ಎಕ್ಸಲಂಟ ಶಾಲೆಯ ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭ ಅದ್ಧೂರಿಯಾಗಿ ಜರುಗಿತು

0
140

ವಿಜಯಪುರ ಮಾ 07: ಎಕ್ಸಲಂಟ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆದರ್ಶನಗರ ವಿಜಯಪುರ ಇಲ್ಲಿ 2019-20 ನೇ ಸಾಲಿನ ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭ ಅದ್ಧೂರಿಯಾಗಿ ಜರುಗಿತು. ಈ ಸಂಧರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎ.ಪಿ.ಎಂ.ಸಿ ಪೋಲಿಸ್ ಠಾಣಾ ಪಿ.ಎಸ್.ಆಯ್. ಶ್ರೀ ಸೋಮೇಶ ಗೆಜ್ಜಿ ರವರು ವಿದ್ಯಾರ್ಥಿಗಳ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಗುರಿ ಒಂದೇ ಇದ್ದರೆ ಸಾಲದು ಜೊತೆಗೆ ಆತ್ಮಸೈರ್ಯ ಮತ್ತು ಸಾಧಿಸುವ ಛಲ ಇರುಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳಬೇಕೆಂದು ವಿದ್ಯಾರ್ಥಿಗಳನ್ನುದೇಶಿಸಿ ಮಾತನಾಡಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ವಿಕಾಸ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಕೆಲೂರ ರವರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕøತಿಯನ್ನು ಬೆಳಸಿಕೊಳ್ಳಬೇಕು. ಕೆವಲ ಅಂಕಗಳಿಸುವುದು ಒಂದೇ ಸಾಧನೆ ಅಲ್ಲ. ಅದರ ಜೊತೆಗೆ ಕ್ರೀಡೆ, ಸಂಗೀತ, ಸಾಹಿತ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ವಿಕಾಸ ಸಂಸ್ಥೆಯ ನಿರ್ದೇಶಕರಾದ ಶ್ರೀ ಮಂಜುನಾಥ ಕೌಲಗಿ ಯವರು ವಿದ್ಯಾರ್ಥಿಗಳು ಯಾವುದೇ ಸಾಧನೆ ಮಾಡಬೇಕಾದರೆ ಆಸಕ್ತಿ, ಶ್ರಧ್ಧೆ, ಆತ್ಮವಿಶ್ವಾಸ ಮತ್ತು ದೈರ್ಯವನ್ನು ತಮ್ಮ ಜೀವನದಲ್ಲಿ ರೂಪಿಸಿಕೊಳ್ಳಬೇಕೆಂದರು.
ಇನ್ನೋರ್ವ ಮುಖ್ಯ ಅತಿಥಿಸ್ಥಾನ ವಹಿಸಿ ಮಾತನಾಡಿದ ವಿಕಾಸ ಸಂಸ್ಥೆಯ ನಿರ್ದೇಶಕರಾದ ಶ್ರೀ ದಯಾನಂದ ಕೆಲೂರ ವಿದ್ಯಾರ್ಥಿಗಳು ಶಿಕ್ಷಕರನ್ನು ಮತ್ತು ತಂದೆ-ತಾಯಿಯರನ್ನು ಪೂಜ್ಯಭಾವನೆಯಿಂದ ಕಾಣಬೇಕು. ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ನಕಾರಾತ್ಮಕ ಧೋರಣೆಗಳನ್ನು ಕೈಬಿಡಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಗೌರವಾನ್ವಿತ ಸದಸ್ಯರಾದ ಶ್ರೀ ರಾಜಶೇಖರ ಕೌಲಗಿ ಯವರು ಧನಾತ್ಮಕ ವಿಚಾರಗಳು ಕ್ರೀಡೆಯಿಂದ ಬರುತ್ತದೆ. ಶಾರೀರಿಕವಾಗಿ ಸದೃಡವಾಗಿ ಇರಲು ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಅಳವಡಿಸಿಕೊಳ್ಳಿ ಎಂದರು ಹೇಳಿದರು . ಕನ್ನಡ ಮಾಧ್ಯಮ ಎಂಬ ಕಿಳರೀಮೆ ಬೇಡ ದೇಶದಲ್ಲಿ ಸಾಧಕರುಗಳನ್ನು ನೋಡಿದರೆ ಅವರೆಲ್ಲರೂ ಕನ್ನಡ ಮಾಧ್ಯಮದಲ್ಲೇ ತಮ್ಮ ಶಿಕ್ಷಣ ಪೂರೈಸಿರುವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 2018-19ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ವೀಣಾ ಈಸರೆಡ್ಡಿ, ದ್ವಿತೀಯ ಸ್ಥಾನ ಪಡೆದ ಕುಮಾರ ಅಬ್ದಲ್ ರೆಹಮಾನ್ ಹಡಗಿನಾಳ, ಮತ್ತು ತೃತೀಯ ಸ್ಥಾನ ಪಡೆದ ದಾನೇಶ್ವರಿ ಹಿಪ್ಪರಗಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎಂ.ಆಯ್.ಬಿರಾದಾರ, ಪ್ರೌಢಶಾಲಾ ಮೇಲ್ವಿಚಾರಕಾರಾದ ಶ್ರೀ ಎಂ.ಎಚ್.ಹುಗ್ಗೇನವರ, ಶಾಲಾ ಪ್ರಧಾನಿ ಕುಮಾರ ರಾಹುಲ ಅನಚಿ ಉಪಪ್ರಧಾನಿ ಮಿಸ್ಬಾ ಅಗಸಿಮನಿ ಉಪಸ್ಥಿತರಿದ್ದರು. ಕುಮಾರಿ ಅರ್ಪಿತಾ ವಿಜಾಪುರ ಸ್ವಾಗತಿಸಿ ಪರಿಚಯಿಸಿದರು. ಕುಮಾರಿ ಪ್ರಿಯಾ ಅಡಳ್ಳಿ ವಂದಿಸಿದಳು. ಕುಮಾರಿ ಸುಮಾ ಮಿರಗಿ ನಿರೂಪಿಸಿದರು.

LEAVE A REPLY

Please enter your comment!
Please enter your name here