ಅಕ್ರಮವಾಗಿ ರೆಮಡಿಸಿವರ್‌ ಮಾರಾಟ : ವಿಜಯಪುರ ಸರಕಾರಿ ಆಸ್ಪತ್ರೆಯ 7 ಜನರ ಬಂಧನ

0
225
ಎಸ್ ಪಿ ಅನುಪಮ ಅಗರವಾಲ

ಬೇಲಿಯೇ ಎದ್ದು ಹೊಲ ಮೈದಂತೆ ಗಾದೆ ಮಾತು ಅಕ್ಷರ ಸಹ ನಿಜವಾಗಿದೆ. ಪ್ರಾಣ ರಕ್ಷಿಸಬೇಕಾದವರು ರಾಕ್ಷಸರಂತೆ ನಡೆದುಕೊಳ್ಳುತ್ತಿದ್ದಾರೆ. ರೋಗಿಗಳ ಜೀವದ ಜೊತೆ ಆಟವಾಡುತ್ತಿದ್ದಾರೆ ಇಂತಹ ಮನಸ್ಥಿತಿ ಹೊಂದಿದ ವಿಷ ಜಂತುಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ.

ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ನೀಡುವ ರೆಮ್ಡಿಸಿವರ್ ಔಷಧನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ ಜಿಲ್ಲಾ ಅಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ಎಳು ಜನ ಸಿಬ್ಬಂದಿಯನ್ನು ಬಂಧಿಸುವಲ್ಲಿ ವಿಜಯಪುರ ಸಿ.ಇ.ಎನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಅನುಪಮ್ ಅಗರವಾಲ್‌ ಮಾಹಿತಿ ನೀಡಿದ್ದಾರೆ. ‌

ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಸೋಂಕಿತರಿಗೆ ರೆಮಡಿಸಿವರ್ ಔಷಧಿ ಸರಿಯಾಗಿ ನೀಡದೆ ಕಾಳಸಂತೆಯಲ್ಲಿ ಮಾರಾಟ ಮಾಡಿತ್ತಿದ್ದ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಸಾಬ್ ಬಾಬು ಹತ್ತರಕಿಹಾಳ, ಇಮ್ತಿಯಾಜ್ ಹುಸೇನಸಾಬ್ ಮಟ್ಟಿ, ಶಿವಕುಮಾರ್ ಸಿದ್ದಗೊಂಡ ಮದರಿ, ಮೌಲಾಲಿ ರಜಾಕಸಾಬ್ ಹತ್ತರಕಾಳ್, ಸೈಯದ್ ಮೌಲಾಸಾಬ್ ಆಹೇರಿ, ಜಕಪ್ಪ ಮಲಕಾರಿ ತಡ್ಲಗಿ, ಸಂಜೀವ ನರಸಿಂಹ ಜೋಶಿ, ಯಲ್ಲಮ್ಮ ಕನ್ನಾಳ, ಸುರೇಖಾ ಗಾಯಕವಾಡ ಎಂಬುವರನ್ನು ಬಂಧಿಸಿದ್ದಾರೆ‌. ಬಂಧಿತರಿಂದ ರೆಮಿಡಿಸಿವರ್ 3 ಬಾಟಲ್, ರೆಮಿಡಿಸಿವರ್ ಖಾಲಿ ಬಾಟಲ್ ಗಳು 24, 64 ಸಾವಿರ ನಗದು ಸೇರಿ 7 ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.


ambedkar image

LEAVE A REPLY

Please enter your comment!
Please enter your name here