ವಿಜಯಪುರ: ಇಂದು 4 ಕೋವಿಡ್-19 ಪಾಸಿಟಿವ್ ದೃಢ

ವಿಜಯಪುರ ಜೂ.24 : ಜಿಲ್ಲೆಯಲ್ಲಿ ಈವರೆಗೆ ಒಟ್ಟು 321 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 82 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ಮತ್ತೆ 4 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ 9722 (24 ವರ್ಷದ ಹೆಣ್ಣು) ರೋಗಿ ಸಂಖ್ಯೆ 9723 (27 ವರ್ಷದ ಹೆಣ್ಣು) ಐಎಲ್‍ಐ ಸಂಪರ್ಕದಿಂದ ರೋಗಿ ಸಂಖ್ಯೆ 9274 (58 ವರ್ಷದ ಗಂಡು) ರೋಗಿ ಸಂಖ್ಯೆ […]

ವಿಜಯಪುರ: ನಕಲು ಮುಕ್ತ ಎಸ್.ಎಸ್.ಎಲ್.ಸಿ ಪರೀಕ್ಷೆ: ಕೊರೋನಾ ಭಯಬೇಡ

ವಿಜಯಪುರ ಜೂನ್ 24: ಜಿಲ್ಲೆಯಾದ್ಯಂತ ಇದೇ ಜೂನ್ 25 ರಿಂದ ಜುಲೈ 4 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಕಲು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಲು 106 ಮುಖ್ಯ ಪರೀಕ್ಷಾ ಕೇಂದ್ರ ಹಾಗೂ 15 ಉಪ ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 121 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 37,122 ಮಕ್ಕಳು […]

ವಿಜಯಪುರ: ಆರ್ಕೆಸ್ಟ್ರಾ ಮತ್ತು ನಾಟಕ ಕಂಪನಿಗಳು ನಡೆಸಲು ಅನುಮತಿ ಕೊಡಿ; ಕಲಾವಿದರಿಂದ ಮನವಿ

ವಿಜಯಪುರ ಜೂನ್ 24: ಮದುವೆ, ಹುಟ್ಟು ಹಬ್ಬ, ಜಾತ್ರೆ ದಸರಾ, ಗಣಪತಿ ಹಬ್ಬ ಇನ್ನಿತರ ಎಲ್ಲಾ ಸಮಾರಂಭಗಳಿಗೆ ಆರ್ಕೆಸ್ಟ್ರಾ ಮತ್ತು ನಾಟಕ ಕಂಪನಿಗಳು ನಡೆಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ಕಲಾವಿದರ ಕಲ್ಯಾಣ ವೇದಿಕೆ ವತಿಯಿಂದ ಅಪರ ಜಿಲ್ಲಾಧಿಕಾರಿ ಔದ್ರಾಮ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯಾಧ್ಯಕ್ಷರು ಶಕ್ತಿಕುಮಾರ ಉಕುಮನಾಳ ಮಾತನಾಡಿ, ಲಾಕ್‍ಡೌನ್ ಆಗಿ ಮೂರು ತಿಂಗಳು ಕಳೆದರು ಕಲಾವಿದರಿಗೆ ಯಾವ ಕಾರ್ಯಕ್ರಮಗಳು ಇಲ್ಲದೆ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಬಂದಿದೆ ವೃತ್ತಿ ರಂಗಭೂಮಿ ಕಲಾವಿದರು […]

ವಿಜಯಪುರ: ಒಟ್ಟು 34 ಕಂಟೇನ್ಮೆಂಟ್ ವಲಯಗಳು ಚಾಲ್ತಿಯಲ್ಲಿವೆ; ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

