ಬಾಗಲಕೋಟೆ: ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ 7151 ಪೈಕಿ 4819 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 24107 ಪೈಕಿ 22557 ಪ್ರಕರಣಗಳು ಸೇರಿ ಒಟ್ಟು 27376 ಪ್ರಕರಣಗಳನ್ನು ನಡೆದ ರಾಷ್ಟ್ರೀಯ Lok Adalat ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಅವರ ನೇತೃತ್ವದಲ್ಲಿ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಒಟ್ಟು 31258 ಪ್ರಕರಣಗಳ ಪೈಕಿ 27376 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು. ಒಟ್ಟು 25.11 ಕೋಟಿ ರೂ.ಗಳ ಈ ಎಲ್ಲ ಪ್ರಕರಣದ ಮೊತ್ತವಾಗಿದೆ.
ಜಿಲ್ಲಾ ನ್ಯಾಯಾಲಯದಲ್ಲಿರುವ ಬಾಕಿ ಇರುವ 1471 ಪೈಕಿ 1186 ಪ್ರಕರಣಗಳು ಇತ್ಯಥ್ರ್ಯಗೊಂಡರೆ, ಬೀಳಗಿ ನ್ಯಾಯಾಲಯದಲ್ಲಿ 130 ಪೈ 188, ಮುಧೋಳ ನ್ಯಾಯಾಲಯದಲ್ಲಿ 557 ಪೈಕಿ 456, ಬನಹಟ್ಟಿ ನ್ಯಾಯಾಲಯದಲ್ಲಿ 1364 ಪೈಕಿ 531, ಹುನಗುಂದ ನ್ಯಾಯಾಲಯದಲ್ಲಿ 478 ಪೈಕಿ 346,
ಇಳಕಲ್ಲ ನ್ಯಾಯಾಲಯದಲ್ಲಿ 392 ಪೈಕಿ 323, ಜಮಖಂಡಿ ನ್ಯಾಯಾಲಯದಲ್ಲಿ 2028 ಪೈಕಿ 1263 ಹಾಗೂ ಬಾದಾಮಿ ನ್ಯಾಯಾಲಯದಲ್ಲಿ 731 ಪೈಕಿ 626 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಬಾಕಿ ಇರುವ ಪ್ರಕರಣಗಳಲ್ಲಿ ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದ 770 ಪ್ರಕರಣಗಳ ಪೈಕಿ 683 ಇತ್ಯರ್ಥ ಪಡಿಸಲಾಯಿತು. ಪೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದ 3463 ಪೈಕಿ 3430 ಪ್ರಕರಣಗಳು ಇತ್ಯರ್ಥಗೊಂಡು 3.59 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಯಿತು. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ 1689 ಪೈಕಿ 124 ಇತ್ಯರ್ಥಗೊಂಡು 1.75 ಕೋಟಿಗೆ ನಿಗದಿಪಡಿಸಲಾಯಿತು.
ಇದನ್ನೂ ಓದಿ: Nutrition campaign : ಸಮಾಜಕ್ಕೆ ಆರೋಗ್ಯವಂತ ಮಗು ಅವಶ್ಯ : ಶಶಿಧರ ಕುರೇರ
ವಿದ್ಯುತ್‍ಗೆ ಸಂಬಂಧಿಸಿದ 154 ಪೈಕಿ 154 ಇತ್ಯರ್ಥಗೊಂಡು 3.39 ಲಕ್ಷಕ್ಕೆ ನಿಗದಿಯಾದರೆ, ಸಂಚಾರಿ ನಿಯಮ ಉಲ್ಲಂಘನೆ ಸಂಬಂಧಿಸಿದ 7812 ಪೈಕಿ 7812 ಪ್ರಕರಣ ಇತ್ಯರ್ಥಗೊಂಡು 25.99 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಯಿತು. ಆಸ್ತಿ ತೆರಿಗೆಗೆ ಸಂಬಂಧಿಸಿದ 14064 ಪೈಕಿ 14064 ಇತ್ಯರ್ಥಗೊಂಡು 3.53 ಕೋಟಿ ರೂ.ಗಳಿಗೆ ಸೆಟೆಲ್‍ಮೆಂಟ್ ಮಾಡಲಾಯಿತು.
ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಒಟ್ಟು 10 ಜೋಡಿಗಳನ್ನು ರಾಜಿ ಸಂಧಾನದ ಮೂಲಕ ಒಂದು ಮಾಡಲಾಯಿತು. ಒಂದಾದ ಜೋಡಿಗಳು ಪರಸ್ಪರ ಹಾರಗಳನ್ನು ಬದಲಾಯಿಸುವ ಮೂಲಕ ಸಿಹಿ ಹಂಚಲಾಯಿತು.
Lok Adalat ಲೋಕ ಅದಾಲತ್‍ನಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಎಸ್.ಬಿ.ರೆಹಮಾನ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎ.ಮೂಲಿಮನಿ, ಜಿಲ್ಲಾ ಕುಟುಂಬ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ನ್ಯಾಯಾಧೀಶರು ಹಾಗೂ ಸಿಜೆಎಂ ಹೇಮಾ ಪಸ್ತಾಪೂರ,
1ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶ ಮಹೇಶ ಪಾಟೀಲ, 2ನೇ ಹೆಚ್ಚುವರಿ ಹಿರಿಯ ನ್ಯಾಯಾಧೀಶ ರಾಜಶೇಖರ ತಿಳಗಂಜಿ, ಪ್ರಧಾನ ದಿವಾಣಿ ನ್ಯಾಯಾಧೀಶ ಮುರಗೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಎಂ.ಎಚ್.ಕಡಕೋಳ ಇದ್ದರು.
ಜಮೀನು ಹಂಚಿಕೆ ವಿವಾದ ಇತ್ಯರ್ಥ
ನಾಗಸಂಪಿಗೆ ಗ್ರಾಮದಲ್ಲಿರುವ ಒಟ್ಟು 80 ಎಕರೆ ಜಮೀನು ಹಂಚಿಕೆಗೆ ಸಂಬಂಧಿಸಿದಂತೆ, ಬಾಗಲಕೋಟೆ ಎ.ಎಸ್.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಭೀಮಪ್ಪ ರಾಮಪ್ಪ ಮೇಟಿ ಹಾಗೂ ಇತರರ ವಿರುದ್ದ ಶಿವನಪ್ಪ ಯಲ್ಲಪ್ಪ ಮೇಟಿ (90 ವರ್ಷ) ಹಾಗೂ ಇತರರು ದಾವೆ ಹೂಡಿದ್ದರು.
ಸದರಿ ಪ್ರಕರಣದಲ್ಲಿ ವಾದಿ ಪ್ರದಿವಾದಿಗಳು ಒಂದೇ ಕುಟುಂಬದ ಸದಸ್ಯರಾಗಿದ್ದರು. 2ನೇ ಹೆಚ್ಚುವರಿ ನ್ಯಾಯಾಧೀಶ ಹಾಗೂ ಪಿ.ಎಸ್.ಮಗಜಿ ಮನವಲಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು. ಜನತಾ ನ್ಯಾಯಾಲಯದಲ್ಲಿ ಬೇಗನೇ ಪ್ರಕರಣ ಇತ್ಯರ್ಥಗೊಂಡಿದ್ದಕ್ಕೆ ಶಿವನಪ್ಪ ಯಲ್ಲಪ್ಪ ಮೇಟಿ ಖುಷಿಪಟ್ಟು ಸಂತಸ ವ್ಯಕ್ತಪಡಿಸಿದರು.