ವಿಜಯಪುರ: ಕಳ್ಳನಿಂದ 12.38 ಲಕ್ಷ ರೂ. ಚಿನ್ನಾಭರಣ ವಶ

ವಿಜಯಪುರ ಸ 14: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ಹಾಗೂ ಹಾಲಿ ವಿಜಯಪುರದ ಪಾನಿ ನಗರ ನಿವಾಸಿಯಾಗಿದ್ದ ರಾಜು ಶಿವಾನಂದ ಹೊಸಮನಿ (25) ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕದೀಮನಿಂದ 12.38 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಕಳ್ಳತನ ಪ್ರಕರಣಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ, ನಗರದ ಸೊಲ್ಲಾಪುರ ನಾಕಾ ಬಳಿ ಶಂಕಾಸ್ಪದವಾಗಿ ಶಿವಾನಂದ ಸಂಚರಿಸುತ್ತಿದ್ದ ವೇಳೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವಿಜಯಪುರದಲ್ಲಿ ನಾಲ್ಕು ಮನೆಗಳನ್ನು ಕಳ್ಳತನ […]

ನಿರುದ್ಯೋಗಿಗಳಿಗೊಂದು ಅವಕಾಶ

ವಿಜಯಪುರ ಸೆ.12: ಜಿಲ್ಲೆ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ಅವತಾರ ಯೋಜನೆಯಡಿ ಸಾರಿಗೆ ಸಂಸ್ಥೆಯ ಬಸ್ಸುಗಳ ಮುಂಗಡ ಟಿಕೆಟ್ ಕೌಂಟರ್ ನೀಡುವ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿ ಈ ಮೊದಲು ಟೆಂಡರ್ ಮುಖಾಂತರ ಖಾಸಗಿ ಟಿಕೆಟ್ ಏಜೆಂಟರ್ ನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆ ಹಿಂಪಡೆದು ಪ್ರಸ್ತುತ ಖಾಸಗಿ ಅವತಾರ ಟಿಕೆಟ್ ಏಜೆಂಟರ್ ನ್ನು ವಾಕ್ ಇನ್ ಪದ್ಧತಿಯನ್ವಯ ಆಯ್ಕೆಮಾಡಲಾಗುವುದು ಎಂದು ವಿಜಯಪುರ ವಿಭಾಗ, ಈ.ಕ.ರ.ಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆ ಹಾಗೂ ತಾಲೂಕ ವ್ಯಾಪ್ತಿಯಲ್ಲಿರುವ ನಿರುದ್ಯೋಗಿ ಯುವಕ […]

ವಿಜಯಪುರ: ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಧಾಬಾ, ಹೊಟೇಲ್ ಗಳ ಮೇಲೆ ದಾಳಿ; 51 ಜನ ಬಂಧನ

ವಿಜಯಪುರ (ಸಪ್ಟಂಬರ) 07: ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ದಾಬಾ, ಹೋಟೆಲ್ ಗಳ ಮೇಲೆ ದಾಳಿ ಮಾಡಿರುವ ಪೊಲೀಸರು ಒಟ್ಟು 138 ಸ್ಥಳಗಳಲ್ಲಿ ಅಕ್ರಮ ಸರಾಯಿ ದಂಧೆಯನ್ನು ಪತ್ತೆ ಹಚ್ಚಿದ್ದಾರೆ. ಮಾರಾಟ ಮಾಡುತ್ತಿರುವವರ ವಿರುದ್ದ ದಾಳಿ ಮಾಡಿ ಕಾನೂನು ಕ್ರಮ ಜರುಗಿಸಿದ್ದು, ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿ 38 ದಾಬಾ, 05 ಹೋಟೆಲ್ ಹಾಗೂ 06 ಗ್ರಾಮಗಳಲ್ಲಿ ಹೀಗೆ ಒಟ್ಟು 49 ಪ್ರಕರಣಗಳನ್ನು ಅಬಕಾರಿ ಕಾಯ್ದೆಯಡಿಯಲ್ಲಿ ದಾಖಲಿಸಿಕೊಂಡು, 51 ಜನ ಆರೋಪಿತರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 128.74 […]

