ವಿಜಯಪುರ: ಮದುವೆ ವಿಷಯವಾಗಿ ಕೊಲೆ; ಜಲನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ

ವಿಜಯಪುರ ಮೇ. 31: ಗುಮ್ಮಟನಗರಿಯಲ್ಲಿ ರಾತ್ರಿ ವೇಳೆ ಅಳಿಯಂದಿರೇ ಮಾವನನ್ನು ಬೀಕರವಾಗಿ ಕೊಲೆ ಮಾಡಿದ ಘಟನೆ ವಿಜಯಪುರ ಜಲನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಸ್ಮಾನ್ ಪಾಷಾ ಇನಾಂದಾರ (71) ಕೊಲೆಗೀಡಾದ ವ್ಯಕ್ತಿ. ಜಿಲಾನಿಪಾಷಾ ಜಾಗೀರದರ (45), ಖಾದ್ರಿ ಜಾಗೀರದಾರ (38), ನದೀಂ ಜಾಗೀರದಾರ (40) ಕೊಲೆ ಮಾಡಿದ ಆರೋಪಿಗಳು. ಕೊಲೆಗೀಡಾದ ವ್ಯಕ್ತಿಯ ಅಕ್ಕನ ಮಕ್ಕಳು. ಜಮೀಲ್‍ನ ಮದುವೆಯ ವಿಷಯವಾಗಿ ಇವರ ಮತ್ತು ಆರೋಪಿತರ ನಡುವೆ ಜಗಳ ಇದ್ದು, ಪಿರ್ಯಾದಿದಾರರ ತಂದೆಯವರು ಆರೋಪಿತನ ಪರವಾಗಿ ವಹಿಸಿಕೊಂಡು ಮಾತನಾಡುತಿದ್ದುದ್ದರಿಂದ ಅವರ […]

ಆತ್ಮ ನಿರ್ಭರ ಯೋಜನೆಯಡಿ ಮೇ, ಜೂನ್ ತಿಂಗಳುಗಳಿಗೆ ಅಕ್ಕಿ ಮತ್ತು ಕಡಲೆಕಾಳು ವಿತರಣೆ

ವಿಜಯಪುರ ಮೇ. 29: ಕೇಂದ್ರ ಸರ್ಕಾರವು ಕೋವಿಡ್-19 ಹಿನ್ನೆಲೆಯಲ್ಲಿ ಪಡಿತರ ಚೀಟಿ ಹೊಂದದೆ ಇರುವ ಕಡು ಬಡವರು ಹಾಗೂ ಬೇರೆ ರಾಜ್ಯದಿಂದ ವಲಸೆ ಬಂದಿರುವ ಕಾರ್ಮಿಕರಲ್ಲಿ ಪಡಿತರ ಚೀಟಿಯನ್ನು ಹೊಂದದೇ ಇರುವವರಿಗೆ ಆತ್ಮ ನಿರ್ಭರ ಯೋಜನೆಯಡಿ ಮೇ ಹಾಗೂ ಜೂನ್ ಎರಡು ತಿಂಗಳುಗಳಿಗೆ ಮಾತ್ರ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಹಾಗೂ ಕುಟುಂಬಕ್ಕೆ 2 ಕೆ.ಜಿ ಕಡಲೆ ಕಾಳು ವಿತರಣೆ ಮಾಡಲು ಸರ್ಕಾರವು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಅದರಂತೆ ಈ […]

