ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಕೊರೋನಾ ಸೋಂಕಿತರಿಂದ ಮತದಾನ

ವಿಜಯಪುರ ಡಿ.23: ಜಿಲ್ಲೆಯಲ್ಲಿ ದಿನಾಂಕ: 22-12-2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ, ನಾಗಠಾಣದ ಉಪಕೇಂದ್ರ ಅಲಿಯಾಬಾದ ಗ್ರಾಮದ ಪಂಚಾಯತ ಸಾರ್ವತ್ರಿಕ ಚುನಾವಣೆಯಲ್ಲಿ ಕೋವಿಡ್-19 ರ ಎಲ್ಲ ಮುಂಜಾಗ್ರತ ಕ್ರಮಗಳೊಂದಿಗೆ ಸೋಂಕಿತ ಮೂರು ಜನರಿಗೆ ಮತ ಚಲಾಯಿಸುವಂತೆ ಮನವೊಲಿಸಲಾಯಿತು. ಅವರು ಅಮೂಲ್ಯವಾದ ಮತವನ್ನು ಚಲಾಯಿಸಲು ತಹಶೀಲ್ದಾರರದಾ ಮೋಹನ್ ಕುಮಾರಿ ಅವರು ಪ್ರೇರೇಪಿಸಿ ಹಾಗೂ ಪಿ.ಪಿ ಕೀಟ್, ಮಾಸ್ಕ್ ಹಾಗೂ ಸೈನೀಟ್ಯಜರ್‍ಗಳನ್ನು ಉಪಯೋಗಿಸಿ, ಅಂಬುಲೈನ್ಸ್ ವಾಹನದೊಂದಿಗೆ ಮತಗಟ್ಟೆಯವರಿಗೆ ಕರೆದುಕೊಂಡು ಬಂದು ಮತವನ್ನು ಚಲಾಯಿಸುವಂತೆ ಮಾಡಲಾಯಿತು. ತದನಂತರ ಮತವನ್ನು ಚಲಾಯಿಸಿದ ಸ್ಥಳವನ್ನು […]

ಜಿಲ್ಲಾ ಮಟ್ಟದ ಯುವಜನೋತ್ಸವ

ವಿಜಯಪುರ ಡಿ.23: 2020-21 ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ತೊರವಿ ವಿಜಯಪುರ ಇವರ ಸಹಯೋಗದೊಂದಿಗೆ ದಿನಾಂಕ : 29-12-2020 ರಂದು ಬೆಳಿಗ್ಗೆ 10-00 ಗಂಟೆಗೆ ಕೋವಿಡ್ ಮುನ್ನೆಚ್ಚರಿಕೆಗಳೊಂದಿಗೆ ತೊರವಿಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ವಿಜಯಪುರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಜಿ ಲೋಣಿ […]

ಮುರುಗೇಶ ನಿರಾಣಿ ಕ್ರೆಡಿಟ್ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ವಂಚನೆ, ಅನಿರ್ಧಿಷ್ಟಾವಧಿ ಧರಣಿ ಕುಳಿತ ಗ್ರಾಹಕರು

ವಿಜಯಪುರ ನ.26: ಮುರುಗೇಶ ನಿರಾಣಿ ಕ್ರೆಡಿಟ್ ಸಹಕಾರಿ ನಿ. ವಿಜಯಪುರ (ಎಸ್.ಎಂ.ಎನ್) ಈ ಶಾಖೆಗಳಲ್ಲಿ ಗ್ರಾಹಕರು ತೊಡಗಿಸಿದ ಹಣವನ್ನು ದುರುಪಯೋಗ ಪಡಿಸಿದ್ದನ್ನು ಖಂಡಿಸಿ ಹಾಗೂ ಗ್ರಾಹಕರಿಗೆ ಹಣ ಹಿಂದಿರುಗಿಸಲು ಒತ್ತಾಯಿಸಿ ಗುರುವಾರ ವಂಚಿತ ಗ್ರಾಹಕರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಆವರಣದಲ್ಲಿ ಆರಂಭಿಸಲಾಯಿತು. ಈ ಧರಣಿಯನ್ನುದ್ದೇಶಿಸಿ ರೈತ ಸಂಘದ ಮುಖಂಡರಾದ ಅರವಿಂದ ಕುಲಕರ್ಣಿ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ಮುರುಗೇಶ ನಿರಾಣಿ ಅವರ ಹೆಸರಿನಲ್ಲಿ ಆರಂಭವಾದ ಕ್ರೆಡಿಟ್ ಸೌಹಾರ್ದದಲ್ಲಿ ಅನೇಕ […]