ವಿಜಯಪುರ: ಅಕ್ರಮ ಗಾಂಜಾ ಪತ್ತೆ ಪೊಲೀಸರ ದಾಳಿ

ವಿಜಯಪರ (ಸಪ್ಟಂಬರ್ ) 07: ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಹೋಲವೊಂದರಲ್ಲಿ ಗಾಂಜಾ ಜಪ್ತಿ.  ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಹೊಲವೊಂದರ ಬೆಳೆಗಳ ಮಧ್ಯ ಬೆಳೆಯಲಾಗಿದ್ದ, 72 ಕೆ.ಜಿ. ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಆರೋಪಿ ರವಿ ವಾಲೀಕಾರ ಎಂಬುವವನು ತನ್ನ ತೋಟದಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಡಿಎಸ್‍ಪಿ ಶಾಂತವೀರ, ನೇತೃತ್ವದಲ್ಲಿ ಪಿಎಸ್‍ಐ ಸಿ. ಬಿ. ಚಿಕ್ಕೋಡಿ ಸಿಬ್ಬಂದಿಗಳು ಹಾಗೂ ತಹಶೀಲ್ದಾರ ರವರೊನ್ನಳಗೊಂಡ ತಂಡದೊಂದಿಗೆ ದಾಳಿ ನಡೆಸಿ ಗಾಂಜಾವನ್ನು ಜಪ್ತ […]

ಮೇಘನಾ ಕ್ಷಮೆ ಕೇಳಿದ ಇಂದ್ರಜಿತ್ ಲಂಕೇಶ್

ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟ ಚಿರಂಜೀವಿ ಸರ್ಜಾ ಕುರಿತ ಹೇಳಿಕೆಗೆ ಮೇಘನಾ ರಾಜ್ ರನ್ನು ಕ್ಷಮೆಯಾಚಿಸಿದ್ದಾರೆ. ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ನನಗೆ ನೋವಾಗಿದ್ದು, ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ನಟಿ ಮೇಘನಾ ರಾಜ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಕ್ಷಮೆಯಾಚಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್, ಚಿರು ಬಗ್ಗೆ ನಾನು ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದಿದ್ದೇನೆ. ನನ್ನ ಹೇಳಿಕೆಯಿಂದ ಅವರ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಿರಲಿ. ಈ […]

ಶಿಕ್ಷಕರ ದಿನಾಚರಣೆ : ಗಣ್ಯರಿಂದ ಶುಭಾಶಯಗಳು

ಹೊಸದಿಲ್ಲಿ: ದೇಶದ ಮೊದಲ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಶಿಕ್ಷಕರ ದಿನಾಚರಣೆ ಈ ವರ್ಷ ಮಾತ್ರ ಕೊರೊನಾ ಸಂಕಷ್ಟದಿಂದಾಗಿ ಕಳೆಗುಂದಿದೆ. ಮತ್ತು ದೇಶದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನದಿಂದಾಗಿ ಶೋಕಾಚರಣೆ ಆಚರಿಸುವುದರಿಂದ ಈ ಬಾರಿ ಶಿಕ್ಷಕರ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿಲ್ಲ. ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಶಿಕ್ಷಕರ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ. ಪ್ರಧಾನಿ ಮೋದಿ ಟ್ವೀಟ್ ಮಾಡಿ, ರಾಷ್ಟ್ರ ನಿರ್ಮಾಣ ಮತ್ತು ವ್ಯಕ್ತಿತ್ವ ರೂಪಿಸುವುದರಲ್ಲಿ ಅವಿರತ ಶ್ರಮ ಪಡುತ್ತಿರುವ […]

ಬೇಗ ಗುಣಮುಖರಾಗಿ ಎಂದು ಹಾರೈಸಿದ ಸಿಎಂ – ಸಚಿವರಾದ ಈಶ್ವರಪ್ಪ – ಶಶಿಕಲಾ ಜೋಲ್ಲೆ ಟ್ವಿಟ್

ಬೆಂಗಳೂರು .ಸೆಪ್ಟೆಂಬರ್ 01: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಇಬ್ಬರೂ ಕೊರೋನಾ ಸೋಂಕಿಗೆ ತುತ್ತಾಗಿರುವುದು ಖಚಿತವಾಗಿದೆ. ಈ ಕುರಿತು ಇಬ್ಬರೂ ಸಚಿವರೂ ಟ್ವೀಟ್ ಮೂಲಕ ಸ್ಪಷ್ಟೀಕರಿಸಿದ್ದು, ಸಚಿವರು ಶೀಘ್ರ ಗುಣಮುಖರಾಗಿ ಕರ್ತವ್ಯಕ್ಕೆ ಮರಳಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾರೈಸಿದ್ದಾರೆ. ಟ್ವೀಟ್ ಮೂಲಕ ತಮಗೆ ಕೊರೋನಾ ತಗುಲಿರುವುದನ್ನು ಬಹಿರಂಗಪಡಿಸಿದ್ದ ಸಚಿವ ಈಶ್ವರಪ್ಪ, “ನನಗೆ ಇಂದು ಕರೊನಾ ಸೋಂಕು ದೃಡ ಪಟ್ಟಿದ್ದು, ಯಾವುದೇ ರೀತಿಯ ಆರೋಗ್ಯ ಸಮಸ್ಯೆ […]