ವಿಜಯಪುರ: ಕೊರೋನಾ ಅಟ್ಟಹಾಸ ಮತ್ತಿಬ್ಬರಲ್ಲಿ ಸೋಂಕು ದೃಢ: 6 ಜನ ಗುಣಮುಖ

ವಿಜಯಪುರ ಮೇ. 28 : ಜಿಲ್ಲೆಯಲ್ಲಿ ಇಂದು ಸಂಜೆಯವರೆಗೆ ಮತ್ತೆ ಇಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ರೋಗಿ ಸಂಖ್ಯೆ : 2420 (32 ವರ್ಷದ ಪುರುಷ) ಹಾಗೂ ರೋಗಿ ಸಂಖ್ಯೆ : 2421 (23 ವರ್ಷದ ಪುರುಷ)ಗೆ ಸೋಂಕು ತಗುಲಿದ್ದು, ಇವರಿಗೆ ಮಹಾರಾಷ್ಟ್ರದಿಂದ ಸೋಂಕು ತಗುಲಿರುವದು ಧೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ .ಎಸ್ ಪಾಟೀಲ್ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 81 ಕೋವಿಡ್ ಪಾಸಿಟಿವ್ ರೋಗಿಗಳಿದ್ದು, ಈ ಪೈಕಿ 54 ಜನರು ಗುಣಮುಖರಾಗಿದ್ದು, 22 ಸಕ್ರಿಯ […]

ವಿಜಯಪುರ: ಕೋಟಿವೃಕ್ಷ ಅಭಿಯಾನ

ವಿಜಯಪುರ ಮೇ.28 : ಜೂನ್ ತಿಂಗಳಿಂದ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಕೋಟಿ ವೃಕ್ಷ ಅಭಿಯಾನ ಸಂಪೂರ್ಣ ಸಫಲತೆ ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ 1 ಕೋಟಿ ಸಸಿಗಳನ್ನು ಬೆಳೆಸುವ ಗುರಿಯಲ್ಲಿ ಬಾಕಿ ಉಳಿದ 25 ಲಕ್ಷ ಸಸಿಗಳನ್ನು ಬೆಳೆಸುವ ಮೂಲಕ ಈ ವರ್ಷದ ಗುರಿ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು. ಕೋಟಿ ವೃಕ್ಷ ಅಭಿಯಾನದ ಪೂರ್ವ ಸಿದ್ಧತೆ ಕುರಿತು ಸಭೆ ನಡೆಸಿದ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ […]

ಮಾಜಿ ಮುಖ್ಯಮಂತ್ರಿ ಜಯಲಲಿತಾರ 900 ರೂ. ಕೋಟಿ ಆಸ್ತಿ ಯಾರ ಪಾಲಿಗೆ!

ಚನ್ನೈ ಮೇ. 28: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾರ 900 ರೂ. ಕೋಟಿ ಮೌಲ್ಯದ ಆಸ್ತಿಗೆ ಅವರ ಬಂಧುಗಳಾದ ಸೋದರ ಸೊಸೆ ಜೆ.ದೀಪಾ ಹಾಗೂ ಸೋದರ ಅಳಿಯ  ಜೆ.ದೀಪಕ್ ‘ಕಾನೂನುಬದ್ಧ ವಾರಸುದಾರರು’ ಎಂದು ಮದ್ರಾಸ್ ಹೈಕೋರ್ಟ್ ಪರಿಗಣಿಸಿದೆ. ಜಯಾಲಲಿತಾರ  ಸಾವಿನ ನಂತರ ಅವರ ಆಸ್ತಿಯನ್ನು ಗೆಳತಿ ಶಶಿಕಲಾ ಅನುಭವಿಸುತ್ತಿದ್ದರು. ಇದನ್ನು ಪ್ರಶ್ನಿಸಿ ಜಯಾರ ಸೋದರ ಅಳಿಯ ಹೈಕೋರ್ಟ್ ಮೇಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಕಿರುಬಾಕರನ್ ಹಾಗೂ ನ್ಯಾಯಮೂರ್ತಿ ಅಬ್ದುಲ್ ಖೂದ್ದಸ್ ಅವರ ಪೀಠ […]

ವಿಜಯಪುರ: ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲೂಕು ಕೇಂದ್ರಗಳಿಗೆ ಬಸ್ ಸೌಕರ್ಯ

