ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನ

0
258

ಮುಂಬೈ ಎ.29: ಬಾಲಿವುಡ್ ನ ಜನಪ್ರಿಯ ನಟ ಇರ್ಫಾನ್ ಖಾನ್ ಅವರು ಅನಾರೋಗ್ಯ ಸಮಸ್ಯಯಿಂದ ಕಳೆದ ಸುಮಾರು ದಿನಗಳಿಂದ ಬಳಲುತ್ತಿದ್ದರು. ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು ಬಹುಮುಖ ಪ್ರತಿಭೆಯುಳ್ಳ ಅದ್ಬುತ ನಟರಾಗಿದ್ದರು. ನಟ ಇರ್ಫಾನ್ ಖಾನ್ ಕಿರು ತೆರೆಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿ ‘ಸಲಾಮ್ ಬಾಂಬೆ’ ಚಿತ್ರದಲ್ಲಿ ನಟಿಸುವ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟರು. ವಿಭಿನ್ನವಾದ ಪಾತ್ರಗಳ ಮುಖೇನ ಸಿನಿ ಪ್ರೀಯರನ್ನು ರಂಜಿಸಿದರು. ತಮ್ಮ ಅದ್ಬುತ ನಟನೆಯ ಮೂಲಕ ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್ ಸಿನಿಮಾ ರಂಗದಲ್ಲಿಯೂ ಗಮನ ಸೆಳೆದ ಪ್ರತಿಭಾನ್ವಿತ ಕಲಾವಿದ. ಜೈಪುರದಲ್ಲಿ ಎಂ. ಎ. ಮಾಡಿಕೊಂಡಿದ್ದ ಅವರು 1984 ರಲ್ಲಿ ನ್ಯಾಷನಲ್ ಸ್ಕೂಲ್ ಆಪ್ ಡ್ರಾಮಾ ಸೇರಿಕೊಂಡರು. ಆ ಸ್ಕೂಲ್ ನಲ್ಲಿ ಅಂತಿಮ ವರ್ಷ ಓದುತ್ತಿರುವಾಗಲ್ಲೇ ಮೀರಾ ನಾಯರ್ ಅವರ ‘ಸಲಾಮ್ ಬಾಂಬೆ’ ಸಿನೀಮಾಕ್ಕೆ ಆಯ್ಕೆಯಾದರು.

ಸಿನಿ ಲೋಕಕ್ಕೆ ಕಾಲಿಡುವ ಮುನ್ನ ಇರ್ಫಾನ್ ಖಾನ್ ಎ.ಸಿ. ರೀಪೇರಿ ಮಾಡುತ್ತಿದ್ದರು. ಅವರು ಮೊದಲು ಕೆಲಸ ಆರಂಭಿಸಿದ್ದು ಖ್ಯಾತ ನಟ ರಾಜೇಶ ಖನ್ನಾ ಅವರ ಎ.ಸಿ. ರೀಪೇರಿ ಮಾಡುವ ಮೂಲಕ. ತದನಂತರ 1994 ರಿಂದ 1998 ರ ವರೆಗೆ ಕಿರುತೆರೆಯಲ್ಲಿ ಬಹು ಬೇಡಿಕೆ ಪಡೆದುಕೊಂಡಿದ್ದ ನಟ ಇವರಾಗಿದ್ದರು. ಹೀಗೆ ಸಿನಿ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮುಖಾಂತರ ಅನೇಕ ಪ್ರಶಸ್ತಿಗಳನ್ನು ತಮ್ಮದನ್ನಾಗಿಸಿಕೊಂಡರು.

ಇವರ ಇನ್ನೊಂದು ವಿಶೇಷವೆಂದರೆ ಅತೀ ಎತ್ತರದ ಬಾಲಿವುಡ್ ನಟರಲ್ಲಿ ಇರ್ಫಾನ್ ಖಾನ್ ಕೂಡ ಒಬ್ಬರು. ಇವರ ನಟನೆಯ ಲಂಚ್ ಬಾಕ್ಸ ಚಿತ್ರವು ಟೊರೊಂಟೊ ಪಿಲ್ಮ ಕ್ರೀಟಿಕ್ಸ್ ಅಸೋಶಿಯೆಷನ್ ಪ್ರಶಸ್ತಿಯನ್ನು ಪಡೆದುಕೊಂಡ ಮೊದಲ ಚಿತ್ರ ಇದಾಗಿದೆ. ಇರ್ಫಾನ್ ಖಾನ್ ಓದಿನಲ್ಲಿ ತುಂಬಾ ಮುಂದಿದ್ದರು ಓದುವದು ಎಂದರೆ ಅವರಿಗೆ ತುಂಬಾ ಇಷ್ಟ. ವಾರದಲ್ಲಿ ಒಂದನ್ನಾದರು ಹಾಲಿವುಡ್ ಸ್ಕ್ರೀಪ್ಟ್ ಓದುತ್ತಿದ್ದರಂತೆ. ಇರ್ಫಾನ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ ಮೊದಲ ಕಮರ್ಷಿಯಲ್ ಚಿತ್ರ ‘ರೋಗ್’ ಅದು 2005 ರಲ್ಲಿ ತೆರೆಗೆ ಬಂದಿತ್ತು.

