ವಿಜಯಪುರ: ಗಗನಮಹಲ್ ವಾಯುವಿಹಾರಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ವಿಜಯಪುರ: ನಗರದ ಗಗನ ಮಹಲ್, ಶ್ರೀ ನರಸಿಂಹ ದೇವಸ್ಥಾನ ಹಾಗೂ ಅದರ ಪಕ್ಕದಲ್ಲಿರುವ ಹೊಂಡವನ್ನು ಸ್ವಚ್ಚಗೊಳಿಸಿ ಹಿರಿಯ ನಾಗರಿಕರಿಗೆ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಗಗನ ಮಹಲ್ ವಾಯುವಿಹಾರಿ ಸಂಘದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಳೆದ ಏಳು ತಿಂಗಳಿನಿಂದ ಗಗನ ಮಹಲ ಮುಚ್ಚಲಾಗಿದ್ದು, ಗಗನ ಮಹಲ್ ಹಾಗೂ ನರಸಿಂಹ ದೇವಸ್ಥಾನದ ಕೋಟೆಗೆ ಹೊಂದಿಕೊಂಡ ಹೊಂಡದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು. ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗದಂತೆ ಸ್ವಚ್ಛತೆ ಕಾರ್ಯ ಮಾಡಿಸಿ ಅಲ್ಲಿನ ನಾಗರಿಕರಿಗೆ ವಾಹುವಿಹಾರ ಮಾಡಲು ಅವಕಾಶ ಕಲ್ಪಿಸಕೊಡಬೇಕು […]

ಮಾಜಿ ರಾಷ್ಟ್ರಪತಿ, ಆರ್ಥಿಕ ತಜ್ಞ ಪ್ರಣಬ್ ಮುಖರ್ಜಿ ವಿಧಿವಶ

ದೆಹಲಿ ಆಗಸ್ಟ್‌ 11. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ  ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್‌ ಮುಖರ್ಜಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.  84 ವರ್ಷದ ಪ್ರಣಬ್ ಮುಖರ್ಜಿಯವರ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ  ಅವರನ್ನು ಭಾರತೀಯ ಸೇನೆಯ ರೀಸರ್ಚ್ ಅಂಡ್ ರೆಫೆರೆಲ್ (ಆರ್ ಅಂಡ್ ಆರ್) ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲದೆ, ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ (Blood clot) ಸಮಸ್ಯೆ ಉದ್ಭವವಾಗಿತ್ತು. ಹೀಗಾಗಿ ಪ್ರಣಬ್ ಅವರಿಗೆ ತುರ್ತಾಗಿ ಮಿದುಳು ಚಿಕಿತ್ಸೆಯನ್ನು ಮಾಡಲಾಗಿತ್ತು. […]

ರಾಜೀವಗಾಂಧಿ ಹಾಗೂ ದೇವರಾಜ ಅರಸ ಅವರ ಜನ್ಮ ದಿನಾಚರಣೆ

ವಿಜಯಪುರ : ಮಾಜಿ ಪ್ರಧಾನಿ ರಾಜೀವಗಾಂಧಿ ಹಾಗೂ ದೇವರಾಜ ಅರಸ ಅವರ ಜನ್ಮ ದಿನಾಚರಣೆ ನಿಮಿತ್ತ ಇಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ವಿವಿಧ ಬಡಾವಣೆಗಳಲ್ಲಿ ಸಸಿ ನೆಡುವ ಮೂಲಕ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಎಐಸಿಸಿ ಸದಸ್ಯರು ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಶ್ರೀಮತಿ ಶ್ರೀದೇವಿ ಉತ್ಲಾಸರ ಮಾತನಾಡಿ, ಮಾಹಿತಿ ತಂತ್ರಜ್ಞಾನ, ಟೆಲಿಕಾಂ ಕ್ರಾಂತಿ, ಪಂಚಾಯತ ರಾಜ, ಮತದಾನದ ವಯಸ್ಸಿನ ಇಳಿಕೆ ಸೇರಿದಂತೆ ಮಹತ್ತರ ಬಲಿಷ್ಟವಾದ ಭಾರತವನ್ನು ಕಟ್ಟುವಲ್ಲಿ ಬಹಳಷ್ಟು ಶ್ರಮಿಸಿದ್ದಾರೆ. ಆಧುನಿಕ ಭಾರತವನ್ನು ಕಟ್ಟುವಲ್ಲಿ […]

