ಕೊರೋನಾದಿಂದ ಧೈರ್ಯವಾಗಿರಿ : ಡಾ. ಹರ್ಷವರ್ಧನ್

ಹೊಸದಿಲ್ಲಿ ಮೇ.23: ಕೊರೋನಾ ಮಹಾಮಾರಿ ವಿಶ್ವದಲ್ಲಿ ತನ್ನ ಅಟ್ಟಹಾಸ ಮೇರೆಯುತ್ತಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಸೋಂಕು ತಗುಲಿದರು ಗುಣಮುಖರಾಗುವವರ ಪ್ರಮಾಣ ಹೆಚ್ಚಿದೆ. ಸೋಂಕು ತಗುಲಿದರು ಭಯಪಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ದೇಶದ ಜನತೆಗೆ ಧೈರ್ಯ ತುಂಬಿದ್ದಾರೆ. ಜಗತ್ತಿನಾದ್ಯಂತ ಕೊರೋನಾ ಪ್ರಭಾವ ಇದೆ. ಭಾರತದಲ್ಲೂ ಈ ಸಾಂಕ್ರಾಮಿಕ ರೋಗ ಇದೆ. ದೇಶದ ಜನತೆ ಆತಂಕ ಪಡಬೇಕಾಗಿಲ್ಲ. ಕೇಂದ್ರ ಸರಕಾರ ದೇಶದ ಜನತೆಗೆ ಧೈರ್ಯ ತುಂಬುತ್ತ ಬಂದಿದೆ. ಆದರೆ ಧೈರ್ಯವಾಗಿರಿ […]

Sunday Lockdown ಏನಿರುತ್ತೆ?, ಏನಿರಲ್ಲ?

ಬೆಂಗಳೂರು. ಮೇ. 22: ಕೊರೋನಾ ವೈರಸ್ ತಡೆಗಟ್ಟುವಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಹಲವಾರು ನಿಯಮಗಳನ್ನು ಜಾರಿಗೆ ತಂದರು ವೈರಸ್ ಪ್ರಭಾವ ಮಾತ್ರ ನಿಲ್ಲುತ್ತಿಲ್ಲ. ದಿನೇ ದಿನೆ ತನ್ನ ಅಟ್ಟಹಾಸ ಮುಂದುವರೆಸುತ್ತಿದೆ. ದೇಶದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗೆ ಅನುವು ಮಾಡಿಕೊಡಲಾಗಿದೆ.  ಲಾಕ್ ಡೌನ್ ಸಡಿಲಿಕೆಯಾದ ನಂತರ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1743 ಕ್ಕೆ ಏರಿಕೆಯಾಗಿದೆ.  ರಾಜ್ಯ ಸರಕಾರ ಭಾನುವಾರ ಸಂಪೂರ್ಣವಾಗಿ ಕರ್ಪ್ಯೂ […]

ಕಂಟೈನ್ಮೆಂಟ್ ಜೋನ್ ಗಳಲ್ಲಿರುವ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ ; ಶಿಕ್ಷಣ ಸಚಿವ ಸುರೇಶಕುಮಾರ

ಬೆಂಗಳೂರು. ಮೇ. 22: ಏಪ್ರಿಲ್/ಮೇ ನಲ್ಲಿ ನಡೆಯಬೇಕಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆ ಕೊರೋನಾ ವೈರಸ್ ಹಿನ್ನೆಲೆ ಮುಂದುಡಲಾಗಿತ್ತು. ಈಗ ಪರೀಕ್ಷೆ ಜೂನ್ 25 ರಿಂದ ನಡೆಯಲಿದೆ. ಆದರೆ ಕಂಟೈನ್ಮೆಂಟ್ ಜೋನ್ ನಲ್ಲಿರುವ ವಿದ್ಯಾರ್ಥಿಗಳಿಗೆ ಎಲ್ಲ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶಕುಮಾರ ಅವರು ಕಂಟೈನ್ಮೆಂಟ್ ಜೋನ್ ನಲ್ಲಿರುವ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ನಡೆಯುವ ಸಂದರ್ಭದಲ್ಲಿ ಹೊಸದಾಗಿ ಪರೀಕ್ಷೆ ತೆಗೆದುಕೊಳ್ಳುತ್ತಿರುವವರು ಎಂದು ಪರಿಗಣಿಸಿ, ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವದು ಎಂದು ತಿಳಿಸಿದ್ದಾರೆ.  

