ವಿಜಯಪುರ : ಬೇಸಿಗೆ ರಜೆ, ಮದುವೆ ಹಾಗೂ ಪ್ರವಾಸದಂತಹ ಸಂದರ್ಭಗಳಲ್ಲಿ ಜನರು ತಮ್ಮ ಮನೆಗಳನ್ನು ಕೀಲಿ ಹಾಕಿ ತೆರಳುವ ಸಂದರ್ಭ ಹೆಚ್ಚಾಗುತ್ತದೆ. vijayapura locked house beat system security ಈ ಸಂದರ್ಭದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೀಗ ವಿಜಯಪುರ ಆರಕ್ಷಕ ಇಲಾಖೆ ಹೊಸ ತಂತ್ರಜ್ಞಾನ ಆಧಾರಿತ “ಲಾಕ್ಡ್ ಹೌಸ್ ಬೀಟ್ ಸಿಸ್ಟಂ” ಅನ್ನು ಜಾರಿಗೆ ತಂದಿದೆ.
ಈ ಹೊಸ ಯೋಜನೆಯ ಮೂಲಕ ಸಾರ್ವಜನಿಕರು ತಮ್ಮ ಹೆಸರು, ವಿಳಾಸ, ಜಿಪಿಎಸ್ ಮಾಹಿತಿ ಹಾಗೂ ಮನೆ ಖಾಲಿ ಇರುವ ಅವಧಿಯನ್ನು ವಿಶೇಷ ಸಹಾಯವಾಣಿ ಸಂಖ್ಯೆ 8277970747 ಗೆ ಕಳುಹಿಸಿದರೆ, ಆ ಅವಧಿಯಲ್ಲಿ ಪೊಲೀಸ್ ಸಿಬ್ಬಂದಿ ಮನೆಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ಮಾಹಿತಿ ನೀಡುತ್ತಾ, ಅಪರಾಧಿಗಳು ಹೆಚ್ಚಾಗಿ ಕೀಲಿ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳತನ ನಡೆಸುತ್ತಿರುವುದು ಕಂಡುಬಂದಿದೆ. ಇದನ್ನು ತಡೆಯಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
vijayapura locked house beat system security ಈ ಯೋಜನೆಯಡಿ, ಸಾರ್ವಜನಿಕರಿಂದ ಬಂದ ಮಾಹಿತಿಯನ್ನು ಜಿಲ್ಲಾ ನಿಸ್ತಂತು ಕೋಣೆಗೆ ರವಾನಿಸಲಾಗುತ್ತದೆ. ನಂತರ ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡಲಾಗುತ್ತದೆ. ಬೀಟ್ ಸಿಬ್ಬಂದಿ ಆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತಾರೆ.
ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಮಾಹಿತಿಯ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಯೋಜನೆಯ ಮುಖ್ಯ ಉದ್ದೇಶವು ಕಳ್ಳತನ ತಡೆಗಟ್ಟುವುದು ಹಾಗೂ ಸಾರ್ವಜನಿಕರಲ್ಲಿ ಸುರಕ್ಷತೆಯ ಭರವಸೆ ಮೂಡಿಸುವುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