ವಿಜಯಪುರ: ಗಾಂಧಿಚೌಕ ಪೊಲೀಸ್ ಠಾಣೆ ಸೀಲ್‍ಡೌನ್

ವಿಜಯಪುರ ಜುಲೈ 12: ಕೋವಿಡ್-19 ಪ್ರಯುಕ್ತ ಕಂಟೇನ್‍ಮೆಂಟ್ ಝೋನ್, ಕೋವಿಡ್ ಆಸ್ಪತ್ರೆ ಹಾಗೂ ಕರೋನಾ ಕರ್ತವ್ಯ ನಿರ್ವಹಿಸಿದ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಒಟ್ಟು 07 : ಕರೋನಾ POSITIVE ವರದಿ ಬಂದಿದ್ದು, ವಿಜಯಪುರ ಪೊಲೀಸ್ ಉಪ-ವಿಭಾಗದ 02 ಹಾಗೂ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ 05 ಜನರಿಗೆ ಪಾಸಿಟಿವ್ ಬಂದಿದೆ. ಸದರಿ ಸೊಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಸದರಿ ಕರೋನಾ POSITIVE ಪೊಲೀಸ್ ಸಿಬ್ಬಂದಿಗಳ Primary and Secondary Contact […]

ವಿಜಯಪುರ: ಪೊಲೀಸ್ ಸಿಬ್ಬಂದಿಗೆ ಕರೋನಾ POSITIVE; ಬ.ಬಾಗೇವಾಡಿ ಹಾಗೂ ಕೂಡಗಿ ಪೊಲೀಸ್ ಠಾಣೆ ಸ್ಥಳಾಂತರ

ವಿಜಯಪುರ ಜುಲೈ.04: ಕೋವಿಡ್-19 ಪ್ರಯುಕ್ತ ಕಂಟೇನ್‍ಮೆಂಟ್ ಝೋನ್, ಕೋವಿಡ್ ಆಸ್ಪತ್ರೆ ಹಾಗೂ ಕರೋನಾ ಕರ್ತವ್ಯ ನಿರ್ವಹಿಸಿದ ಜಿಲ್ಲೆಯ ಪೊಲೀಸ್ ಇಲಾಖೆಯ 02 ಸಿಬ್ಬಂದಿಗೆ ಕರೋನಾ POSITIVE ವರದಿ ಬಂದಿದ್ದು, ಸದರಿ ಸಿಬ್ಬಂದಿಯವರು ಬ.ಬಾಗೇವಾಡಿ ಹಾಗೂ ಕೂಡಗಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಸೊಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಸದರಿ ಕರೋನಾ POSITIVE ಸಿಬ್ಬಂದಿಗಳ Primary and Secondary Contact ಇರುವವರನ್ನು ಗುರುತಿಸಿ ಕ್ವಾರಂಟೈನ್ ಮಾಡಿಲಾಗಿದೆ. ಅಲ್ಲದೇ ಸೊಂಕಿತರು ಕರ್ತವ್ಯ ನಿರ್ವಹಿಸುತ್ತಿದ್ದ […]

ವಿಜಯಪುರ: ಭಾನುವಾರ ಲಾಕ್‍ಡೌನ್: ಜಿಲ್ಲೆಯಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ಕರ್ಫೂ ಜಾರಿ

ವಿಜಯಪುರ ಜುಲೈ.04: ರಾಜ್ಯಾಂದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕೋರೊನಾ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ದಿನಾಂಕ 05-07-2020 ರ ಭಾನುವಾರದಿಂದ ಮುಂದಿನ ದಿನಾಂಕ 02-08-2020 ರವರೆಗೆ ಒಟ್ಟು ನಾಲ್ಕು ಭಾನುವಾರಗಳನ್ನು ಪೂರ್ಣದಿನದ ಲಾಕ್‍ಡೌನ್ ಅನ್ನು 1973 ಕಲಂ 144 ರನ್ವಯ ಜಾರಿಗೊಳಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ. ಅದರಂತೆ ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವ ಅಗತ್ಯ ವಸ್ತುಗಳಾದ ವೈದ್ಯಕೀಯ, ಹಾಲು, ತರಕಾರಿ, ಮಾಂಸ-ಮೀನು, ದಿನಸಿ […]

ವಿಜಯಪುರ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಶ್ರೀಮತಿ ಸುಜಾತಾ ಕಳ್ಳಿಮನಿ ಆಯ್ಕೆ

ವಿಜಯಪುರ ಜೂನ್ 30 : ವಿಜಯಪುರ ಜಿಲ್ಲಾ ಪಂಚಾಯತನ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಅಭ್ಯರ್ಥಿ ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರು ಚುನಾಯಿತರಾಗಿದ್ದಾರೆ. ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣಾ ಸಭೆಯಲ್ಲಿ ಒಟ್ಟು 22 ಸದಸ್ಯರು ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರ ಪರವಾಗಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿ ಚುನಾಯಿತಗೊಳಿಸಿದರು. ಇವರ ವಿರುದ್ಧವಾಗಿ ಯಾವುದೇ ಮತಗಳು ಚಲಾಯಿಸಲ್ಪಡಲಿಲ್ಲ. ಇವರ ಸಮೀಪದ ಪ್ರತಿಸ್ಫರ್ಧಿ ಬಿಜೆಪಿ ಪಕ್ಷದ ಶ್ರೀ ಭೀಮಾಶಂಕರ ಮಹಾದೇವಪ್ಪ […]

