ಟಿಕ್ ಟಾಕ್ ಖಾತೆ ಕ್ಲೋಜ್ ಮಾಡಿ ಚೀನಾದ ವಿರುದ್ದ ಆಕ್ರೋಶ

ವಿಜಯಪುರ ಜೂನ.19: ಟಿಕ್ ಟಾಕ್ ಖಾತೆ ಕ್ಲೋಜ್ ಮಾಡಿ ಚೀನಾದ ವಿರುದ್ದ ಆಕ್ರೋಶ ಹೊರಹಾಕಿದ ಗುಮ್ಮಟನಗರಿ ಗಾನಯೋಗಿ ಸಂಘದ ಟಿಕ್ ಟಾಕ್ ಕಲಾವಿದರು. ಕಾಲ್ಕೆರೆದು ಜಗಳಕ್ಕೆ ನಿಂತು ಭಾರತದ ವಿರುದ್ಧ ಮಸಲತ್ತು ನಡೆಸುತ್ತಿರುವ ಡ್ರ್ಯಾಗನ್ ದೇಶ ಚೀನಾದ ವಿರುದ್ಧ ಆ ದೇಶದ ಉತ್ಪನ್ನಗಳು ಹಾಗೂ ಆ್ಯಪ್ ಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚೀನಾ ವಿರುದ್ಧದ ಜನಸಾಮಾನ್ಯರ ಆಕ್ರೋಶ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತಿದ್ದು, ದಿನೇ ದಿನೇ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಚೀನಾ ಆ್ಯಪ್ ಬ್ಯಾನ್ ಮಾಡಿ ಎನ್ನುವ […]

ಯೋಗಾ ಆ್ಯಟ್ ಹೋಮ್, ಯೋಗಾ ವಿಥ್ ಫ್ಯಾಮೀಲಿ

ವಿಜಯಪುರ ಜೂನ್ 19: ಕೊರೊನಾ ಹಾವಳಿಯ ಹಿನ್ನಲೆಯಲ್ಲಿ ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ನಿರ್ದೇಶನದಂತೆ ಇದೇ ಜೂನ 21 ರಂದು ಆಚರಿಸಲಾಗುವ ವಿಶ್ವ ಯೋಗ ದಿನವನ್ನು ಮನೆಯಲ್ಲಿಯೇ ಸಕ್ರೀಯವಾಗಿ ಭಾಗವಹಿಸಿ ಆಚರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜೂನ 21 ರಂದು ಆಚರಿಸಲಾಗುವ ವಿಶ್ವ ಯೋಗ ದಿನವನ್ನು ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ‘’ಮನೆಯಲ್ಲೇ ಯೋಗ, ಕುಟುಂಬದೊಂದಿಗೆ ಯೋಗ’’(ಯೋಗಾ ಆ್ಯಟ್ ಹೋಮ್, ಯೋಗಾ ವಿಥ್ ಫ್ಯಾಮೀಲಿ)’’ ಎನ್ನುವ […]

ವಿಜಯಪುರ: ಮಾಸ್ಕ್ ದಿನಾಚರಣೆ

ವಿಜಯಪುರ ಜೂನ್ 18: ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಸಾರ್ವಜನಿಕರಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡುವ ದೆಸೆಯಲ್ಲಿ ಇಂದು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಾಸ್ಕ್ ದಿನಾಚರಣೆಯನ್ನು ಆಚರಿಸಲಾಯಿತು. ಇಂದು ನಗರದ ಗಾಂಧಿ ವೃತ್ತದಲ್ಲಿ ಮಾಸ್ಕ್ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ಮತ್ತು ಕರಪತ್ರ ಹಂಚುವ ಕಾರ್ಯಕ್ಕೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸೋಪಿನಿಂದ ಕೈತೊಳೆಯುವ ಕುರಿತಂತೆ ಜಾಥಾ ಮೂಲಕ […]

ವಿಜಯಪುರ: ಕಂಟೇನ್ಮೆಂಟ್ ಜೋನ್ ನಲ್ಲಿ ಮತ್ತೆ ಕೊರೋನಾ ಅಟ್ಟಹಾಸ;