ವಿಜಯಪುರ ಜೂನ್ 23: ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಮಾತನಾಡಿ ಜಿಲ್ಲೆಯಲ್ಲಿ ಈವರೆಗೆ 301 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು, 74 ಜನರು ಸಕ್ರೀಯ ರೋಗಿಗಳಾಗಿದ್ದಾರೆ. ಈವರೆಗೆ 26,612 ಜನರ ಗಂಟಲುದ್ರವ ಮಾದರಿ ನೆಗೆಟಿವ್ ಬಂದಿದ್ದು, 26,989 ಲಕ್ಷಣವುಳ್ಳ ಜನರ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಗೆ ಸಂಗ್ರಹಿಸಲಾಗಿದೆ. ಹೋಮ್ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ 22 ಜನರ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ. ಅದರಂತೆ ಜಿಲ್ಲೆಯ ಗಡಿಭಾಗ ಕಂಟೇನ್ಮೆಂಟ್ ವಲಯ ಮತ್ತು ಇತರೆ ಪ್ರದೇಶಗಳಲ್ಲಿ ಕಾನೂನಿನ ರಿತ್ಯ ಸೂಕ್ತ […]

ವಿಜಯಪುರ: SSLC ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್

ವಿಜಯಪುರ ಜೂನ್ 23: ನಗರದ ಖ್ವಾಜಾ ನಗರದ ಅಂಜುಮನ್ ಶಾಲೆಯಲ್ಲಿ ಓದುತ್ತಿದ್ದ 16 ವರ್ಷದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಇಂದು ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ರೋಗಿ ಸಂಖ್ಯೆ 9708 ಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಅದರಂತೆ ಈ ವಿದ್ಯಾರ್ಥಿನಿಗೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಅವಕಾಶ ನೀಡದೆ ಮುಂದಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪ್ರಥಮ ಪರೀಕ್ಷೆ ಎಂದು ಪರಿಗಣಿಸಿ ಅವಕಾಶ ಕಲ್ಪಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. advertisement

ಐ.ಎಲ್.ಐ – ಸಾರಿ ಪ್ರಕರಣಗಳ ಶೀಘ್ರ ಪತ್ತೆಗೆ ಸೂಚನೆ: ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ ಜೂನ್ 23: ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ನಿಯಂತ್ರಣಕ್ಕಾಗಿ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆ ಲಕ್ಷಣವುಳ್ಳವರನ್ನು ಗುರುತಿಸುವ ಕಾರ್ಯ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಗರದ ನೂತನ ಪ್ರವಾಸಿ ಮಂದಿರದಲ್ಲಿಂದು ಕೋವಿಡ್-19 ನಿಯಂತ್ರಣ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ಕುರಿತು ಎಲ್ಲರು ಮುನ್ನೆಚ್ಚರಿಕೆ ವಹಿಸಬೇಕು. ಐ.ಎಲ್.ಐ ಮತ್ತು ಸಾರಿ ಸಂಬಂಧಿತ ಲಕ್ಷಣಗಳಿದ್ದಲ್ಲಿ ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ […]

ವಿಜಯಪುರ: ಕೊರೋನಾ ಸೋಂಕಿತ ತಾಯಿ, ಅವಳಿ ಹೆಣ್ಣು ಮಕ್ಕಳು ಸೇಫ್; ವೈದೈರು ಪುಲ್ ಖುಷ್!

ವಿಜಯಪುರ ಜೂನ್ 22: ಕೋವಿಡ್-19 ಪಾಸಿಟಿವ್ ರೋಗಿ ಸಂಖ್ಯೆ 8789 ಮಹಿಳೆಗೆ ಸಹಜ ಹೆರಿಗೆ ಮಾಡಿಸುವಲ್ಲಿ ಡಾ.ಮನ್‍ಪ್ರೀತ್ ಕೌರ್ ಅವರನ್ನು ಒಳಗೊಂಡ ತಂಡವು ಯಶಸ್ವಿಯಾಗಿದ್ದು, ಅವಳಿ ಹೆಣ್ಣುಮಕ್ಕಳನ್ನು ಜನ್ಮ ನೀಡಿದ ತಾಯಿ ಹಾಗೂ ಅವಳಿ ಮಕ್ಕಳ ಆರೋಗ್ಯವಂತರಾಗಿದ್ದರೆಂದು ಜಿಲ್ಲಾಸ್ಪತ್ರೆಯ ಸರ್ಜನ್ ಶರಣಪ್ಪ ಕಟ್ಟಿ ಅವರು ತಿಳಿಸಿದ್ದಾರೆ. ಕೋವಿಡ್-19 ಪಾಸಿಟಿವ್ ಮಹಿಳೆಗೆ ಜನಿಸಿದ ಅವಳಿ ಹೆಣ್ಣು ಮಕ್ಕಳಲ್ಲಿ ಪ್ರಥಮ ಮಗು 2.0 ಕೆ.ಜಿ ಹಾಗೂ ಎರಡನೇ ಮಗು 2.1 ಕೆ.ಜಿ ತೂಕವನ್ನು ಹೊಂದಿದ್ದು, ತಾಯಿ ಸೇರಿದಂತೆ ಅವಳಿ ಹೆಣ್ಣು […]