ಇಎಂಐ ವಿನಾಯಿತಿ ಮುಂದುವರಿಕೆ ಇಲ್ಲ: ಆರ್ ಬಿ ಐ

ನವದೆಹಲಿ. ಸೆಪ್ಟೆಂಬರ್ 01: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ 6 ತಿಂಗಳ ಕಾಲ ಮುಂದೂಡಲಾಗಿದ್ದ ಸಾಲದ ಮೇಲಿನ ಇಎಂಐ ಪಾವತಿ ಇಂದಿನಿಂದ ಶುರುವಾಗಲಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಸಾಲ ಪಾವತಿ ಮುಂದೂಡುವುದು ತಾತ್ಕಾಲಿಕ ಪರಿಹಾರ, ಇದರಿಂದ ಬ್ಯಾಂಕ್ ಗಳಿಗೆ ಭಾರಿ ಸಮಸ್ಯೆಯಾಗಲಿದೆ. ಇದರಿಂದ ಸಾಲ ಮರುಪಾವತಿದಾರರಿಗೂ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಸೆ.1 ರಿಂದ ಸಾಲ ಮರುಪಾವತಿ ವಿನಾಯಿತಿ ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ. ಕೊರೋನಾ […]

ಶೇಂದಿ ಕುಡಿಯುವುದರಿಂದ ಕ್ಯಾನ್ಸರ್ ಗುಣವಾಗುತ್ತದೆ: ತೆಲಗಾಂಣ ಸಚಿವ ವಿ ಶ್ರೀನಿವಾಸ್ ಗೌಡ

ಶೇಂದಿಯನ್ನು ಸೇವನೆ ಮಾಡಿದರೆ ಕ್ಯಾನ್ಸರ್ ಸೇರಿದಂತೆ 15 ವಿವಿಧ ಕಾಯಿಲೆಗಳನ್ನು ಗುಣವಾಗುತ್ತದೆ ಎಂದು ತೆಲಂಗಾಣದ ಅಬಕಾರಿ ಸಚಿವ ವಿ ಶ್ರೀನಿವಾಸ್ ಗೌಡ ಹೇಳಿದ್ದಾರೆ. ಜಂಗಾಂವ್ ಜಿಲ್ಲೆಯ ರಘುನಾಥ್‌ಪಲ್ಲಿ ಬ್ಲಾಕ್‌ನ ಮಂಡಲಗುಡೆಂ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸರ್ವಾಯ್ ಪಾಪಣ್ಣ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು ತಾಳೆ ಮರಗಳಿಂದ ನೈಸರ್ಗಿಕವಾಗಿ ಹೊರತೆಗೆಯಲಾದ ಶೇಂದಿಯು ಔಷಧೀಯ ಮೌಲ್ಯವನ್ನು ಹೊಂದಿದೆ ಎಂದು ಸಾಬೀತುಪಡಿಸುವ ಅಧ್ಯಯನಗಳಿವೆ ಎಂದು ಹೇಳಿದ್ದಾರೆ. ಶೇಂದಿ ಸೇವಿಸುವುದರಿಂದ 15 ರೋಗಗಳು ದೂರವಾಗುತ್ತವೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ […]

ವಿಜಯಪುರ: ಬುಡಕಟ್ಟು ವೇಷ ಧರಿಸಿ ಪ್ರತಿಭಟನೆ

ವಿಜಯಪುರ: ತಳವಾರ ಮತ್ತು ಪರಿವಾರ ಎಸ್‍ಟಿ ಮೀಸಲಿಗೆ ಸಂಬಂಧಿಸಿದಂತೆ ಸರ್ಕಾರದ ವಿಳಂಬ ನೀತಿ ಖಂಡಿಸಿ ಇಂದು ತಳವಾರ ಹಾಗೂ ಪರಿವಾರ ಸಮುದಾಯದ ಸಾವಿರಾರು ಜನರು ಬುಡಕಟ್ಟು ವೇಷ ಧರಿಸಿ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರಿಗೆ ಮನವಿ ಸಲ್ಲಿಸಿದರು. ತಳವಾರ ಹಾಗೂ ಪರಿವಾರ ಎರಡೂ ಸಮುದಾಯದ ನಾಯಕರು ಇದೀಗ ಸಮುದಾಯದ ಸಾಂಪ್ರದಾಯಿಕ ಆಚರಣೆ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದು, ನಗರದ ಸಿಂದಗಿ ನಾಕಾದಿಂದ ಪ್ರಾರಂಭವಾದ ಪ್ರತಿಭಟನೆ ದರ್ಬಾರ ಶಾಲಾ ಮೈದಾನದಲ್ಲಿ ಅಂತ್ಯಗೊಂಡಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ […]