ಅಬಕಾರಿ ಇಲಾಖೆಯಿಂದ 12.05 ಕೆ.ಜಿ ಅಫೀಮು ವಶ

0
225

ವಿಜಯಪುರ: ಚಡಚಣ ತಾಲೂಕಿನ ಶರಾಡೋನ್ ಅಲ್ಲಿ 12.05 ಕೆ.ಜಿ ಅಫೀಮು ಸಾಗಿಸುತ್ತಿರುವ ಕಂಟೇನರ್ ಹಾಗೂ ಚಾಲಕನನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ನಿನ್ನೆ ಸಂಜೆ ದಾಳಿ ಮಾಡಿ ಸೆರೆಹಿಡಿದಿದ್ದಾರೆ.

ಅಬಕಾರಿ ಜಂಟಿ ಆಯುಕ್ತರಾದ ಡಾ.ವೈ ಮಂಜುನಾಥ ಅವರು ಮಾತನಾಡಿ ರಾಜಸ್ಥಾನದಿಂದ ಬೆಂಗಳೂರಿಗೆ ತೆರಳುತಿದ್ದ ಕಂಟೇನರ್ ಅನ್ನು ಚಡಚಣ ತಾಲೂಕಿನ ಶಿರಾಡೂನ್‍ನಲ್ಲಿ ದಾಳಿ ಮಾಡಿ ಸೆರೆ ಹಿಡಿದಿದ್ದು, ಸುಮಾರು 12.05 ಕೆ.ಜಿ ತೂಕದ ಅಫೀಮು ಹಾಗೂ ಪೌಡರ್ ಸಾಗಿಸಲಾಗುತ್ತಿತ್ತು. ಸೂಮಾರು 5 ಲಕ್ಷ ಮೌಲ್ಯದ ಅಫಿಮು ಹಾಗೂ 30 ಲಕ್ಷ ಮೌಲ್ಯದ ಅಶೋಕ ಲೈಲೆಂಡ್ ಕಂಟೇನರ್ ವಶ ಪಡಿಸಿಕೊಳ್ಳಲಾಗಿದೆ. ಜೊತೆಗೆ ಆರೋಪಿಯಾದ ಲಾರಿ ಚಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆ ಎಂದರು.

ವಿಜಯಪುರ ಅಬಕಾರಿ ಆಯುಕ್ತರಾದ ಅರುಣಕುಮಾರ ಅವರ ನೇತೃತ್ವದಲ್ಲಿ ಚಡಚಣ ಶಾಖೆಯ ಅಬಕಾರಿ ಪಿ.ಎಸ್.ಐ ಸದಾಶಿವ ಕೋರ್ತಿ ಹಾಗೂ ಗಾರ್ಡ್‍ಗಳಾದ ಅಶೋಕ ಬಿರಾದಾರ ಮತ್ತು ಎ.ಎಸ್ ಗೊಣಸಗಿ ಅವರ ತಂಡ ಹಾಗೂ ಅಬಕಾರಿ ಇಲಾಖೆ ಅಧಿಕಾರಿ ಶ್ರೀ ಪಡಸಲಗಿ ಅವರ ಪ್ರಮುಖ ಪಾತ್ರದಿಂದಾಗಿ ಈ ಕಂಟೇನರ್ ಹಾಗೂ ಅಫೀಮು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದರು.

ವಿಜಯಪುರ ಅಬಕಾರಿ ಆಯುಕ್ತರಾದ ಶ್ರೀ ಅರುಣ ಕುಮಾರ ಪ್ರಾಥಮಿಕ ತನಿಖೆಯಲ್ಲಿ ಈ ಕಂಟೇನರ್ ರಾಜಸ್ಥಾನದಿಂದ ಬೆಂಗಳೂರಿಗೆ ದ್ವೀಚಕ್ರ ವಾಹನಗಳ ಬಿಡಿಭಾಗದೊಂದಿಗೆ ಹೊರಟಿದ್ದ ಈ ಕಂಟೇನರ್‍ನಲ್ಲಿ ಅಫಿಮೂ ಸಾಗಾಟ ಮಾಡಲಾಗುತ್ತಿತ್ತು. ಈ ವಿಷಯ ತಿಳದ ಕೂಡಲೆ ನಾಕಾ ಬಂದಿಯಲ್ಲಿ ಯಶಸ್ವಿಯಾಗಿ ದಾಳಿ ಮಾಡಿ ಸೆರಿಹಿಡಿದು 12.05 ಕೆ.ಜಿ ಅಫೀಮು ಹಾಗೂ ಪೌಡರ್ ವಶಪಡಿಸಿಕೊಂಡಿದ್ದೆವೆ ಎಂದು ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here