ವಿಜಯಪುರ: ಮತ್ತೆ 39 ಕೊರೋನಾ ಪಾಸಿಟಿವ್ ದೃಢ; ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

ವಿಜಯಪುರ ಜೂ.21 : ಜಿಲ್ಲೆಯಲ್ಲಿ ಈವರೆಗೆ ಒಟ್ಟು 286 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 62 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ಮತ್ತೆ 39 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ 8756 (66 ವರ್ಷದ ಗಂಡು) ರೋಗಿ ಸಂಖ್ಯೆ 8757 (28 ವರ್ಷದ ಗಂಡು) ರೋಗಿ ಸಂಖ್ಯೆ 8758 (50 ವರ್ಷದ ಹೆಣ್ಣು) ರೋಗಿ ಸಂಖ್ಯೆ 8759 (50 […]

ವಿಜಯಪುರ ತಹಸೀಲ್ದಾರ್ ವಾಹನ ಚಾಲಕನ ಶವ ನಾಲ್ಕು ದಿನದ ನಂತರ IB ಯಲ್ಲಿ ಪತ್ತೆ

ವಿಜಯಪುರ ಜೂನ್.21: ತಹಸೀಲ್ದಾರ್ ವಾಹನದ ಖಾಸಗಿ ಚಾಲಕ ಆತ್ಮಹತ್ಯಗೆ ಶರಣಾದ ಘಟನೆ ವಿಜಯಪುರ ನಗರದ ನೂತನ ಪ್ರವಾಸಿ ತಾಣದ ಕಟ್ಟಡದ ಕಿಟಕಿಗೆ ನೇಣು ಹಾಕಿಕೊಂಡಿದ್ದಾನೆ. ಆರೀಫ್ ಜುನೇದಿ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಾಲ್ಕು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದು, ಸೇವೆಗೂ ಹಾಜರಾಗಿರಲಿಲ್ಲ. ಇದರಿಂದ ಆತಂಕಕ್ಕೊಳಗಾದ ಕುಟುಂಬಸ್ಥರು ಶನಿವಾರ ಮಧ್ಯಾಹ್ನ ಗಾಂಧೀವೃತ್ತ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಿನ್ನೆ ಸಂಜೆ 5 ಘಂಟೆ ವೇಳೆಗೆ ಆರೀಫ್ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ವಿಜಯಪುರ ತಹಶೀಲ್ದಾರ […]

ವಿಜಯಪುರ: ನೂತನ ಕುಲಸಚಿವರಾಗಿ ಅಧಿಕಾರ ಸ್ವೀಕಾರ: ಡಾ.ಬಸವರಾಜ ಎಲ್. ಲಕ್ಕಣ್ಣನವರ

ವಿಜಯಪುರ ಜೂನ್ 19: ಕರ್ನಾಟಕ ರಾಜ್ಯ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಜಯಪುರದಲ್ಲಿ ಶಿಕ್ಷಣ ಅಧ್ಯಯನ ವಿಭಾಗದ ಡೀನ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಬಸವರಾಜ ಎಲ್. ಲಕ್ಕಣ್ಣನವರ ಅವರು ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಕುಲಸಚಿವರಾದ ಪ್ರೊ. ಡಾ. ಸುರೇಶ ವಿ. ನಾಡಗೌಡರ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿಷ್ಣುಕಾಂತ ಎಸ್.ಚಟಪಲ್ಲಿ ಅವರು ನೂತನ ಕುಲಸಚಿವರನ್ನು ಬರಮಾಡಿಕೊಂಡರು.