ಬಾಣಂತಿ ಮಹಿಳೆಯ ಗುಪ್ತಾಂಗದಲ್ಲಿ ಡ್ರೆಸ್ಸಿಂಗ್ ಬಟ್ಟೆ, ಪ್ರಾಣಾಪಾಯದಿಂದ ಪಾರು

ವಿಜಯಪುರ ನ.25: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷತನದಿಂದ ಬಾಣಂತಿ ಮಹಿಯೊಬ್ಬಳ ಗುಪ್ತಾಂಗದಲ್ಲಿ ರಕ್ತಸ್ರಾವ ತಡೆಯಲು ಇಟ್ಟಿದ್ದ ಡ್ರೆಸ್ಸಿಂಗ್ ಬಟ್ಟೆ ಆರು ತಿಂಗಳವರೆಗೆ ಅಲ್ಲಿಯೇ ಉಳಿದ ಆರೋಪ ಕೇಳಿ ಬಂದಿದೆ. ಶಾಹಿಲ್ ಲಾಲ್ ಸಾಬ್ ಉತ್ನಾಳ ಎಂಬ ಮಹಿಳೆ ಹೆರಿಗೆಗಾಗಿ ದಾಖಲಾಗಿದ್ದರು. ಬಳಿಕ ಈ ಮಹಿಳೆ ನ. 23 ರಂದು ಇದೇ ಆಸ್ಪತ್ರೆಗೆ ಬಂದಿದ್ದಾಳೆ. ತನಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಬೇರೆ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಕೂಡ ಮಾಡಿಸಿದ್ದಾಳೆ. ಆದರೆ, ಆ ವೇಳೆ ಏನು […]

ಟಿಪ್ಪು ಸುಲ್ತಾನ್ ಅಪ್ರತಿಮ ನಾಯಕ: ಕಾಂಗ್ರೆಸ್ ನಾಯಕ ಅಬ್ದುಲ್ ಹಮೀದ್ ಮುಶ್ರೀಫ್

ವಿಜಯಪುರ ನ. 10: ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ದೇಶಭಕ್ತ ಹಜರತ್ ಟಿಪ್ಪು ಸುಲ್ತಾನ್ ಅವರ 270ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ನಾಯಕ ಅಬ್ದುಲ್ ಹಮೀದ್ ಮುಶ್ರೀಫ್ ಮಾರ್ಲಾಪಣೆ ಮಾಡಿ, ಹಜರತ್ ಟಿಪ್ಪು ಸುಲ್ತಾನ್ ದೇಶಕ್ಕಾಗಿ ಹೋರಾಡಿದ ಅಪ್ರತಿಮ ನಾಯಕ. ಟಿಪ್ಪು ಸುಲ್ತಾನ್ ಅವರ ಆದರ್ಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಹೇಳಿದರು. ಮುಖಂಡ ರವೀಂದ್ರ ಜಾಧವ ಮಾತನಾಡಿ, ಇತಿಹಾಸದ ಪುಟಗಳನ್ನು ನೋಡಿದಾಗ ಶೃಂಗೇರಿ ಮಹಾರಾಜರು ತಮ್ಮನ್ನು ರಕ್ಷಣೆ ಮಾಡುವಂತೆ ಟಿಪ್ಪು […]