ವಿಜಯಪುರ ಮೇ.27 : ವಿಜಯಪುರ ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲೂಕಾ ಕೇಂದ್ರಗಳಿಗೆ ಸಾರಿಗೆ ಸೌಕರ್ಯವನ್ನು ಕಲ್ಪಿಸಲಾಗಿದ್ದು, ಮುಂಜಾನೆ 7.00 ಗಂಟೆಯಿಂದ ಬಸ್‍ಗಳು ಕಾರ್ಯಾಚರಣೆಗೊಳ್ಳುತ್ತವೆ ಹಾಗೂ ಪ್ರಯಾಣಿಕರ ಜನದಟ್ಟಣೆಗನುಗುಣವಾಗಿ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಹಾಗೂ ಎಲ್ಲಾ ತಾಲೂಕಾ ಕೇಂದ್ರಗಳಿಂದ ವಿಜಯಪುರ ಜಿಲ್ಲಾ ಕೇಂದ್ರಕ್ಕೂ ಮುಂಜಾನೆ 7.00 ಗಂಟೆಯಿಂದ ಬಸ್ಸಿನ ಸೌಕರ್ಯ ಒದಗಿಸಲಾಗಿರುತ್ತದೆ ಎಂದು ವಿಜಯಪುರ, ಈಕರಸಾ ಸಂಸ್ಥೆ, ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಅದರಂತೆ ಸಾಯಂಕಾಲ 7.00 ಗಂಟೆಯೊಳಗೆ ನಿಗದಿತ ಸ್ಥಳ ತಲುಪುವಂತೆ, ಜಿಲ್ಲಾ ಕೇಂದ್ರದಿಂದ ತಾಲೂಕಾ ಕೇಂದ್ರಕ್ಕೆ, ತಾಲೂಕಾ […]

ವಿಜಯಪುರ: ಕೊರೋನಾ ವೈರಸ್ ಜೊತೆ ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್‍ಗುನ್ಯಾ ರೋಗಗಳು ಹರಡದಂತೆ ಕ್ರಮ

ವಿಜಯಪುರ ಮೇ. 26: ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣದ ಜೊತೆಗೆ ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್‍ಗುನ್ಯಾದಂತಹ ರೋಗಗಳ ನಿವಾರಣೆ ಹಾಗೂ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು. ಡೆಂಗ್ಯೂ, ಮಲೇರಿಯಾ ಜಿಲ್ಲಾಮಟ್ಟದ ಅಂತರ್ ಇಲಾಖೆಗಳ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಡೆಂಗ್ಯೂ ಹಾಗೂ ಮಲೇರಿಯಾ ನಿಯಂತ್ರಣಕ್ಕೆ ಸಾರ್ವಜನಿಕರಿಗೆ ತಿಳಿಹೇಳುವ ಕಾರ್ಯವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಮುಂದಿನ ಹಂತದಲ್ಲಿ ಮನೆಮನೆಗೆ ತಿಳಿಹೇಳುವುದರ ಜೊತೆಗೆ ಆಶಾ ಕಾರ್ಯಕರ್ತೆಯರಿಂದ ಸರ್ವೇ ಕಾರ್ಯ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. […]

