ಗೋಲಗುಮ್ಮಟ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರದಿರಲು ರಾಜಕಾರಣಿಗಳ ಇಚ್ಛಾಶಕ್ತಿ ನಿರ್ಲಕ್ಷ್ಯ ಕಾರಣ; ಡಾ. ಜಿ. ಮಹೇಶ್ವರಿ

ಇಬ್ರಾಹಿಂ ರೋಜಾ ಸ್ಥಿತಿ ಗತಿ ಪರಿಸ್ಥಿತಿ ಇಂದಿನ ಸ್ಮಾರಕಗಳ ಸ್ಥಿತಿ ತುಂಬಾ ಗಂಭೀರದಲ್ಲಿದೆ. ಅದಕ್ಕೆ ಪುರಚ್ಛೇತನ ಮಾಡುವುದು ತುರ್ತು ಅವಶ್ಯಕವಾಗಿದೆ. ಅದರಂತೆ ಇಬ್ರಾಹಿಂ ರೋಜಾದ ಗೋಡೆ ಕುಸಿದು ವರ್ಷಗತಿಸಿದರು ಇನ್ನುವರೆಗೂ ರಿಪೇರಿ ಮಾಡಲಾಗದಿರುವುದು ಅಧಿಕಾರಿಗಳ ಕರ್ತವ್ಯ ಲೋಪ ಎತ್ತಿ ತೋರಿಸುತ್ತದೆ.

0
191

ವಿಜಯಪುರ : ಬೆಂಗಳೂರು ದಕ್ಷಿಣದ ಭಾರತೀಯ ಪುರಾತತ್ವ ನಿರ್ದೇಶಕರಾದ ಡಾ. ಜಿ. ಮಹೇಶ್ವರಿ ಅವರು ಐತಿಹಾಸಿಕ ಸ್ಮಾರಕ ಗೋಲಗುಂಬಜಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದ ಬಿಜಾಪುರ ಹೆರಿಟೇಜ್ ಫೌಂಡೇಶನ್ ಪದಾಧಿಕಾರಿಗಳು ಅವರನ್ನು ಭೇಟಿ ಮಾಡಿ ಸ್ಮಾರಕಗಳ ಸ್ಥಿತಿಗತಿಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.

ಇಬ್ರಾಹಿಂ ರೋಜಾ ಸ್ಥಿತಿ ಗತಿ ಪರಿಸ್ಥಿತಿ ಇಂದಿನ ಸ್ಮಾರಕಗಳ ಸ್ಥಿತಿ ತುಂಬಾ ಗಂಭೀರದಲ್ಲಿದೆ. ಅದಕ್ಕೆ ಪುರಚ್ಛೇತನ ಮಾಡುವುದು ತುರ್ತು ಅವಶ್ಯಕವಾಗಿದೆ. ಅದರಂತೆ ಇಬ್ರಾಹಿಂ ರೋಜಾದ ಗೋಡೆ ಕುಸಿದು ವರ್ಷಗತಿಸಿದರು ಇನ್ನುವರೆಗೂ ರಿಪೇರಿ ಮಾಡಲಾಗದಿರುವುದು ಅಧಿಕಾರಿಗಳ ಕರ್ತವ್ಯ ಲೋಪ ಎತ್ತಿ ತೋರಿಸುತ್ತದೆ.

ಗೋಲಗುಂಬಜ್ ದಕ್ಷಿಣ ಭಾರತದ ಭಾಗದ ಯಾವುದು ಒಂದು ಸ್ಮಾರಕ ಇಲ್ಲಿಯವರೆಗೆ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಇನ್ನೂ ಸೇರದಿರಲು ರಾಜಕಾರಣಿಗಳ ಇಚ್ಛಾಶಕ್ತಿ ನಿರ್ಲಕ್ಷ್ಯ, ಮನಸ್ಥಿತಿಯೇ ಕಾರಣವಾಗಿದೆ. ಸ್ಥಿತಿ ಗತಿ ಪರಿಸ್ಥಿತಿ ಇಂದಿನ ಸ್ಮಾರಕಗಳ ಸ್ಥಿತಿ ತುಂಬಾ ಗಂಭೀರದಲ್ಲಿದೆ. ಅದಕ್ಕೆ ಪುರಚ್ಛೇತನ ಮಾಡುವುದು ತುರ್ತು ಅವಶ್ಯಕವಾಗಿದೆ.

