ವಿಜಯಪುರ: ನಗರದ ಸಂತ ಅನ್ನಮ್ಮರ ದೇವಾಲಯದ ಸಭಾಂಗಣದಲ್ಲಿ, ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ. ಹಾಗೂ ಜೀವನ ಜ್ಯೋತಿ ಮಾಜಿ ದೇವದಾಸಿ Devadasi ತಾಯಂದಿರ ಜಿಲ್ಲಾ ಒಕ್ಕೂಟ, ವಿಜಯಪುರ. ಇವರ ಸಹಯೋಗದಲ್ಲಿ ಮಾಜಿ ದೇವದಾಸಿ ತಾಯಂದಿರ ಜಿಲ್ಲಾ ಮಟ್ಟದ ಸಮಾವೇಶ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀಮತಿ ವಿರೂಪಮಾ ದೋಟಿಹಾಳ ಕಾರ್ಯದರ್ಶಿಗಳು ವಿಮುಕ್ತ ದೇವದಾಸಿ ವೇದಿಕೆ ಕುಷ್ಟಗಿ. ಇವರು ಮಾತನಾಡುತ್ತ, ಕರ್ನಾಟಕ ರಾಜ್ಯದ 14 ಜಿಲ್ಲೆಗಳಲ್ಲಿ ಸುಮಾರು 90000 ಮಾಜಿ ದೇವದಾಸಿ ತಾಯಂದಿರು ಇದ್ದು, ಅವರಲ್ಲಿ ಸರ್ಕಾರ 2011 ರಲ್ಲಿ ಸಮೀಕ್ಷೆ ಮಾಡಿರುವ ಪ್ರಕಾರ 46000 ಮಾಜಿ ದೇವದಾಸಿ Devadasi ತಾಯಂದಿರು ದೇವದಾಸಿ ಪುನರವಸತಿ ನಿಗಮದಲ್ಲಿ ನೊಂದಣಿಯಾಗಿದ್ದಾರೆ. ಇನ್ನು 45000 ಮಾಜಿ ದೇವದಾಸಿ ತಾಯಂದಿರು ಸಮೀಕ್ಷೆಯಿಂದ ಹೊರಗೆ ಉಳಿದು ನೋಂದಣಿಯಾಗದೆ ಸರ್ಕಾರದ ಸೌಲಬ್ಯಗಳಿಂದ ವಂಚಿತರಾಗಿದ್ದಾರೆ.
ಇದನ್ನೂ ಓದಿ: Wakp Bill-2024 : ವಕ್ಪ್ ಬಿಲ್-2024 ವಿರುದ್ಧ ಆಕ್ಷೇಪಣೆ ಸಲ್ಲಿಸಿ, ಜಂಟಿ ಪಾರ್ಲಿಮೆಂಟ್ ಸಮಿತಿಗೆ ಹಕ್ಕೊತ್ತಾಯ ಮಂಡಿಸಿದ ಎಸ್.ಡಿ.ಪಿ.ಐ
ಆದ್ದರಿಂದ ವಿಮುಕ್ತ ದೇವದಾಸಿ ತಾಯಂದಿರ ರಾಜ್ಯ ಮಟ್ಟದ ವೇದಿಕೆಯು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದ ಪರಿಣಾಮವಾಗಿ ಮುಂದಿನ ತಿಂಗಳು ಮಾಜಿ ದೇವದಾಸಿ ತಾಯಂದಿರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತು ಸಂಪೂರ್ಣ ಸಮೀಕ್ಷೆ ಮಾಡಿ, ಸಮೀಕ್ಷೆಯಿಂದ ಹೊರಗೆ ಉಳಿದವರನ್ನು ನೊಂದಣಿ ಮಾಡಿಕೊಳ್ಳುವ ಪ್ರಕ್ರೀಯೆ ಪ್ರಾರಂಬವಾಗುವುದು. ಅದರಂತೆ, ಮಾನ್ಯ ಮುಖ್ಯಮಂತ್ರಿಗಳಿಗೆ, ಮಾಜಿ ದೇವದಾಸಿ ತಾಯಂದಿರು ಹಾಗೂ ಅವರ ಮಕ್ಕಳು ಎದುರಿದುತ್ತಿರುವ ಸಮಸ್ಯಗಳಾದ ವಸತಿ ಯೊಜನೆ, ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಮಾಜಿ ದೇವದಾಸಿ ತಾಯಂದಿರ ಮಕ್ಕಳಿಗೆ ಸ್ವ- ಉದ್ಯೋಗ ಕೈಗೊಳ್ಳಲು ಎಸ್‍ಸಿ/ಎಸ್‍ಟಿ ನಿಗಮದಿಂದ ತಾಂತ್ರಿಕ ತರಬೇತಿ ಹಾಗೂ ಸಾಲ ಸೌಲಭ್ಯ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು.