ವಿಜಯಪುರ: ಕೊರೋನಾದಿಂದ ಗುಣಮುಖರಾದವರ ಸಂಖ್ಯೆ 41 ಕ್ಕೆ ಏರಿಕೆ

ವಿಜಯಪುರ ಮೇ.21: ಕೊರೋನಾ ಸೋಂಕಿನಿಂದ ಗುಣಮುಖರಾದ ನಾಲ್ವರು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರಾದವರ ಸಂಖ್ಯೆ 41 ಕ್ಕೆ ಏರಿದೆ. ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡವರಲ್ಲಿ ಇಬ್ಬರು ಮಹಿಳೆಯರು, ಓರ್ವ ಬಾಲಕಿ ಹಾಗೂ ಓರ್ವ ಪುರುಷ ಗುಣಮುಖ ರೋಗಿ ಒಳಗೊಂಡಿದ್ದು, 38 ವರ್ಷದ ಮಹಿಳೆ (ರೋಗಿ ಸಂಖ್ಯೆ -275), 33 ವರ್ಷದ ಮಹಿಳೆ (ರೋಗಿ ಸಂಖ್ಯೆ-538), 11 ವರ್ಷದ ಬಾಲಕಿ (ರೋಗಿ ಸಂಖ್ಯೆ -769) ಹಾಗೂ 45 ವರ್ಷದ ಪುರುಷ (ರೋಗಿ ಸಂಖ್ಯೆ -510) ಇವರು ಬಿಡುಗಡೆ ಹೊಂದಿದ್ದಾರೆ. […]

ವಿಜಯಪುರ: ತಂಬಾಕು, ಪಾನಮಸಾಲಾ ಇತ್ಯಾದಿಗಳ ಮಾರಾಟ, ಬಳಕೆ ನಿಷೇಧ

ವಿಜಯಪುರ ಮೇ. 20 : ಕೋವಿಡ್-19 ರೋಗವು ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನಮಸಾಲಾ, ಜರ್ದಾ ಇತ್ಯಾದಿಗಳನ್ನು ಬಳಸಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ಅದು ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ನಿಮ್ಯೋನಿಯಾ ಮತ್ತು ಕೋವಿಡ್-19 ಒಬ್ಬರಿಂದೊಬ್ಬರಿಗೆ ಹರಡಲು ಕಾರಣವಾಗುವುದರಿಂದ ಜಿಲ್ಲೆಯಾದ್ಯಂತ ಅಂಗಡಿಗಳಲ್ಲಿ ಇವುಗಳನ್ನು ಮಾರಾಟ ಮಾಡುವುದು ಮತ್ತು ಸಾರ್ವಜನಿಕರು ಬಳಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ. ಬಸವನ ಬಾಗೇವಾಡಿಯಲ್ಲಿ ದಾಳಿ ನಡೆಸಿ ವಿವಿಧ ಅಂಗಡಿಗಳಲ್ಲಿರುವ ತಂಬಾಕು (ಸುಗಂಧ) ಭರಿತ ತಂಬಾಕನ್ನು […]

ವಿಜಯಪುರ: ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಮೂಲ ಸ್ಥಾನದಲ್ಲಿ ಬರೆಯಲು ಅವಕಾಶ

ವಿಜಯಪುರ ಮೇ. 20 : ಕೊರೋನಾ ಹಿನ್ನೆಲೆಯಲ್ಲಿ ಮಾನ್ಯ ನಿರ್ದೇಶಕರು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು ರವರ ದಿನಾಂಕ : 03-07-2020ರ ಸುತ್ತೋಲೆಯಲ್ಲಿ ಮಾರ್ಚ್/ಏಪ್ರೀಲ್ -2020 ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಶಾಲಾ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರ ಮಕ್ಕಳು ತಮ್ಮ ಮೂಲ ಸ್ಥಾನದಲ್ಲಿ  ಪರೀಕ್ಷೆ ಬರೆಯಲು ಅವಕಾಶ ನೀಡಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ. ಮಾರ್ಚ್/ಏಪ್ರೀಲ್ -2020 ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಶಾಲಾ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರ ಮಕ್ಕಳು ಕೊರೋನಾ ಹಿನ್ನೆಲೆಯಲ್ಲಿ ತಾವು […]