ವಿಜಯಪುರ: ಮುಂದುವರಿದ ಕೊರೋನಾ ಅಟ್ಟಹಾಸ; ಇಂದು ಐವರಲ್ಲಿ ಪಾಸಿಟಿವ್

ವಿಜಯಪುರ ಮೇ.26: ಮಹಾರಾಷ್ಟ್ರದಿಂದ ಆಗಮಿಸಿದ್ದ 5 ಜನರಲ್ಲಿ ಕೊರೋನಾ ಪಾಸಿಟಿವ್ ದೃಡಪಟ್ಟಿದ್ದು, ಜಿಲ್ಲೆಗೆ ಆಮಿಸಿರುವ 18 ವರ್ಷದ ವಯೋಮಾನದ ರೋಗಿ ಸಂಖ್ಯೆ 2203 (ಯುವಕ), 34 ವಯೋಮಾನದ ರೋಗಿಸಂಖ್ಯೆ 2204 (ಪುರುಷ), 30 ವರ್ಷ ವಯೋಮಾನದ ರೋಗಿ ಸಂಖ್ಯೆ 2205 (ಪುರುಷ), 60 ವರ್ಷ ವಯೋಮಾನದ ರೋಗಿಸಂಖ್ಯೆ 2206 (ವೃದ್ಧ), 17 ವರ್ಷ ವಯೋಮಾನದ ರೋಗಿಸಂಖ್ಯೆ 2207 (ಯುವಕ) ಈ 5 ಪಾಸಿಟಿವ್ ರೋಗಿಗಳ ಪೈಕಿ ನಾಲ್ವರು ಮಹಾರಾಷ್ಟ್ರದ ಮುಂಬೈಯಿಂದ ಆಮಿಸಿದ್ದು, ಓರ್ವ ಮಹಾರಾಷ್ಟ್ರದ ಸೊಲ್ಲಾಪೂರದಿಂದ ಆಗಮಿಸಿದ್ದಾರೆ. […]

ಐದನೇ ಹಂತದ ಲಾಕ್ ಡೌನ್ ಜಾರಿಯಾಗುತ್ತಾ ?

ದೇಶದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಕ್ಕಳು, ಹಿರಿಯರು, ವಯಸ್ಕರು ಹೀಗೆ ಯಾರನ್ನೂ ಬಿಡದೆ ತನ್ನ ಸುಳಿಗೆ ಸೆಳೆಯುತ್ತಿದೆ ಕೊರೋನಾ ಎಂಬ ಮಹಾ ವೈರಸ್. ಈ ವೈರಸನ್ನು ಕಟ್ಟಿಹಾಕಲು ಇಡೀ ದೇಶವನ್ನೇ ನಾಲ್ಕು ಸಲ ಲಾಕ್ ಡೌನ್ ಮಾಡಿದರೂ ವೈರಸ್ ನಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುವಂತಾಗಿದೆ ದೇಶದ ಜನ. ಮೇ 31 ಕ್ಕೆ ನಾಲ್ಕನೇ ಲಾಕ್ ಡೌನ್ ಅಂತ್ಯವಾಗಬೇಕಿದೆ. ಲಾಕ್ ಡೌನ್ ಸಮಯದಲ್ಲಿ ಒಂದು ಹಂತಕ್ಕೆ ಇದ್ದ ಸೋಂಕಿತರ ಸಂಖ್ಯೆ, ಲಾಕ್ ಡೌನ್ ಸ್ವಲ್ಪ ಸಡಿಲಿಕೆಯಾದ […]

ವಿಜಯಪುರ: ಈವರೆಗೆ 70 ಪಾಸಿಟಿವ್ ಪ್ರಕರಣಗಳು; ಇಂದು ಇಬ್ಬರು ಗುಣಮುಖ

ವಿಜಯಪುರ ಮೇ. 25: ಕೋವಿಡ್-19 ದಿಂದ ಗುಣಮುಖರಾದ ಇಬ್ಬರು ಇಂದು ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ,ಈವರೆಗೆ ಒಟ್ಟು 44 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ್ ಅವರು ತಿಳಿಸಿದ್ದಾರೆ. ಇಂದು ರೋಗಿ ಸಂಖ್ಯೆ 594(22 ವರ್ಷದ ಯುವ ಕ) ಹಾಗೂ ರೋಗಿ ಸಂಖ್ಯೆ 856(20 ವರ್ಷದ ಯುವತಿ) ಗುಣಮುಖರಾಗಿ,ಬಿಡುಗಡೆ ಹೊಂದಿದ್ದು, ಅದರಂತೆ ಸಧ್ಯ ಆಸ್ಪತ್ರೆಯಲ್ಲಿ 22 ಸಕ್ರಿಯ ಕೋವಿಡ್-19 ರೋಗಿಗಳಿದ್ದು, ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಂದು ಒಬ್ಬರಿಗೆ […]