ಲಿಂಬೆ ಸಂಸ್ಕರಣಾ ಉದ್ದಿಮೆ ಸ್ಥಾಪನೆಗೆ ಸಬ್ಸಿಡಿ ಸೌಲಭ್ಯ : ಸದುಪಯೋಗಕ್ಕೆ ಸಲಹೆ

ವಿಜಯಪುರ :ಫೆ 6: ಪ್ರಧಾನಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧ ಯೋಜನೆಯಡಿ ಜಿಲ್ಲೆಯ ಲಿಂಬೆ ಸಂಸ್ಕರಣಾ ಉದ್ದಿಮೆ ಆರಂಭಿಸಬಯಸುವವರು ಈ ಯೋಜನೆಯ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಪ್ರಧಾನಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧ ಯೋಜನೆ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಒಂದು ಜಿಲ್ಲೆ ಒಂದು ಉತ್ಪನ್ನದ ಅಡಿಯಲ್ಲಿ ಜಿಲ್ಲೆಯ ಲಿಂಬೆ ಆಯ್ಕೆ ಮಾಡಿದ್ದು, ಲಿಂಬೆ ಸಂಸ್ಕರಣಾ ಉದ್ದಿಮೆ ಸ್ಥಾಪಿಸಬಯಸುವವರಿಗೆ 10 ಲಕ್ಷ ರೂ.ಗಳ ವರೆಗೆ ಸಬ್ಸಿಡಿ […]
ಸಮಗ್ರ ನೀರಾವರಿಗೆ ಮಠಾಧೀಶರ ಹೋರಾಟ; ಪಕ್ಷಾತೀತವಾಗಿ ಹೋರಾಟ ರೂಪಿಸಲು ಚಿಂತನೆ

ವಿಜಯಪುರ ಪೆ.06: ಪ್ರತಿಯೊಂದು ಜಿಲ್ಲೆಯ ಭೌಗೋಳಿಕವಾಗಿ ಮೂರು ಕಾಲ ಅನುಭವಿಸುತ್ತದೆ. ಚಳಿಗಾಲ, ಮಳೆಗಾಲ, ಬೇಸಿಗೆ ಕಾಲ. ಆದರೆ ವಿಜಯಪುರ ಜಿಲ್ಲೆ ಈ ಮೂರು ಕಾಲಗಳ ಜತೆಗೆ ನಿರಂತರವಾಗಿ ಬೇಸಿಗೆ ಕಾಲವನ್ನೂ ಅನುಭವಿಸುತ್ತಿದೆ. ಹೀಗಾಗಿ ಜಿಲ್ಲೆಯ ಸಮಗ್ರ ನೀರಾವರಿಗೆ ಒತ್ತಾಯಿಸಿ ಜಿಲ್ಲೆಯ ಸಮಸ್ತ ಮಠಾಧೀಶರು ನಿರ್ಧರಿಸಿದ್ದಾರೆ. ತಾಲೂಕಿನ ಪ್ರತಿಷ್ಠಿತ ಕನ್ನೂರ ಗುರುಮಠದಲ್ಲಿ ನಡೆದ ಜಿಲ್ಲೆಯ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ಈ ಕುರಿತು ಸುಮಾರು 50ಕ್ಕೂ ಹೆಚ್ಚು ಮಠಾಧೀಶರು ನಿರ್ಣಯ ಕೈಗೊಂಡಿದ್ದಾರೆ. ಕನ್ನೂರ ಗುರುಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ […]
ಸಿಂದಗಿ ಶಾಸಕ ಎಮ್.ಸಿ. ಮನಗೂಳಿ ಅವರ ನಿಧನಕ್ಕೆ ಗಣ್ಯರಿಂದ ತೀವ್ರ ಸಂತಾಪ

ವಿಜಯಪುರ:ಜ.28: ಮಾಜಿ ಸಚಿವ, ವಿಜಯಪುರ ಜಿಲ್ಲೆಯ ಸಿಂದಗಿ ಶಾಸಕರಾದ ಶ್ರೀ ಎಂ.ಸಿ.ಮನಗೂಳಿ ಅವರ ನಿಧನಕ್ಕೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎರಡು ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ ಅವರು ಕೃಷಿ ಕುಟುಂಬದಿಂದ ಬಂದಿದ್ದು, ಜಿಲ್ಲೆಯ ಕೃಷಿ ಹಾಗೂ ನೀರಾವರಿ ಕ್ಷೇತ್ರದ ಅಭಿವೃದ್ಧಿಗಾಗಿ ಹೋರಾಟ ನಡೆಸುವ ಮೂಲಕ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದ್ದಾರೆ. ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ಶ್ರೀ ಮನಗೂಳಿ ಅವರನ್ನು ಸದನದ ಒಳಗೂ ಹಾಗೂ ಹೊರಗಡೆಯೂ ಮಾವ ಎಂದೇ […]
ಜ.30 ರಂದು ಉದ್ಯೋಗ ಮೇಳ

ವಿಜಯಪುರ : ಜ.27: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ವಿಜಯಪುರ, ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ ಅಡಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಈ ಉದ್ಯೋಗ ಮೇಳದಲ್ಲಿ ಖಾಸಗಿ ಕ್ಷೇತ್ರದಲ್ಲಿ ಕಂಪನಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗಾಗಿ ದಿನಾಂಕ : 30-01-2021 ರಂದು ಬೆಳಿಗ್ಗೆ 09-00 ಗಂಟೆಯಿಂದ ಸಂಜೆ 5-30 ಗಂಟೆಯವರೆಗೆ ಆಶ್ರಮ ರೋಡ್ ಹತ್ತಿರದ ಬಿ.ಎಲ್.ಡಿ.ಇ ಪಾಲಿಟೆಕ್ನಿಕ್ ಕಾಲೇಜನಲ್ಲಿ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿರುತ್ತದೆ ಎಂದು ವಿಜಯಪುರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, […]
ಜನವರಿ 31 ರಂದು 14 ಮತ್ತು 17 ವಯೋಮಿತಿ ಬಾಲಕ ಹಾಗೂ ಬಾಲಕಿಯರ ಪುಟ್ಬಾಲ್ ಆಯ್ಕೆ ಟ್ರಯಲ್ಸ್

ವಿಜಯಪುರ ಜ.27: ಕರ್ನಾಟಕ ರಾಜ್ಯ ಪುಟ್ಬಾಲ್ ಸಂಸ್ಥೆ ಬೆಂಗಳೂರು ಹಾಗೂ ದಿ. ವಿಜಯಪುರ ಜಿಲ್ಲಾ ಪುಟ್ಬಾಲ್ ಸಂಸ್ಥೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 31-01-2021 ರಂದು 14 ಮತ್ತು 17 ವರ್ಷ ವಯೋವಿತಿ ಹೊಂದಿರುವ ಬಾಲಕ ಹಾಗೂ ಬಾಲಕಿಯರ ಪುಟ್ಬಾಲ್ ಆಯ್ಕೆ ಟ್ರಯಲ್ಸ್‍ನ್ನು ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್ ಪದವಿಪೂರ್ವ ಕಾಲೇಜು ಪುಟ್ಬಾಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಕ್ರೀಡಾಪಟುಗಳು ದಿನಾಂಕ 28-01-2021ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ 14 ವರ್ಷದ ಬಾಲಕ ಹಾಗೂ ಬಾಲಕಿಯರ 1ನೆ ಜನವರಿ 2006ರಂತೆ […]
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಮನಃಪೂರ್ವಕವಾಗಿ ನೆನೆಯಬೇಕು; ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ

ವಿಜಯಪುರ ಜ.26: ಸಂವಿಧಾನ ಪಿತಾಮಹ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಧೀಮಂತ ನಾಯಕತ್ವದಲ್ಲಿ ರಚನೆಗೊಂಡ ಸಂವಿಧಾನವು 1950 ರ ಜನೇವರಿ 26 ರಂದು ಭಾರತದ ಗಣತಂತ್ರ ಒಕ್ಕೂಟ ವ್ಯವಸ್ಥೆಯ ಮೂಲಾಧಾರವಾಗಿ ಜಾರಿಗೆ ಬಂದಿತು. ಸರ್ವ ಸಮತೆಯನ್ನು ವಿಧಿವತ್ತಾಗಿ ಪಾಲಿಸಲು ಇಡೀ ದೇಶವೇ ಸಜ್ಜುಗೊಂಡ ದಿನವಿದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಹೇಳಿದರು. ಜಿಲ್ಲೆಯ […]
ಮಾಜಿ ಸೈನಿಕರಿಂದ 72ನೇ ಗಣರಾಜ್ಯೋತ್ಸವ ಆಚರಣೆ

ವಿಜಯಪುರ ಜ.26: 72ನೇ ಗಣರಾಜ್ಯೋತ್ಸವದ ಅಂಗವಾಗಿ ವಿಜಯಪುರ ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘದಲ್ಲಿ ಜಿಲ್ಲೆಯ ಸಮಸ್ತ ಮಾಜಿ ಸೈನಿಕರು 72ನೇ ಗಣರಾಜ್ಯೋತ್ಸವ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಅಧ್ಯಕ್ಷರಾದ ಎಂ.ಬಿ. ತೋಟದ ನೆರವೇರಿಸಿ ಮಾತನಾಡಿದ ಅವರು, ದೇಶದ ಸಮಸ್ತ ನಾಗರಿಕರಿಗೆ ಶುಭಾಶಯಗಳನ್ನು ಕೋರಿದರು. ಹಾಗೂ 1971 ರ ಇಂಡೋ ಪಾಕ್ ಯುದ್ಧದ ವಿಜಯೋತ್ಸವನ್ನು ವಿಜೃಂಭಣೆಯಾಗಿ ಗೋಲ್ಡನ್ ಜುಬ್ಲಿ ಆಚರಿಸುವ ಕುರಿತು ಎಲ್ಲ ಮಾಜಿ ಸೈನಿಕರಿಗೆ ವಿವರಿಸಲಾಯಿತು. ಈ ಸಂಧರ್ಭದಲ್ಲಿ ಜಿಲ್ಲೆಯ ಮಾಜಿ ಸೈನಿಕ ಅಧ್ಯಕ್ಷರಾದ ಎಂ.ಬಿ. […]
ವಿಜಯಪುರದಲ್ಲಿ ಕ್ರಿಸ್‍ಮಸ್, ಹೊಸ ವರ್ಷ ಆಚರಣೆ ಹಿನ್ನೆಲೆ ಕಟ್ಟುನಿಟ್ಟಿನ ಆದೇಶ ಪಾಲಿಸುವುದು ಕಡ್ಡಾಯ

ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೋವಿಡ್-19 ಹಿನ್ನೆಲೆ ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧಿಸಲಾಗಿದೆ . ದಿನಾಂಕ 30-12-2020 ರಿಂದ 2-12-2020 ರವರೆಗೆ ಕ್ಲಬ್, ಪಬ್, ರೆಸ್ಟೊರೆಂಟ್ ಹಾಗೂ ಅದೇ ತೆರನಾಗಿ ಸ್ಥಳ, ಪ್ರದೇಶಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ವಿಶೇಷ ಡಿಜೆ ಡಾನ್ಸ್ ಕಾರ್ಯಕ್ರಮಗಳನ್ನು, ವಿಶೇಷ ಪಾರ್ಟಿ, ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ವಿಜಯಪುರ ಡಿ.23: ಜಿಲ್ಲೆಯಲ್ಲಿ ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಆಚರಣೆಯನ್ನು ಸರಳವಾಗಿ, ಭಕ್ತಿಪೂರ್ವಕವಾಗಿ ಮತ್ತು ಅರ್ಥಪೂರ್ಣವಾಗಿ […]
ಎರಡನೆ ಹಂತದ ಚುನಾವಣೆಗೆ ಸಕಲ ಸಿದ್ದತೆ

ವಿಜಯಪುರ ಡಿ.23: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಚುನಾವಣೆ -2020 ರ ಎರಡನೆ ಹಂತದ ಚುನಾವಣೆ ನಡೆಯುವ ಸ್ಥಳಗಳಿಗೆ ಸಿಬ್ಬಂದಿಗಳು ದಿನಾಂಕ 26-12-2020 ರಂದು ಬೆಳಿಗ್ಗೆ 6-00 ರಿಂದ 7-00 ಗಂಟೆಯೊಳಗೆ ನಗರದ ದರಬಾರ ಪ್ರೌಢಶಾಲೆಯಿಂದ ಆಯಾ ತಾಲೂಕುಗಳಿಗೆ ತೆರಳಲು ಕೆ.ಎಸ್.ಆರ್.ಟಿ.ಸಿ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ. ಈ ಮತಗಟ್ಟೆ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ವಿಜಯಪುರ ನಗರದ ದರಬಾರ ಪ್ರೌಢಶಾಲೆಗೆ ಬಂದು ಬಸ್‍ಗಳ ಮೂಲಕ ತಮಗೆ ಹಂಚಿಕೆ ಮಾಡಲಾದ ತಾಲೂಕುಗಳಿಗೆ ತೆರಳಬೇಕು. […]
ಯುರೋಪ್ ದೇಶಗಳಿಂದ ಆಗಮಿಸಿದವರ ಮಾಹಿತಿ ನೀಡಲು ಸೂಚನೆ

ವಿಜಯಪುರ ಡಿ.23: ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಇಂಗ್ಲೆಂಡ್ (ಲಂಡನ್), ಯುರೋಪ್ ದೇಶಗಳಿಂದ ಆಗಮಿಸಿದ ಪ್ರಯಾಣಿಕರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ಗೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ. ಅಂತಹ ಪ್ರಯಾಣಿಕರ ಮಾಹಿತಿಯನ್ನು ತಪ್ಪದೇ ತಮ್ಮ ಸಮೀಪದ ಪ್ರಾಥಮಿಕ, ತಾಲೂಕಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳು, ತಹಸೀಲದಾರರಿಗೆ ಹಾಗೂ ಜಿಲ್ಲಾಡಳಿತದಿಂದ ಪ್ರಾರಂಭಿಸಲಾದ ಸಹಾಯವಾಣಿ ಕೇಂದ್ರ -1077 ಟೋಲ್ ಫ್ರೀ ನಂ – 08352-221261 ಗೆ ಮಾಹಿತಿಯನ್ನು ನೀಡಬೇಕು. ಇಂಗ್ಲೆಂಡ್, […]