ಹಣಕ್ಕಾಗಿ ತಂದೆಯನ್ನು ಕೊಲೆ ಮಾಡಿರುವ ಸಿಂದಗಿ‌ ಪೊಲೀಸರು: facebook liveನಲ್ಲಿ ಮನವಿ

ವಿಜಯಪುರ ನ.06: ಹಣಕ್ಕಾಗಿ ತಂದೆಯನ್ನು ಕೊಲೆ ಮಾಡಿರುವ ಸಿಂದಗಿ‌ ಪೊಲೀಸರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬೆಂಗಳೂರು ಯಲಹಂಕ‌ ಠಾಣೆಯ ಪೇದೆ ಬಸವರಾಜ ಪಾಟೀಲ, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ವಿಜಯಪುರ ಎಸ್ಪಿಗೆ ವಿಡಿಯೊ ಮೂಲಕ ಮನವಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ  ಸಖತ್ ವೈರಲ್‌ ಆಗಿದೆ. 13 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿದ್ದೇನೆ. ನನ್ನ ಕುಟುಂಬದ ವಿರುದ್ಧ ಸಿಂದಗಿ ಪೊಲೀಸರು ದೌರ್ಜನ್ಯ, ಅಟ್ಟಹಾಸ, ರಾಕ್ಷಸ ಕೃತ್ಯ ಎಸಗಿದ್ದಾರೆ. ಅವರು ಹೇಳಿದ ಹಾಗೆ ಕೇಳಲಿಲ್ಲ ಎಂದು ತಂದೆಯನ್ನು ಹೊಡೆದು ಕೊಲೆ […]

ಭೀಮಾ ತೀರದ ಮಹಾದೇವ ಭೈರಗೊಂಡ ಶೂಟೌಟ್ ಪ್ರಕರಣ: ಇಬ್ಬರ ಬಂಧನ

ವಿಜಯಪುರ ನ.06: ಭೀಮಾ ತೀರದ ಮಹಾದೇವ ಭೈರಗೊಂಡ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕ ಹಾಗೂ ಮಾಹಿತಿ ನೀಡಿದ ಆರೋಪಿಯನ್ನು ಬಂಧಿಸಿದ್ದಾಗಿ ಬೆಳಗಾವಿ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ್ ತಿಳಿಸಿದ್ದಾರೆ. ಭೈರಗೊಂಡ ಚಲನವಲನದ ಬಗ್ಗೆ ಮಹತ್ವದ ಮಾಹಿತಿ ನೀಡುತ್ತಿದ್ದ ವಿಜಯ ತಾಳಿಕೋಟೆ, ಹಾಗೂ ಟಿಪ್ಪರ್ ಚಾಲಕ ನಾಗಪ್ಪ ಪೀರಗೊಂಡ ಬಂಧಿತ ಆರೋಪಿಗಳು. ಗ್ಯಾಂಗ್ ಕಟ್ಟಬೇಕೆಂಬ ಮೋಹದಿಂದಾಗಿ ಮಡಿವಾಳ ಹಿರೇಮಠ ಎನ್ನುವ ವ್ಯಕ್ತಿ ಈ ಪ್ರಕರಣದ ಕೇಂದ್ರ ಬಿಂದುವಾಗಿದ್ದು, ಆತನೂ ಸಹ ಈ ಕತ್ಯದಲ್ಲಿ ಪ್ರಮುಖ ಪಾತ್ರ […]

ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ: ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಸ್.ಷಡಾಕ್ಷರಿ

ವಿಜಯಪುರ ನ.03: ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಹಾಗೂ ಕೇಂದ್ರ ಸರಿ ಸಮಾನ ವೇತನ ಭತ್ಯ ದೊರಕಿಸುವುದೇ ಮುಖ್ಯ ಗುರಿ ಎಂದು ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಸ್.ಷಡಾಕ್ಷರಿ ಹೇಳಿದರು. ಇಂದು ನಗರದ ಆಶ್ರಮ ಹತ್ತಿರದ ಕಿತ್ತೂರು ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ನೌಕರರ ಸಮಸ್ಯೆಗಳ ಕುರಿತು ಸಂವಾದ ಹಾಗೂ ಚರ್ಚೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿರೀಕ್ಷಿತವಾಗಿ ಹೋರಾಟ ಮಾಡುವೆವು, ಈಗಾಗಲೇ ಒಂದು ವರ್ಷದಲ್ಲಿ ನೌಕರರ […]