ಪ್ರವಾಸಿಗರು ಮೇಲೆ ಹೋಗಿ ನೋಡಿ ಬಂದು ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆ ಇರುವುದಿಲ್ಲ. ಹಾಗೂ ಭದ್ರತೆ ಸೆಕ್ಯೂರಿಟಿ ಅಷ್ಟಕಷ್ಟೆ ಇದೆ. ಜನಸಾಮಾನ್ಯರು ಸರ್ಕಾರಕ್ಕೆ ತೆರಿಗೆ ಪಾವತಿಸಿದರು. ಸರ್ಕಾರದಲ್ಲಿ ಅನುದಾನವಿಲ್ಲ. ಅಂತ ಹೇಳುತ್ತಿದ್ದಾರೆ. ಹಾಗೇನೇ ನಗರದ ಪ್ರಾಚೀನ ಪರಂಪರೆಯ ನವರಸ ಪುರ ಉತ್ಸವ ರಾಜಕಾರಣೀಗಳು ಕಡೆಗಣನೆ ಮಾಡುತ್ತಾ ಬಂದಿದ್ದಾರೆ. ಉದಾಹರಣೆಗೆ ಹಂಪಿ ಉತ್ಸವ ಆಗ್ಲಿ ಅಥವಾ ಮೈಸೂರು ದಸರಾ ಆಗ್ಲಿ ಕೋಟಿ ಕೋಟಿ ಅನುದಾನ ಕೊಡಲಿಕ್ಕೆ ಅವರಿಗೆ ಅನುಕೂಲ ಕಲ್ಪಿಸಿಕೊಡುತ್ತಾರೆ. ಆದ್ರೆ ವಿಜಯಪುರ ಅಂದ್ರೆ ಅವರಿಗೆ ಇಚ್ಛಾಶಕ್ತಿ ಅನುದಾನ ಇಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸ್ಮಾರಕಗಳ ಮೇಲೆ ಗಿಡ,ಕಂಟಿಗಳು ಬೆಳೆಯುತ್ತಿದ್ದರು ಅದಕ್ಕೆ ನಿರ್ಲಕ್ಷ್ಯ ವಹಿಸಿದ್ದಾರೆ. ಸ್ಮಾರಕಗಳ ಅಕ್ಕಪಕ್ಕದಲ್ಲಿ ಕಸದ ರಾಶಿಗಳು ಬಿದ್ದು ಗಲೀಜಾಗಿದ್ದರಿಂದ ಸ್ಮಾರಕಗಳ ನೋಡುಗರಿಗೆ ಹಲವು ರೋಗ ರುಜಿನಗಳು ಬರುವ ಸಾಧ್ಯತೆ ಇರುತ್ತದೆ. ಅವುಗಳನ್ನು ಸ್ವಚ್ಛಗೊಳಿಸಬೇಕು. ಇದರಿಂದ ಹೆಚ್ಚಾಗಿ ಅಂತಾರಾಷ್ಟ್ರೀಯದಿಂದ ವಿಜಯಪುರ ಜಿಲ್ಲೆಗೆ ಆಗಮಿಸಿದೆ ಪ್ರವಾಸೋದ್ಯಮ ಇಲ್ಲಿ ನೆಲ ಕಚ್ಚಿದೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅನೀಸ ಮಣಿಯಾರ, ಹಮ್ಜಾ ಮಹಿಬೂಬ, ಅಜಗರ ಅಲಿ, ಬಿಲಾಲ ಬಿಲ್ವಾರ, ಡಾ. ಚೌಧರಿ, ಅತೀಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


ambedkar image

LEAVE A REPLY

Please enter your comment!
Please enter your name here