ವಿಜಯಪುರ: ಆರ್ಕೆಸ್ಟ್ರಾ ಮತ್ತು ನಾಟಕ ಕಂಪನಿಗಳು ನಡೆಸಲು ಅನುಮತಿ ಕೊಡಿ; ಕಲಾವಿದರಿಂದ ಮನವಿ

0
186

ವಿಜಯಪುರ ಜೂನ್ 24: ಮದುವೆ, ಹುಟ್ಟು ಹಬ್ಬ, ಜಾತ್ರೆ ದಸರಾ, ಗಣಪತಿ ಹಬ್ಬ ಇನ್ನಿತರ ಎಲ್ಲಾ ಸಮಾರಂಭಗಳಿಗೆ ಆರ್ಕೆಸ್ಟ್ರಾ ಮತ್ತು ನಾಟಕ ಕಂಪನಿಗಳು ನಡೆಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ಕಲಾವಿದರ ಕಲ್ಯಾಣ ವೇದಿಕೆ ವತಿಯಿಂದ ಅಪರ ಜಿಲ್ಲಾಧಿಕಾರಿ ಔದ್ರಾಮ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯಾಧ್ಯಕ್ಷರು ಶಕ್ತಿಕುಮಾರ ಉಕುಮನಾಳ ಮಾತನಾಡಿ, ಲಾಕ್‍ಡೌನ್ ಆಗಿ ಮೂರು ತಿಂಗಳು ಕಳೆದರು ಕಲಾವಿದರಿಗೆ ಯಾವ ಕಾರ್ಯಕ್ರಮಗಳು ಇಲ್ಲದೆ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಬಂದಿದೆ ವೃತ್ತಿ ರಂಗಭೂಮಿ ಕಲಾವಿದರು ಹಾಗೂ ಆರ್ಕೆಸ್ಟ್ರಾ ಕಲಾವಿದರು ಕಲೆಯನ್ನು ಬಿಟ್ಟು ಬೇರೆ ಯಾವ ಕೆಲಸ ಬರುವುದಿಲ್ಲ.

ಕಲೆಯನ್ನು ನಂಬಿ ಜೀವನ ಮಾಡುತ್ತಿದ್ದಾರೆ ದಕ್ಷಿಣ ಕರ್ನಾಟಕ ಹಲವು ಕಡೆ ಕಾರ್ಯಕ್ರಮಗಳು ಮಾಡುತ್ತಿದ್ದಾರೆ. ದಯಾಳುಗಳಾದ ತಾವು ನಮ್ಮಂತ ಕಲಾವಿದರ ಮೇಲೆ ಕರುಣೆ ತೋರಿ ಇನ್ನಿತರ ಎಲ್ಲಾ ಸಮಾರಂಭಗಳಿಗೆ ಆರ್ಕೆಸ್ಟ್ರಾ ಮತ್ತು ನಾಟಕಗಳನ್ನು ಮಾಡಲು ಅನುಮತಿ ಕೊಡಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ.

ಈ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಫಯಾಜ ಕಲಾದಗಿ, ರಾಜ್ಯ ಉಪಾಧ್ಯಕ್ಷ ಪ್ರಶಾಂತ ಚೌಧರಿ, ಜಿಲ್ಲಾಧ್ಯಕ್ಷರು ಸೋಮಶೇಖರ ರಾಠೋಡ, ಯಾಸೀನ ಕಲಾದಗಿ, ಯಾಸೀನ ಜಿಗರ, ರವಿ ಕೋರಿ, ಪ್ರಕಾಶ ಮಹೇಂದ್ರಕರ, ದತ್ತಾತ್ರೆಯ ಹಿಪ್ಪರಗಿ, ಆನಂದ ಹೂಗಾರ, ಚಿದಾನಂದ ಕಾಂಬಳೆ, ಪರಶುರಾಮ ವಿಜಯಪುರ, ಆಶಾ ಬಾಗವಾನ, ಸುಭದ್ರಮ್ಮ ಕರಜಗಿ, ನೀತಾ ಮೈದರಗಿ, ವಿರೇಶ ಹಿರೇಮಠ, ಅನೀಲ ಚವ್ಹಾಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Advertisement

ambedkar image

LEAVE A REPLY

Please enter your comment!
Please enter your name here