ಹಿರಿಯ ಕಲಾವಿದ ಚನ್ನವೀರ ಝಳಕಿ ನೆನಪು: ವಿಜಯಪುರದ ಕಿತ್ತೂರ ಚನ್ನಮ್ಮ ರಂಗಮಂದಿರದ ಸ್ಥಳ ಸಂರಕ್ಷಣೆಗೆ ಕೂಗು

ವಿಜಯಪುರ ನ 03: ಹಲವು ಖ್ಯಾತಕಲಾವಿದರಾದವರು ಒಂದಿಲ್ಲಾ ಒಂದು ಚಟಕ್ಕೆ ಅಂಟಿಕೊಂಡು ಇನ್ನೂ ಹೆಚ್ಚು ವರ್ಷಗಳವರೆಗೆ ಬದುಕಬೇಕಿದ್ದ ಅವರ ಜೀವನ ಅದಾವದೊ ರೋಗಗಳಿಗೆ ತುತ್ತಾಗಿ ಅಂತ್ಯವಾಗಿರುವುದು ನಾವು ಕಲಾವಿದರ ಜೀವನದ ಇತಿಹಾಸದಿಂದ ತಿಳಿದು ಬರುತ್ತದೆ, ಇದರಿಂದಾಗಿ ಅದೆಷ್ಟೋ ಜನ ಕಲಾರಷಿಕರ ಮನಸ್ಸಿಗೆ ತುಂಬಲಾಗದ ನಷ್ಟವಾಗುತ್ತದೆ ಎಂದು ಇತಿಹಾಸಕಾರ ಸಂಶೋಧಕ ಡಾ ಆನಂದ ಕುಲಕರ್ಣಿ ಹೇಳಿದರು, ಮಲ್ಲಿಕಾರ್ಜುನ ಭೃಂಗಿಮಠ ಕಾನೂನು ಕ್ರಿಯಾತ್ಮಕ ವೇದಿಕೆ ಹಾಗು ಕರ್ನಾಟಕ ಪಬ್ಲಿಕ್ ಪವರ್ ಸಂಘಟೆನೆಗಳ ಆಶ್ರಯದಲ್ಲಿ ನಡೆದ ಚನ್ನವೀರ ಝಳಕಿ ನೆನಪು-4 ಗಾಯನ […]

ಭೂಕಂಪನದ ಬಗ್ಗೆ ಜನರು ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ

ವಿಜಯಪುರ ನ.04 : ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳ ತಂಡವು ಜಿಲ್ಲೆಯ ಕೋಲ್ಹಾರ ತಾಲೂಕಿನ ಮಲಘಾಣ ಗ್ರಾಮದಲ್ಲಿ ಸದ್ಯಕ್ಕೆ ತಾತ್ಕಾಲಿಕ ಭೂಕಂಪನ ಮಾಪಕ ಉಪಕರಣಗಳನ್ನು ಅಳವಡಿಸುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ. ಜಿಲ್ಲೆಯ ಕೋಲ್ಹಾರ ತಾಲೂಕಿನ ಮಲಘಾಣ, ಮಸೂತಿ, ಬಬಲೇಶ್ವರ ತಾಲೂಕಿನ ಅಡವಿ ಸಂಗಾಪೂರ ಮತ್ತು ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ, ಮಲಕನದೇವರಹಟ್ಟಿ, ಹುಬನೂರ ಗ್ರಾಮಗಳ ವ್ಯಾಪ್ತಿಯ ಭೂಮಿಯಲ್ಲಿ ಶಬ್ಧವಾಗುತ್ತಿರುವ ಬಗ್ಗೆ […]