಂದರಂತೆ ಮಾರಾಟ ಮಾಡುತ್ತಿದ್ದ ಖದೀಮರಿಂದ ರೆಮ್‍ಡಿಸಿವರ್ ಚುಚ್ಚುಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ದಾತ್ರಿ ಮಸಿದಿಯ ಹತ್ತಿರ ದಾಳಿ ಮಾಡಿ ರಾಕೇಶ ಹಣಮಂತ ಹಲಗಣಿ, ರೂಪಾಲಿ ರಾಕೇಶ ಹಲಗಣಿ, ಸ್ಟಾಪ್ ನರ್ಸ್ ಧನ್ವಂತರಿ ಆಸ್ಪತ್ರೆ, ವಿಜಯಪುರ, ಶೋಭಾ ಭಿಮಣ್ಣ ತಳವಾರ, ಸ್ಟಾಪ್ ನರ್ಸ್ ಧನ್ವಂತರಿ ಆಸ್ಪತ್ರೆ, ವಿಜಯಪುರ ಆರೋಪಿಗಳಿಂದ ರೆಮ್‍ಡಿಸಿವರ್ ಚುಚ್ಚುಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ ಈ ಕುರಿತು ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ ರೆಮ್‍ಡಿಸಿವರ್ ಚುಚ್ಚುಮದ್ದು ಔಷಧಿಯನ್ನು ಅಪ್ರಮಾಣಿಕವಾಗಿ ಪಡೆದುಕೊಂಡು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.

ಹಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗಾಂಧಿಚೌಕ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಪೆಕ್ಟ್ರ್ರವೀಂದ್ರ ಕೆ ನಾಯ್ಕೋಡಿ, ಪಿ.ಎಸ್‍ಐ ಶರಣಗೌಡ ಬಿ ಗೌಡರ, ಜಿಲ್ಲಾ ನೋಡೆಲ್ ಅಧಿಕಾರಿ ಡಾ|| ಔದ್ರಮ ರವರು ಹಾಗೂ ಗಾಂಧಿಚೌಕ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಎಸ್.ವಿ ಜೋಗಿನ, ಬಿ.ಕೆ ಗುಡಿಮನಿ, ಹಾಗೂ ಆರ್.ಬಿ ಬಿರಾದಾರ ಕಾರ್ಯಾಚೆಣೆಯಲ್ಲಿದ್ದರು.
ಈ ಕುರಿತಂತೆ ಗಾಂಧಿಚೌಕ ಪೊಲೀಸ್ ಠಾಣೆಯ ಗುನ್ನಾ ನಂ:84/2021 ಕಲಂ 420 ಐಪಿಸಿ ಮತ್ತು 18 (ಸಿ)ಡ್ರಗ್ಸ್ ಮತ್ತು ಕಾಸ್ಮೋಟಿಕ್ಸ್ ಆಕ್ಟ್-1940 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ambedkar image

LEAVE A REPLY

Please enter your comment!
Please enter your name here