ವಿಜಯಪುರ ಜೂ.13 : ಇಂದು ಮತ್ತೆ 6 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 228 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 70 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ  ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ 6584 (50 ವರ್ಷದ ಪುರುಷ) ರೋಗಿ ಸಂಖ್ಯೆ 6585 (21 ವರ್ಷದ ಪುರುಷ) ಇವರಿಗೆ ಮಹಾರಾಷ್ಟ್ರ ಸಂಪರ್ಕದಿಂದ, ರೋಗಿ ಸಂಖ್ಯೆ 6586 (46 ವರ್ಷದ ಪುರುಷ) ರೋಗಿ […]

ವಿಜಯಪುರ: ಪೊಲೀಸ್ ಸಿಬ್ಬಂದಿಗೆ ಕರೋನಾ ಪಾಸಿಟಿವ್; ಪೊಲೀಸ್ ಠಾಣೆ ಸ್ಥಳಾಂತರ

ವಿಜಯಪುರ ಜೂ.13: ವಿಜಯಪುರ ಶಹರದ ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಂಟೇನ್‍ಮೆಂಟ್ ಝೋನ್ ಬಂದೋಬಸ್ತ ಕುರಿತು ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಜನರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇಲ್ಲಿಯವರೆಗೆ ಕಂಟೇನ್‍ಮೆಂಟ್ ಝೋನ್, ಚೆಕ್‍ಪೋಸ್ಟ್, ನಿಗದಿತ ಆಸ್ಪತ್ರೆ ಹಾಗೂ ಇತರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಪೈಕಿ ಒಟ್ಟು 217 ಜನರ ಸ್ವಾಬ್ ಸ್ಯಾಂಪಲ್ ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು, ಅದರಲ್ಲಿ ಇಂದು ದಿನಾಂಕ: 13.06.2020 ರಂದು ಜಲನಗರ ಪೊಲೀಸ್ ಠಾಣೆಯ ಸಿಬ್ಬಂದಿ P-6586 […]

ವಿಜಯಪುರ: ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ

ವಿಜಯಪುರ ಜೂ.12: ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಇಂದು ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತ ಸಂಚಾರಿ ವಾಹನ ಜಾಥಾಕ್ಕೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಎನ್ ನಾಯಕ ಅವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ […]

ವಿಜಯಪುರ: ಸೋಂಕಿತರ ಸಂಖ್ಯೆ 221 ಕ್ಕೆ ಏರಿಕೆ : ಇಂದು 16 ಜನ ಗುಣಮುಖ ರೋಗಿಗಳ ಬಿಡುಗಡೆ

ವಿಜಯಪುರ ಜೂ.11: ಜಿಲ್ಲೆಯಲ್ಲಿ ಈವರೆಗೆ ಒಟ್ಟು 221 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 68 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ಮತ್ತೆ 4 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 16 ಗುಣಮುಖ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ 6114 (35 ವರ್ಷದ ಪುರುಷ) ರೋಗಿ ಸಂಖ್ಯೆ 6115 (13 ವರ್ಷದ ಬಾಲಕಿ), ರೋಗಿ ಸಂಖ್ಯೆ 6116 (7 ವರ್ಷದ ಬಾಲಕ), […]

ಐದನೇ ತರಗತಿಯವರೆಗೆ ಮಾತ್ರ ಆನ್ ಲೈನ್ ಶಿಕ್ಷಣ ರದ್ದು: ಸಚಿವ ಸುರೇಶ ಕುಮಾರ

ಬೆಂಗಳೂರು ಜೂ.11. ಏಳನೇ ತರಗತಿಯವರೆಗಿನ ಆನ್‍ಲೈನ ಶಿಕ್ಷಣವನ್ನು ನೀಡುವಂತಿಲ್ಲ ಎಂದು ಸರಕಾರ ತಿರ್ಮಾನಿಸಿದೆ ಎಂಬಂತಹ ಸುದ್ದಿಯನ್ನು ಶಿಕ್ಷಣ ಸಚಿವ ಸುರೇಶ ಕುಮಾರ ತಳ್ಳಿಹಾಕಿದ್ದಾರೆ. ನರ್ಸರಿ ಮತ್ತು ಒಂದರಿಂದ ಐದನೇ ತರಗತಿಯವರೆಗೆ ಮಾತ್ರ ಆನ್‍ಲೈನ್ ತರಗತಿಗಳನ್ನು ನಿಷೇಧಿಸಲು ಸರಕಾರ ನಿರ್ಧರಿಸಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಏಳನೇ ತರಗತಿವರೆಗೆ ಆನ್‍ಲೈನ್ ಕ್ಲಾಸಗಳಿಗೆ ಅವಕಾಶ ನೀಡಬಾರದು ಎಂದು ಕೆಲ ಸಂಪುಟ ಸಚಿವರ ಸಲಹೆಯಾಗಿದೆ ಎಂದು ತಮ್ಮ ಟ್ವೀಟ್‍ನಲ್ಲಿ ಸಚಿವ ಸುರೇಶಕುಮಾರ ಸ್ಪಷ್ಟಪಡಿಸಿದ್ದಾರೆ. Karnataka Govt has decided to stop […]