ಆರೋಗ್ಯ ವಿಮೆ ಹೀಗೆ ಮಾಜಿ ದೇವದಾಸಿ ತಾಯಂದಿರ ಅಗತ್ಯತೆಗಳನ್ನು ಹಾಗೂ ಸಂವಿಧಾನ ಬದ್ಧಬಾಗಿ ಗೌರವಾನಿತ ಬದುಕು ಬದಕಲು ಅವರಿಗೆ ಯೋಜನೆಗಳನ್ನು ರೂಪಿಸಲು ಸುಮಾತು 10 ವರ್ಷದಿಂದ ರಾಜ್ಯ ಮಟ್ಟದ ವೇದಿಕೆಯಿಂದ ಮನವಿ ಸಲ್ಲಿಸುತ್ತ ಬೇಟಿಯಾಗುತ್ತ ಇದ್ದುದರ ಪರಿಣಾಮವಾಗಿ 2024-25 ನೇ ಸಾಲಿನ ಸರ್ಕಾರದ ಬಜೆಟ್‍ನಲ್ಲಿ ಮಾನ್ಯ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೆಜ್ ಘೋಷಣೆ ಮಾಡಿದ್ದಾರೆ. ಇದು ನಮ್ಮೆಲ್ಲರ ಹೋರಾಟದ ಗೇಲುವು ಆಗಿದೆ.
ಇದನ್ನೂ ಓದಿ: Nutrition campaign : ಸಮಾಜಕ್ಕೆ ಆರೋಗ್ಯವಂತ ಮಗು ಅವಶ್ಯ : ಶಶಿಧರ ಕುರೇರ
ಘೋಷಣೆಯಾದ ವಿಶೇಷ ಪ್ಯಾಕೇಜ್ ಅನುಷ್ಠಾನಗೊಂಡು ನಮ್ಮ ಕೈ ಸೇರುವವರೆಗೂ ನಾವು ಒಗ್ಗಾಟ್ಟಾಗಿ ಹೋರಾಟ ಮಾಡಲೇಬೆಕು. ಮಾಡಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ನಾವು ಎಲ್ಲರೂ ಸಂಘಟಿತರಾಗಿ ಗೌರವಿತ ಬದುಕು ಕಟ್ಟಿಕೊಳ್ಳಲು ಬದ್ಧರಾಗಿ ನಿರಂತರವಾಗಿ ಹೊರಾಟ ಮಾಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧಕ್ಷ್ಯ ಸ್ಥಾನ ವಹಿಸಿದ ಪಾ|| ಟಿಯೋಲ್ ಮಚಾದೊ ಅವರು ಮಾತನಾಡುತ್ತ ಮಾಜಿ ದೇವದಾಸಿ ತಾಯಂದಿರು Devadasi ಸರ್ಕಾರದ ವಿವಿದ ಯೋಜನೆಗಳನ್ನು ಪಡೆದುಕೊಂಡು ಸ್ವ-ಉದ್ಯೋಗ ಕೈಗೊಳ್ಳಬೇಕು. ಆರ್ಥಿಕವಾಗಿ ಸಬಲಿಕರಣವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು ಮಾಜಿ ದೇವದಾಸಿ ತಾಯಂದಿರ ಹೊರಾಟದ ಜೀವನದಲ್ಲಿ ಅವರು ಮುಂದಾಗಬೇಕು ಆ ಮೂ¯ಕ ನಿಮಗ ಸಾಮಾಜಿಕ ನ್ಯಾಯ ಕೊಡಿಸಲು ಜಾಗೃತರಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜೀವನ ಜ್ಯೋತಿ ಮಾಜಿ ದೇವದಾಸಿ ತಾಯಂದಿರ ಜಿಲ್ಲಾ ಒಕ್ಕೂಟ್ ಸಧಕ್ಷರಾದ ಶ್ರೀಮತಿ ರೇಣುಕಾ ಎಂಟಮಾನ. ಸಿಸ್ಟರ್|| ಜಯಾ ಸಿ|| ಸಿಬಿ ಉಪಸ್ಥಿತರಿದ್ದರು.