ವಿಜಯಪುರ: ಲಂಚ ಸ್ವೀಕರಿಸುವ ವೇಳೆ ಸಹಾಯಕ ಸಂಚಾರಿ ವ್ಯವಸ್ಥಾಪಕ ಎಸಿಬಿ ಬಲೆಗೆ

ವಿಜಯಪುರ ಮೇ. 20 : ವಿಜಯಪುರ ಕೇಂದ್ರಬಸ್ ನಿಲ್ದಾಣ ಆವರಣದಲ್ಲಿ ವಿದ್ಯುತ್ ಕೇಬಲ್ ಅಳವಡಿಕೆಗೆ ಸಂಬಂಧಪಟ್ಟಂತೆ 20 ಸಾವಿರ ರೂ.ಗಳ ಬೇಡಿಕೆ ಇಟ್ಟು, 10 ಸಾವಿರ ರೂ.ಗಳ ಲಂಚ ಸ್ವೀಕರಿಸುವ ಕುರಿತಂತೆ ಫೀರ್ಯಾದಿದಾರರ ದೂರಿನ ಆಧಾರದ ಮೇಲೆ ಸಹಾಯಕ ಸಂಚಾರ ವ್ಯವಸ್ಥಾಪಕ ಶ್ರೀ ರಾಜಶೇಖರ ಗಜಾಕೋಶ ಇವರನ್ನು ಹಣ ಸ್ವೀಕರಿಸುವ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದು, ಸದರಿಯವರನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಉಪ […]

ವಿಜಯಪುರ: ಕಂಟೆನ್ಮೇಂಟ್ ವಲಯದಲ್ಲಿನ 60 ವರ್ಷ ಪೂರೈಸಿದ ಪ್ರತಿ ವ್ಯಕ್ತಿಯ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಗೆ ರವಾನೆ -ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

ವಿಜಯಪುರ ಮೇ.19: ನಗರದ ಕಂಟೇನ್ಮೆಂಟ್ ವಲಯದಲ್ಲಿನ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಗಂಟಲು ದ್ರವ ಮಾದರಿಯನ್ನು ಇಂದಿನಿಂದ ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಮಾದ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ನಗರದ ಕಂಟೇನ್ಮೆಂಟ್ ವಲಯದಲ್ಲಿನ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಗಂಟಲು ದ್ರವ ಮಾದರಿಯನ್ನು ಇಂದಿನಿಂದ ವೈದ್ಯಕೀಯ ಪರೀಕ್ಷಗೆ ಕಳಿಸುವುದರ ಜೊತೆಗೆ ಸಾರಿ ಮತ್ತು ಐಎಲ್‍ಐಗಳಂತಹ ಪ್ರಕರಣಗಳಲ್ಲಿಯೂ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನಿಸಲಾಗುತ್ತಿದ್ದು, ಪಾಸಿಟಿವ್ ಬಂದಲ್ಲಿ […]

ವಿಜಯಪುರ: ಜನರ ಮೆಚ್ಚುಗೆಗೆ ಪಾತ್ರರಾದ ವೈದ್ಯರು

ವಿಜಯಪುರ ಮೇ.18: ಮಹಾರಾಷ್ಟ್ರ ರಾಜ್ಯದ ನವಿಮುಂಬೈಯಿಂದ ವಿಜಯಪುರಕ್ಕೆ ಆಗಮಿಸಿದ್ದ ಕೋವಿಡ್-19 ರೋಗಿ ಸಂಖ್ಯೆ 1176 ಗರ್ಬಿಣಿ ಮಹಿಳೆಗೆ ಹೆರಿಗೆ ಮಾಡಿಸುವ ಮೂಲಕ ಇಲ್ಲಿಯ ವೈದ್ಯರು ಮತ್ತೊಂದು ಸಾಧನೆಗೆ ಪಾತ್ರರಾಗುವುದರ ಜೊತೆಗೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮೇ 13 ರಂದು ವಿಜಯಪುರ ಜಿಲ್ಲೆಗೆ ಖಾಸಗಿ ವಾಹನದ ಮೂಲಕ ಆಗಮಿಸಿದ್ದ 7 ಜನರಲ್ಲಿ 5 ಜನರಿಗೆ ಕೋವಿಡ್-19 ಸೋಂಕು ದೃಡಪಟ್ಟಿದ್ದು, ಇವರಲ್ಲಿ ಒರ್ವ ಗರ್ಬಿಣಿ ಮಹಿಳೆ ಸಹ ಒಳಗೊಂಡಿದ್ದಾರೆ. ಜಿಲ್ಲೆಗೆ ಆಗಮಿಸಿದ್ದ ಈ ಮಹಿಳೆಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ತೀವ್ರ […]

ವಿಜಯಪುರ: ಕೊರೋನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 36 ಕ್ಕೆ ಏರಿಕೆ

ವಿಜಯಪುರ ಮೇ.14 : ಕೊರೋನಾ ಸೋಂಕಿನಿಂದ ಮತ್ತೊಬ್ಬ ರೋಗಿ 45 ವರ್ಷದ ರೋಗಿ ಸಂಖ್ಯೆ- 595 ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ಸಕ್ರಿಯವಾಗಿರುವ ಇನ್ನುಳಿದ 13 ಕೊರೋನಾ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು ಉತ್ತಮ ಚಿಕಿತ್ಸೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 52 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈವರೆಗೆ ಒಟ್ಟು 36 ಜನ ಕೊರೋನಾ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.