ವಿಜಯಪುರ: ತುಟ್ಟಿಭತ್ಯೆ ಹೆಚ್ಚಳ ದರವನ್ನು ಸ್ಥಗಿತಗೊಳಿಸಿರುವ ಆದೇಶ ಹಿಂಪಡೆಯಬೇಕು

ವಿಜಯಪುರ ಜೂ.05: ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 2020ರ ಜನವರಿಯಿಂದ 2021ರ ಜೂನ ವರೆಗೆ ತುಟ್ಟಿಭತ್ಯೆ ಹೆಚ್ಚಳ ದರವನ್ನು ಸ್ಥಗಿತಗೊಳಿಸಿರುವ ಆದೇಶ ಹಿಂಪಡೆಯುವುದು, ಗಳಿಕೆ ರಜೆ ನಗದೀಕರಣ ರದ್ದತಿ ಆದೇಶ ಹಿಪಡೆಯುವುದು, ನೌಕರ- ವಿರೋದಿ ಅಂಶಗಳಿರುವ ಸಿ.ಸಿ.ಎ. ತಿದ್ದುಪಡಿ ಪ್ರಸ್ತಾವನೆ ಕೈಬಿಡುವುದು, ಇಲಾಖಾ ಹುದ್ದೆಗಳ ರದ್ದು ಪ್ರಸ್ತಾವನೆ ಕೈ ಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕಪ್ಪು ಬ್ಯಾಡ್ಜ್ ಹಾಕಿಕೊಂಡು ಗುರುವಾರ ಅಖಿಲ ಕರ್ನಾಟಕ ರಾಜ್ಯ ಸಕಾರಿ ನೌಕರರ ಒಕ್ಕೂಟ (ರಿ) ಜಿಲ್ಲಾ ಶಾಖೆ […]

ವಿಜಯಪುರ: ಆರ್ಕೇಸ್ಟ್ರಾ ಕಲಾವಿದರಿಗೂ ಆಹಾರ ಕೀಟ್ ನೀಡಿ; ಜಿಲ್ಲಾಧಿಕಾರಿಗಳಿಗೆ ಮನವಿ

ವಿಜಯಪುರ ಜೂ.05: ಲಾಕ್ ಡೌನ್ ಹಿನ್ನೆಲೆ ಜಿಲ್ಲೆಯ ಕಲಾವಿದರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆರ್ಕೇಸ್ಟ್ರಾ ಕಲಾವಿದರಿಗೆ ಸರ್ಕಾರದಿಂದ ಒಂದು ತಿಂಗಳಿಗಾಗುವಷ್ಟು ಆಹಾರ ಕೀಟ್ ವಿತರಣೆ ಮಾಡಬೇಕೆಂದು ಉತ್ತರ ಕರ್ನಾಟಕ ಕಲಾವಿದರ ಕಲ್ಯಾಣ ವೇದಿಕೆಯಿಂದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ, ಸುಮಾರು 60 ದಿವಸದ ಲಾಕಡೌನ ಆದ ಕಾರಣ ಕಾರ್ಯಕ್ರಮಗಳು ಇಲ್ಲದೆ ಆರ್ಕೆಸ್ಟ್ರಾ ಕಲಾವಿದರು ಯಾವುದೇ ಕಾರ್ಯಕ್ರಮವಿಲ್ಲದೆ ಜಾತ್ರೆ ಕಾರ್ಯಕ್ರಮಗಳು, ಮದುವೆಯ ಕಾರ್ಯಕ್ರಮಗಳು ಯಾವುದು ನಡೆಯುತ್ತಿಲ್ಲ. ಕಲಾವಿದರಿಗೆ ಕಲೆಯನ್ನು […]