ವಿಜಯಪುರ ಮಾ 11: ವಿಜಯಪುರ ಕೃಷಿ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗದಲ್ಲಿ ಗ್ರಂಥಾಲಯ ಸಹಾಯಕ ತಾತ್ಕಾಲಿಕ ಹುದ್ದೆಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಲೈಬ್ರರಿ ಅಸಿಸ್ಟಂಟ್ 2 ಹುದ್ದೆಗೆ ಲೈಬ್ರರಿ ಮತ್ತು ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ದಿನಾಂಕ : 16-03-2020ರಂದು ಮುಂಜಾನೆ 10.00 ಗಂಟೆಗೆ ಸಂದರ್ಶನ ಕೊಠಡಿ, ಡೀನ್ (ಕೃಷಿ) ಕೃಷಿ ಮಹಾವಿದ್ಯಾಲಯ, ವಿಜಯಪುರದಲ್ಲಿ, ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳು ಹಾಗೂ ಮೂಲ ದಾಖಲೆಗಳ ಎರಡು ಝರಾಕ್ಸ್ ಪ್ರತಿ ತಮ್ಮ ಭಾವಚಿತ್ರದೊಂದಿಗೆ ಹಾಜರಾಗಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 14.000 ವೇತನ ನೀಡಲಾಗುವುದು ಎಂದು ವಿಜಯಪುರ, ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.