ಸಮಾವೇಶದ ನಂತರ ಎಲ್ಲ ಮಾಜಿ ದೇವದಾಸಿ ತಾಯಂದಿರು ತಮ್ಮ ಹಕ್ಕುಗಳಿಗಾಗಿ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಮನವಿ ಸ್ವಿಕರಿಸಿದಂತ ಮಾನ್ಯ ಜಿಲ್ಲಾದಿಕಾರಿಗಳು ಮಾಜಿ ದೇವದಾಸಿ ತಾಯಂದಿರೊಂದಿಗೆ ಚರ್ಚಿಸಿ ಸಮಾಲೋಚನೆ ಮಾಡಿದಾಗ, 6 ತಿಂಗಳಿಂದ ಪಿಂಚಣಿ (ಮಾಶಾಸನ) ಬರುತ್ತಿಲ್ಲ. ನಿವೇಶನಕ್ಕೆ ರಾಜೀವ ಗಾಂಧಿ ವಸತಿ ಯೋಜನೆಯಡಿಯಲ್ಲಿ ನಿವೇಶನ ಕಟ್ಟಡಕ್ಕೆ ಅನುದಾನ ಮಂಜೂರು ಆಗಿರುವ ಪ್ರತಿ ಬಂದು ಮೂರು ವರ್ಷ ಆದರೂ ಇನ್ನೂ ಹಣ ಖಾತೆಗೆ ಜಮಾ ಆಗಿಲ್ಲ. ಮದುವೆ ಸಹಾಯ ಧನ ಪಡೆಯಲು ಹಣ ಕೊಡಬೇಕು, ಸಾಲ ಯೋಜನೆ ಪಡೆಯಲು ಹಣ ಕೊಡಬೇಕು ಎಂದು ಎದುರಿಸುತ್ತಿರುವ ಸಮಸ್ಯೆಗಳನ್ನು ನೇರವಾಗಿ ಹೇಳಿದರು. ಈ ಎಲ್ಲ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾದಿಕಾರಿಗಳು ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳನ್ನು ಕರೆ ಸಭೆ ಮಾಡಿ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸುಮಾರು 300 ಕ್ಕೂ ಹೆಚ್ಚಿನ ದೇವದಾಸಿ ತಾಯಂದಿರು ಬಾಗಿಯಾಗಿದ್ದರು. ಜೀವನಜ್ಯೋತಿ ಮಾಜಿ ದೇವದಾಸಿ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳಾದ ಶ್ರೀಮತಿ ಮಲ್ಲಮ್ಮ ಚಲವಾದಿ ಇಂದ್ರವ್ವ ಕಟ್ಟಿಮನಿ, ರೇಣುಕಾ ಕಾಂಬಳೆ, ಚಂದಾಬಾಯಿ ಮಾದರ, ಶಾಂತಾಬಾಯಿ ಹತ್ತರಕಿಹಾಳ ಗಂಗವ್ವ ಕುದರಿ ಪದ್ಮವ್ವ ಮಾದರ, ರೇಷ್ಮಾ ಕಟ್ಟಿಮನಿ, ಮಿನಾಕ್ಷಿ ಸಿಂಗೆ, ಸುನೀತಾ ಮೊರೆ, ಅನಸೂಯಾ ತೊನಸ್ಯಾಳ, ಮುದ್ದುರಾಜ ಪರಶುರಾಮ ಪಂಕಜ ಬುವನೇಶ್ವರಿ, ಕಾವೇರಿ ಇತರರು ಭಾಗಿಯಾಗಿದ್ದರು.