ವಿಜಯಪುರ: ಮಾಜಿ ಶಾಸಕರೊಬ್ಬರಿಗೆ ಕೊರೋನಾ ಸೋಂಕು

ವಿಜಯಪುರ ಜೂನ್ 26 : ಜಿಲ್ಲೆಯ ಮಾಜಿ ಶಾಸಕರೊಬ್ಬರಿಗೆ (ರೋಗಿ ಸಂಖ್ಯೆ-10654 ಹಾಗೂ ವಯೋಮಾನ 72 , ಪುರುಷ) ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಮಾಜಿ ಶಾಸಕರಿಗೆ ಕೋವಿಡ್-19 ಲಕ್ಷಣವಿರುವದನ್ನು ಗಮನಿಸಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿ ಗಂಟಲು ದ್ರವ ಮಾದರಿಯನ್ನು ಪಡೆದು ವ್ಯದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೂಕ್ತ ಚಿಕಿತ್ಸೆಯನ್ನು […]

ವಿಜಯಪುರ: 12 ಕೋಟಿ 7 ಲಕ್ಷ ರೂಗಳ ಪ್ರೋತ್ಸಾಹಧನ ವಿತರಣೆ -ಸಚಿವ ಎಸ್.ಟಿ ಸೋಮಶೇಖರ

ವಿಜಯಪುರ ಜೂನ್ 26: ಕೋವಿಡ್-19 ಸಾಂಕ್ರಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಪ್ರೋತ್ಸಾಹಧನ ವಿತರಿಸಲಾಗುತ್ತಿದ್ದು, ಅದರ ಜೊತೆಗೆ ಸಹಕಾರಿ ಇಲಾಖೆಯಿಂದ ಮತಷ್ಟು ನೆರವು ನೀಡುವ ನಿಟ್ಟಿನಲ್ಲಿ ರಾಜ್ಯದ್ಯಂತ 12 ಕೋಟಿ 2 ಲಕ್ಷ ರೂಗಳನ್ನು ಪ್ರೋತ್ಸಾಹಧನ ರೂಪದಲ್ಲಿ ನೀಡಲಾಗುತ್ತಿದೆ ಎಂದು ಸಹಕಾರಿ ಸಚಿವ ಎಸ್.ಟಿ ಸೋಮಶೇಖರ ಅವರು ಹೇಳಿದರು. ನಗರದ ಡಿ.ಸಿ.ಸಿ ಬ್ಯಾಂಕ್ ಆವರಣದಲ್ಲಿ ಸಹಕಾರಿ ಇಲಾಖೆ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್‍ಗಳ ಸಂಯುಕ್ತಾಶ್ರಯದಲ್ಲಿ ನಡೆದ ಆಶಾ […]

ವಿಜಯಪುರ: ಕೊರೋನಾ ತಡೆಯಲು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ; ಜಿಲ್ಲಾದ್ಯಂತ 40 ಚಾಲ್ತಿಯಲ್ಲಿರುವ ಕಂಟೇನ್ಮೆಂಟ್ ವಲಯಗಳು

ವಿಜಯಪುರ ಜೂನ್ 26: ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ಕುರಿತಂತೆ ಅವಶ್ಯಕ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕಂಟೇನ್ಮೆಂಟ್ ವಲಯಗಳಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ತಹಶಿಲ್ದಾರರು ಮತ್ತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ಕುರಿತು ಅವಶ್ಯಕ ಮುನ್ನೆಚ್ಚರಿಕೆ ಕೈಗೊಳ್ಳಬೇಕು. 60ಕ್ಕಿಂತ ಮೇಲ್ಪಟ್ಟ ವಯೋಮಾನದ ವಯೋವೃದ್ಧರು, 10 ವರ್ಷದೊಳಗಿನ ಮಕ್ಕಳು ಯಾವುದೇ ಪರಿಸ್ಥಿತಿಯಲ್ಲಿ ಹೊರಗೆ ಬರದಂತೆ ಮುನ್ನೆಚ್ಚರಿಕೆ ವಹಿಸಲು ಅವರು ಮನವಿ ಮಾಡಿದ್ದಾರೆ. ಸಾರ್ವಜನಿಕರಿಗೆ ಯಾವುದೇ […]