ಇರ್ಫಾನ್ ಖಾನ್ ಎರಡು ಆಸ್ಕರ್ ಪ್ರಶಸ್ತಿ ಪಡೆದ ಚಿತ್ರಗಳಲ್ಲಿ ನಟಿಸಿದ ಮೊದಲ ಭಾರತೀಯರಾಗಿದ್ದಾರೆ. ಅವರು ನಟಿಸಿದ ಆ ಎರಡು ಚಿತ್ರಗಳೆಂದರೆ ‘ಸ್ಲಂ ಡಾಗ್ ಮಿಲೇನಿಯರ್’ ಇನ್ನೊಂದು ‘ಲೈಪ್ ಆಪ್ ಪೈ’. ಒಂದು ಕಾಲದಲ್ಲಿ ಅವರ ಬಳಿ ಹಣ ಇಲ್ಲದ ಕಾರಣ ‘ಜುರಾಸಿಕ್ ಪಾರ್ಕ’ ಸಿನಿಮಾ ನೋಡಲು ಸಾಧ್ಯವಾಗಿರಲಿಲ್ಲ. ಆದರೆ ತದನಂತರದ ದಿನಗಳಲ್ಲಿ ಅಂದರೆ 2015 ರಲ್ಲಿ ‘ಜುರಾಸಿಕ್ ವಲ್ಡ್’ ಸಿನಿಮಾದಲ್ಲಿ ನಟಿಸಿದ ಖ್ಯಾತಿ ಇವರದು.

ಹೀಗೆ ಸಿನಿ ರಂಗದಲ್ಲಿ ದಿನಗಳು ಕಳೆಯುತ್ತಿದ್ದಂತೆಯೇ ‘ಪಾನ್ ಸಿಂಗ್ ತೋಮರ್’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಮತ್ತು ಫೀಲ್ಮಂ ಪೇರ್ ಪ್ರಶಸ್ತಿಗಳು ಲಭಿಸುವುದರ ಜೊತೆಗೆ ಸಿನಿಮಾ ರಂಗದಲ್ಲಿ ಅಪಾರ ಸಾಧನೆ ಮಾಡಿದ್ದಕ್ಕಾಗಿ ಅವರಿಗೆ 2011 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು.

ಯಾವುದೇ ಪಾತ್ರವಿದ್ದರೂ ಆ ಪಾತ್ರಕ್ಕೆ ಜೀವ ತುಂಬುವ ಮೂಲಕ ಪ್ರೇಕ್ಷಕರನ್ನ ತಮ್ಮತ್ತ ಹಿಡಿದಿಡುವಂತ ಪ್ರತಿಭೆ ಇರ್ಫಾನ್ ಖಾನ್ ಅವರದಾಗಿತ್ತು. ಈತ್ತೀಚಿನ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಒಂದು ವಾರದ ಹಿಂದಷ್ಟೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಅದರಿಂದಾಗಿ ಅವರು ತುಂಬಾ ಚಿಂತಾಕ್ರಾಂತರಾಗಿದ್ದರು. ಇರ್ಫಾನ್ ಖಾನ್ ನ್ಯೂರೋ ಎಂಡೋ ಕ್ರೈನ್ ಟ್ಯೂಮರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದುದಾಗಿ ಅವರೆ 2018 ರಲ್ಲಿ ಮಾಹಿತಿ ನೀಡಿದ್ದರು. ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ವಿದೇಶಕ್ಕೂ ಕೂಡ ಹೋಗಿ ಬಂದಿದ್ದರು. ತೀವ್ರ ಅನಾರೋಗ್ಯದ ಕಾರಣ ಅವರು ಮುಂಬೈನ ಕೊಕಿಲ್ ಬೆನ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಚಿಕಿತ್ಸೆ ನೀಡಿತ್ತಿದ್ದ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇರ್ಫಾನ್ ಖಾನ್ ತಮ್ಮ 54ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅಪಾರ ಅಭಿಮಾನಿಗಳನ್ನು ಪತ್ನಿ ಸುತಾಪ ಸಿಖದರ ಮಕ್ಕಳಾದ ಬಾಬಿಲ್ ಮತ್ತು ಅಯಾನ್ ರನ್ನು ಅಗಲಿದ್ದು ಸಿನಿ ರಂಗಕ್ಕೆ ಮತ್ತು ಅವರ ಕುಂಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ನಿಧನಕ್ಕೆ ಹಾಲಿವುಡ್ ಮತ್ತು ಬಾಲಿವುಡ್ ಹಾಗೂ ಆಪ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.


 

ambedkar image

LEAVE A REPLY

Please enter your comment!
Please enter your name here