Vijayapura ಕೆರೆಗಳಿಗೆ ನೀರು: ಕಾಲುವೆಗೆ ನೀರು ಹರಿಸಲು ರೈತರ ಮನವಿ

Almatti water release

ವಿಜಯಪುರ : ಲಾಲ್ ಬಹದ್ದೂರ್ ಶಾಸ್ತ್ರೀ ಜಲಾಶಯದ ವ್ಯಾಪ್ತಿಗೆ Almatti water release ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂದಿಸಿದ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಜಿಲ್ಲೆಯಲಿರುವ 124 ಕೆರೆಗಳಿಗೆ ಮತೊಮ್ಮೆ ನೀರು ಭರ್ತಿ ಮಾಡಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಭೇಟಿ ಆಗಿ ಪ್ರಾದೇಶಿಕ ಆಯುಕ್ತರಾದ ಎ.ಎಂ.ಜಾನಕಿ ಅವರಿಗೆ ಮಂಗಳವಾರ ದಂದು ಮನವಿ ಸಲಿಸಲಾಯಿತು. ಏಪ್ರಿಲ್ 28 ರ ವರೆಗೂ ಎಲ್ಲ ಕಾಲುವೆಗಳಿಗೆ ನೀರು ಹರಿಸಿದರೂ ಕೂಡಾ ಕೇವಲ ಶೇಕಡಾ 30% ರಷ್ಟು ಮಾತ್ರ ನೀರನ್ನು ಕೆರೆಗಳಿಗೆ ಬಿಡಲಾಗಿದೆ ಆದರೆ ಏಃಎಓಐ ಅಧಿಕಾರಿಗಳು ಶೇಕಡಾ 70 ರಷ್ಟು ಕೆರೆಗಳಿವೆ ನೀರು ತುಂಬಿಸಿದ್ದೇವೆ ಅಂತ ಹೇಳುತ್ತಾರೆ ಈ ಮಾತು ಸತ್ಯಕ್ಕೆ ದೊರವಾಗಿದೆ.

ಇದೇ ತಿಂಗಳು 5 ರಂದು ಆಲಮಟ್ಟಿ ಯ ಏಃಎಓಐ ಮುಖ್ಯ ಅಭಿಯಂತರರ ಕಚೇರಿ ಮುಂದೆ ಪ್ರತಿಭಟನೆಯನ್ನು ಜಂಟಿ ಸಂಘಟನೆಯಿಂದ ಧರಣಿ ನಡೆಸಲಾಗಿತ್ತು. ಮುಖ್ಯ ಅಭಿಯಂತರರಾದ ಡಿ. ಬಸವರಾಜ ಅವರು ಮನವಿ ಸ್ವೀಕರಿಸಿ, ಮತ್ತೆ ಕಾಲುವೆಗಳಿಗೆ ನೀರು ಹರಸಿ ಕೆರೆಗಳನ್ನು ಭರ್ತಿ ಮಾಡಲು ಪ್ರಾದೇಶಿಕ ಆಯುಕ್ತರ ಅನುಮತಿಗೆ ಪತ್ರ ಬರೆದಿದ್ದಾರೆ. ಆದ್ದರಿಂದ ಕೂಡಲೇ ಕಾಲುವೆಗಳಿಗೆ ನೀರು ಹರಿಸಲು ಅನುಮತಿ ನೀಡಬೇಕು ಎಂದರು. ವಿಜಯಪುರ ಜಿಲ್ಲೆಯ ಕೆಲವೊಂದು ಭಾಗಗಳಿಗೆ ಕೆರೆಗಳಿಗೆ ನೀರು ತಲುಪಿಲ್ಲ. ಈ ಭಾರಿ ಬೇಸಿಗೆಯ ಬಿಸಿಲಿನ ಪ್ರಖರತೆ ಅತೀಯಾಗಿದೆ. ಹಿಂದೆಂದೂ ಇಂತಹ ಬಿಸಿಲು ಕಂಡಿಲ್ಲ.

Almatti water release ಈಗ ಕೆರೆಗಳಿಗೆ ಹರಿಸಿದ ನೀರು ಬಾಸ್ಪೀರಣವಾಗಿ ಬೇಗನೆ ಬರಿದಾಗುತ್ತೆ. ಇನ್ನು ಒಂದು ತಿಂಗಳು ಬೇಸಿಗೆ ಇದ್ದು ಅಲ್ಲಿಯವರಿಗೆ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ತತ್ವಾರ ಎದುರಾಗುತ್ತದೆ ಆದ್ದರಿಂದ ತಕ್ಷಣ ಆದೇಶ ನೀಡಿ ಎಲ್ಲ ಕಾಲುವೆಗಳಿಗೆ ನೀರು ಹರಿಸಿ 75% ರಿಂದ 80% ಕೆರೆಗಳನ್ನು ಭರ್ತಿ ಮಾಡಿ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಅನುಕೂಲತೆ ಕಲ್ಪಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಪ್ರಾದೇಶಿಕ ಆಯುಕ್ತರು ತಕ್ಷಣ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು, ನೀರು ಹರಿಸಲು ಅನುಮತಿ ನೀಡಲಾಗುವುದೆಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಜಮೀನಿಗೆ ಹೋಗುವ ದಾರಿ ಸಮಸ್ಯೆ ಕುರಿತು ಮನವಿ ಸಲ್ಲಿಸಿ ಕಾನೂನು ತಿದ್ದುಪಡಿ ಮಾಡಿ ತಹಶೀಲ್ದಾರರಿಗೆ ಪೂರ್ಣ ಅಧಿಕಾರ ನೀಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂಧ ಕುಲಕರ್ಣಿ, ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆಯ ನಿಡಗುಂದಿ ತಾಲೂಕಾಧ್ಯಕ್ಷ ಸೀತಪ್ಪ ಗಣಿ, ಶಶಿಕಾಂತ್ ದೇಸಾಯಿ, ಫೀರಸಾಬ್ ನದಾಫ್, ವೆಂಕಟೇಶ್ ವಡ್ಡರ, ಸಾಯಿಬಣ್ಣಾ ಅಂಗಡಿ, ಇಬ್ರಾಹಿಂ ವಾಲಿಕಾರ, ಲಂಕೇಶ್ ತಳವಾರ, ನಾಗಪ್ಪ ಬೂಧಗೋಳಿ, ಮಂಜು ಛಲವಾದಿ, ಬಸವರಾಜ ಬೋಳಿ, ಚಂದಪ್ಪ ಬೋಮ್ಮನಗಿ, ಹೊನ್ನಪ್ಪ ಕೆಂಗುತ್ತಿ ಸೇರಿದಂತೆ ಮಂತಾದವರು ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು