Wakp Bill-2024‌ : ವಕ್ಪ್ ಬಿಲ್-2024 ವಿರುದ್ಧ ಆಕ್ಷೇಪಣೆ ಸಲ್ಲಿಸಿ, ಜಂಟಿ ಪಾರ್ಲಿಮೆಂಟ್ ಸಮಿತಿಗೆ ಹಕ್ಕೊತ್ತಾಯ ಮಂಡಿಸಿದ ಎಸ್.ಡಿ.ಪಿ.ಐ

Wakp Bill-2024‌ image

ವಿಜಯಪುರ: ವಕ್ಪ್ ಆಸ್ತಿಗಳ ಸಂರಕ್ಷಣೆ ಹಾಗೂ ವಕ್ಪ್ ಸುಧಾರಣೆಗಳ ಹೆಸರಿನಲ್ಲಿ ಇತ್ತೀಚೆಗೆ ನರೇದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ವಕ್ಪ್ ಬಿಲ್ 2024 Wakp Bill-2024‌ ತಂದಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿರುತ್ತದೆ. ಮುಸ್ಲಿಂ ಸಮುದಾಯದ ಕ್ಷೇಮಾಭಿವೃದ್ಧಿಗೆ ಇರುವ ವಕ್ಪ್ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ ಬಿಜೆಪಿ ಪಕ್ಷದ ಹಿಡನ್ ಅಜೆಂಡವಾಗಿರುತ್ತದೆ.

ಹಾಲಿಯಿರುವ ವಕ್ಪ್ ಕಾಯ್ದೆಗೆ ಸರಿಸುಮಾರು 40 ತಿದ್ದುಪಡಿಗಳನ್ನು ಮಾಡುವ ಮೂಲಕ ಇಡೀ ವಕ್ಪ್ ಕಾಯ್ದೆಯನ್ನೆ ನಾಶಗೊಳಿಸಲು ಈ ವಕ್ಫ ಬಿಲ್ 2024 ತಂದಿದ್ದಾರೆ. ಇದು ಜಾತ್ಯಾತೀತ ಮೌಲ್ಯಗಳ ವಿರುದ್ಧವಾಗಿದೆ ಹಾಗೂ ತಾರತಾಮ್ಯಗಳೊಂದಿಗೆ ಕೂಡಿದೆ. ಆದುದರಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಈ ಬಿಲ್ ವಿರುದ್ಧ ತನ್ನ ವಿರೋಧಿಸಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಗೌರವಾನ್ವಿತ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು, ಜಂಟಿ ಸಂಸದೀಯ ಸಮಿತಿ, ನವದೆಹಲಿ ಅವರಿಗೆ ಎಸ್.ಡಿ.ಪಿ.ಐ. ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಇದನ್ನೂ ಓದಿ: Vishwakarma Jayanti : ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ
ಈ ಸಂದರ್ಭದಲ್ಲಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷರಾದ ಅತ್ತಾವುಲ್ಲಾ ದ್ರಾಕ್ಷಿ ಮಾತನಾಡಿ, ನ್ಯಾಯ ಮಂಡಳಿಯು ನ್ಯಾಯಾಂಗ ವ್ಯವಸ್ಥೆಯ ಸಂಸ್ಥೆಯಾಗಿದ್ದು, ಸದರಿ ವಕ್ಪ್ ಬಿಲ್ ಮಸೂದೆಯು ನ್ಯಾಯಾಂಗ ಮಂಡಳಿಯ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಇದು ಸಾಮಾನ್ಯ ಕಾನೂನು ನಿಯಮಕ್ಕೆ ವಿರುದ್ಧವಾಗಿದೆ ಮತ್ತು ಕಾನೂನು ಉಲ್ಲಂಘನೆಯಾಗಿದೆ. ಹಿಂದೂಗಳಲ್ಲದ ಬೌದ್ಧರು, ಜೈನರು ಮತ್ತು ಸಿಬ್ಬರು ಇವರಿಗೂ ಸಹ ದೇವಸ್ಥಾನದ ಆಡಳಿತದ ಸದಸ್ಯತ್ವವನ್ನು ನಿಷೇಧಿಸಿರುವುದರಿಂದ ಹಿಂದೂಗಳಿಗೆ ವಕ್ಪ್ ಮಂಡಳಿಯ ಸದಸ್ಯರಾಗಿ ಜವಾಬ್ದಾರಿ ನೀಡುವುದು ಸಂಪೂರ್ಣ ತಾರತಮ್ಯದಿಂದ ಕೂಡಿದೆ ಎಂದು ಆರೋಪಿಸಿದರು.

Wakp Bill-2024‌ ಎಸ್‍ಡಿಪಿಐ ನಗರ ಅಧ್ಯಕ್ಷ ಮುನಾಪ ಪಠಾಣ ಮಾತನಾಡಿ, ವಕ್ಫ್ಷನ ಅಧಿಕಾರ ವ್ಯಾಪ್ತಿಯಿಂದ ಶತ್ರುಗಳ ಆಸ್ತಿಗಳೆಂದು ಪರಿಗಣಿಸಿ ಸದರಿ ಆಸ್ತಿಗಳನ್ನು ವಕ್ಪ್ ನಿಯಂತ್ರಣದಿಂದ ಹೊರಗಿಡುವುದು ದೊಡ್ಡ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತದೆ ಎಂದರು.
ಇದನ್ನೂ ಓದಿ: Nutrition campaign : ಸಮಾಜಕ್ಕೆ ಆರೋಗ್ಯವಂತ ಮಗು ಅವಶ್ಯ : ಶಶಿಧರ ಕುರೇರ
ಈ ಸಂದರ್ಭದಲ್ಲಿ ಎಂ.ಐ.ಎಂ. ಜಿಲ್ಲಾಧ್ಯಕ್ಷರಾದ ಅಲ್ಲಾಭಕ್ಷ ಬಿಜಾಪುರ ಮಾತನಾಡಿ, ಭೂ ಪರಿವರ್ತನೆಗೆ ನೀಡಿರುವ 90 ದಿನಗಳ ಅವಧಿಯನ್ನು ವಕ್ಪ್ ಭೂಮಿಯ ಅಗಾಧತೆಯ ದೃಷ್ಟಿಕೋನದಲ್ಲಿ ಹೇಳುವುದಾದರೆ, ಅದು ತೀರಾ ಸಾಕಾಗದು. ನಾವು ಅರಿಕೆ ಮಾಡುವುದೇನೆಂದರೆ, ವಕ್ಪ್ ಕಾನೂನಿನ ಉದ್ದೇಶವು ವಕ್ಪ್ ಭೂಮಿಯ ರಕ್ಷಣೆ ಎಂದಾಗಿರುವಾಗ, ಈ ದುರುದ್ದೇಶಿತ ಮಸೂದೆಯು ಮುಸಲ್ಮಾನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಸಾಲು ಸಾಲು ಕಾನೂನುಗಳ ಸಂದೇಶವನ್ನು ಸಾರುತ್ತಿದೆ.
ಮುಸಲ್ಮಾನರು ಕೆಳ ದರ್ಜೆಯವರು ಎಂದು ಬಿಂಬಿಸಿ, ಅವರ ಮೇಲೆ ವಿವಿಧ ಆಸಮಾನ ಕಾನೂನುಗಳನ್ನು ಹೇರಲಾಗುತ್ತಿದೆ. ಈ ಬಗ್ಗೆ ಜಂಟಿ ಸಮಿತಿಯು ಸಕಾಲಿಕ ಮುಂಜಾಗರೂಕತೆಯನ್ನು ಪಾಲಿಸಿ, ಸಮಾಜದ ಹಾಗೂ ದೇಶದ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಿಸಾರ ಮಣಿಯಾರ, ಇಸಾಕ ಸೈಯ್ಯದ, ಉಮರ ಪಠಾಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು