ಮಹಾದೇವ ಸಾಹುಕಾರ್ ಮೇಲೆ ಪೈರಿಂಗ್

ವಿಜಯಪುರ ನ.02: ಭೀಮಾತೀರದ ಹಂತಕ ಮಹಾದೇವ ಸಾಹುಕಾರ್ ಸಂಚರಿಸುತ್ತಿದ್ದ ಕಾರಿಗೆ ಅಪರಿಚಿತರಿಂದ ಟಿಪ್ಪರ್ ಡಿಕ್ಕಿ ಹೊಡೆಸಿ ಗುಂಡಿನ ದಾಳಿ ನಡೆಸಿದ ಘಟನೆ ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಬಳಿ ಘಟನೆ ಸಂಭವಿಸಿದೆ. ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಮಾದ್ಯಮಗಳಿಗೆ ಮಾಹಿತಿ ನೀಡಿದ್ದು ಇಂದು ಮ. 3 ರಿಂದ 3.30ರ ಮಧ್ಯೆ ಮಹಾದೇವ ಸಾಹುಕಾರ ಮೇಲೆ ಧಾಳಿಯಾಗಿದೆ. ಸುಮಾರು 10 ರಿಂದ 15 ಜನರ ತಂಡ ಕಲ್ಲು ತೂರಾಟ ಮಾಡಿ ಪಿಸ್ತೂಲಿನಿಂದ ಧಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. […]
ಸ್ವಾತಂತ್ರ-ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ ಚೆನ್ನಮ್ಮ

ವಿಜಯಪುರ ಅ.23: ನಗರದ ಶ್ರೀ ಸಿದ್ದೇಶ್ವರ ಕಲಾ ಭವನದಲ್ಲಿ ವೀರ ಮಾತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಲಾಯಿತು. ಚನ್ನಮ್ಮ ವಿದ್ಯಾವರ್ಧಕ ಸಂಘ ಉತ್ನಾಳ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಬಾಗೇವಾಡಿ ಮಾತನಾಡಿ ವೀರ ಮಾತೆ ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಕಿತ್ತೂರು ಸಂಸ್ಥಾನವನ್ನು ಉಳಿಸಿದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿತ್ತೂರು ರಾಣಿ ಚನ್ನಮ್ಮ ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವರು, ಸ್ವಾತಂತ್ರ-ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. […]
ವಿಜಯಪುರ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಪ್ರಕರಣ; ಲಕ್ಷಾಂತರ ಬೆಲೆಬಾಳುವ ಹುಲಿ, ಕೃಷ್ಣಮೃಗದ ಚರ್ಮ, ಉಗುರು ಜಪ್ತಿ

ವಿಜಯಪುರ ಅ.21: ಖಚಿತ ಮಾಹಿತಿಯನ್ನಾಧರಿಸಿ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂ. ಬೆಲೆಬಾಳುವ ಒಂದು ದೊಡ್ಡ ಹುಲಿಯ ಚರ್ಮ, ಒಂದು ಕೃಷ್ಣಮೃಗದ ಚರ್ಮ ಹಾಗೂ ಎರಡು ಹುಲಿಯ ಉಗುರುಗಳನ್ನು ಪತ್ತೆ ಹಚ್ಚಿ ಜಪ್ತಿ ಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ವಿಜಯಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಶೋಕ ಆರ್ ಪಾಟೀಲ ಅವರು ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮುಂಜಾನೆ ನಸುಕಿನ ಜಾವ ಖುದ್ದಾಗಿ ಮನೆಯೊಂದರ ಮೇಲೆ ಬಿ.ಪಿ ಚವ್ಹಾಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, […]
ಮುಂದಿನ ಸಿಎಂ ಉತ್ತರ ಕರ್ನಾಟಕದವರೇ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ

ವಿಜಯಪುರ ಅ.20: ಉತ್ತರ ಕರ್ನಾಟಕದವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ಯಡಿಯೂರಪ್ಪನವರು ಬಹಳ ದಿನ ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವುದಿಲ್ಲ, ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಈಗಗಾಲೇ ಕೇಂದ್ರ ಸರಕಾರಕ್ಕೂ ಯಡಿಯೂರಪ್ಪ ಸಾಕಾಗಿ ಹೋಗಿದ್ದಾರೆ. ನನ್ನ ಕ್ಷೇತ್ರದ 125 ಕೋಟಿ ಅನುದಾನವನ್ನು ಸಿಎಂ ಯಡಿಯೂರಪ್ಪ ಕಡಿತ ಮಾಡಿದ್ದಾರೆ. ನನಗೂ ಯಡಿಯೂರಪ್ಪನವರಿಗೂ ಜಗಳವಾಗಿದೆ ಎಂದು ಹೇಳಿದರು. ಉತ್ತರ ಕರ್ನಾಟಕದವರೇ ಮುಂದಿನ ಮುಖ್ಯಮಂತ್ರಿ. ಉತ್ತರ ಕರ್ನಾಟಕದವರು 100 ಶಾಸಕರನ್ನು ಗೆಲ್ಲಿಸಿ ಕಳುಹಿಸುತ್ತಾರೆ. ಮುಂದಿನ ಬಾರಿ […]
ಮಳೆಯ ರುದ್ರನರ್ತನಕ್ಕೆ ಜಿಲ್ಲೆಯ ಜನಜೀವನ ಅಸ್ತವ್ಯಸ್ಥ; ಜಲಾಶಯಗಳ ಒಳಹರಿವು ಹೆಚ್ಚಳ

ವಿಜಯಪುರ ಅ.15 : ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ದೇ.ಹಿಪ್ಪರಗಿಯಲ್ಲಿ 9420 ಮೀ.ಮೀ ಮತ್ತು 8750 ಮೀ.ಮೀ ರಷ್ಟು ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ವಾಸ್ತವಿಕ ಮಳೆಯ ಪ್ರಮಾಣ 3.00 ಮೀ.ಮೀ ಇದ್ದು, 36.00 ಮೀ.ಮೀ ಮಳೆಯಾಗಿದ್ದು ಇದು ಶೇ 1155ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ. ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ನೇಮಿಸಲಾದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ಕೇಂದ್ರ ಸ್ಥಾನದಲ್ಲಿದ್ದು, ಅತೀ ವೃಷ್ಟಿ, ಪ್ರವಾಹ […]
ಮಾವಾ ಮಾರಾಟ 1.61 ಲಕ್ಷ ರೂ. ಆರೋಪಿತರಿಂದ ಜಪ್ತಿ; ಇಬ್ಬರ ಬಂಧನ

ವಿಜಯಪುರ ಅ.13: ದೇವರ ಹಿಪ್ಪರಗಿ ಪಟ್ಟಣದ ಜೇಡಿಮಠ ಓಣಿಯಲ್ಲಿರುವ ಮುಬಾರಕ ಬಾಗವಾನ (28), ಬಬಲು @ ದಸ್ತಗೀರ ದಪೇದಾರ (22) ಯಾವುದೇ ಲೈಸನ್ಸ ವ ಪರ್ಮಿಟ್ ಇಲ್ಲದೆ ಮಾವಾವನ್ನು ತಯಾರಿಸುತ್ತಿರುವಾಗ ರಾಮ್.ಎಲ್ ಅರಸಿದ್ದಿ, ಹೆಚ್ಚುವರಿ ಜಿಲ್ಲಾ ಪೊಲೀಸ ಅಧೀಕ್ಷಕರು ರವರ ಮಾರ್ಗದರ್ಶನದಲ್ಲಿ, ಶ್ರೀ ಸುರೇಶ ಸಿ.ಬೆಂಡೆಗುಂಬಳ ಪಿಐ ಸಿಇಎನ್ ಅಪರಾಧ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ದಾಳಿ ಮಾಡಿ, ಆರೋಪಿತರಿಂದ ಒಟ್ಟು -1,61,420 ರೂ. ವಶಪಡಿಸಿಕೊಳ್ಳಲ್ಲಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ […]
ಅಬಕಾರಿ ಇಲಾಖೆಯಿಂದ 12.05 ಕೆ.ಜಿ ಅಫೀಮು ವಶ

ವಿಜಯಪುರ: ಚಡಚಣ ತಾಲೂಕಿನ ಶರಾಡೋನ್ ಅಲ್ಲಿ 12.05 ಕೆ.ಜಿ ಅಫೀಮು ಸಾಗಿಸುತ್ತಿರುವ ಕಂಟೇನರ್ ಹಾಗೂ ಚಾಲಕನನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ನಿನ್ನೆ ಸಂಜೆ ದಾಳಿ ಮಾಡಿ ಸೆರೆಹಿಡಿದಿದ್ದಾರೆ. ಅಬಕಾರಿ ಜಂಟಿ ಆಯುಕ್ತರಾದ ಡಾ.ವೈ ಮಂಜುನಾಥ ಅವರು ಮಾತನಾಡಿ ರಾಜಸ್ಥಾನದಿಂದ ಬೆಂಗಳೂರಿಗೆ ತೆರಳುತಿದ್ದ ಕಂಟೇನರ್ ಅನ್ನು ಚಡಚಣ ತಾಲೂಕಿನ ಶಿರಾಡೂನ್‍ನಲ್ಲಿ ದಾಳಿ ಮಾಡಿ ಸೆರೆ ಹಿಡಿದಿದ್ದು, ಸುಮಾರು 12.05 ಕೆ.ಜಿ ತೂಕದ ಅಫೀಮು ಹಾಗೂ ಪೌಡರ್ ಸಾಗಿಸಲಾಗುತ್ತಿತ್ತು. ಸೂಮಾರು 5 ಲಕ್ಷ ಮೌಲ್ಯದ ಅಫಿಮು ಹಾಗೂ 30 ಲಕ್ಷ […]
ಹತ್ರಾಸ್ ದಲಿತ ಯುವತಿಯ ಅತ್ಯಾಚಾರ ಖಂಡಿಸಿ ದಲಿತ ಸೇನೆ ಪ್ರತಿಭಟನೆ

ವಿಜಯಪುರ ಅ.05: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ದಲಿತ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳ ವಿರುದ್ದ ಕಠಿಣ ಕ್ರಮ, ಸಾಕ್ಷಿನಾಶಪಡಿಸಿದ ಉತ್ತರ ಪ್ರದೇಶ ಪೋಲೀಸ ಅಧಿಕಾರಿಗಳ ವಿರುದ್ದ ದೌರ್ಜನ್ಯ ತಡೆ ಪ್ರಕರಣದಡಿ ಕೇಸು ದಾಖಲಿಸಿ ಜೈಲಿಗಟ್ಟಬೇಕು ಎಂದು ದಲಿತ ಸೇನೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ದಲಿತರ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ, ಅಪಹರಣ, ಕೊಲೆ, ಸುಲಿಗೆ, ಸಾಮಾಜಿಕ ಬಹಿಷ್ಕಾರದಂತಹ ಭೀಕರ ಘಟನೆಗಳು ಎಗ್ಗಿಲ್ಲದೇ ನಡೆಯುತ್ತಿವೆ, ದುಷ್ಟಶಕ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿ […]
ಮಾಸ್ಕ್ ಧರಿಸದಿದ್ದರೆ ದಂಡ -ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್

ವಿಜಯಪುರ ಅ.02: ಸರ್ಕಾರದ ತೆರವು -5 (ಅನ್‍ಲಾಕ್-5)ರ ಮಾರ್ಗಸೂಚಿ ಮತ್ತು ಸರ್ಕಾರದ ಆದೇಶದಂತೆ ಮಾಸ್ಕ್ ಧರಿಸದೆ ಇರುವ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇರುವವರಿಂದ ದಂಡ ವಸೂಲಾತಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶದಲ್ಲಿ 1000 ರೂ. ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿ ಪ್ರದೇಶವನ್ನು ಹೊರತುಪಡಿಸಿ (ನಗರ ಮತ್ತು ಗ್ರಾಮೀಣ ಪ್ರದೇಶ)ಗಳಲ್ಲಿ 500 ರೂ. ದಂಡವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಲಾಗುತ್ತದೆ. ಸಾರ್ವಜನಿಕ ಪ್ರದೇಶಗಳಲ್ಲಿ ಕನಿಷ್ಠ 6 ಅಡಿಗಳ ಸಾಮಾಜಿಕ […]
ವಿಜಯಪುರ: IPL ಕ್ರಿಕೇಟ ಬೆಟ್ಟಿಂಗ್ ಮೇಲೆ ದಾಳಿ ಮೂವರ ಬಂದನ

ವಿಜಯಪುರ ಸೆ.30: ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಕ್ರಿಕೇಟ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಬಂದಿಸಲಾಗಿದೆ ಎಂದು ಎಸ್ಪಿಅನುಪಮ್ ಅಗ್ರವಾಲ್ ತಿಳಿಸಿದ್ದಾರೆ. ರಾಮ್.ಎಲ್ ಅರಸಿದ್ದಿ, ಹೆಚ್ಚುವರಿ ಜಿಲ್ಲಾ ಪೊಲೀಸ ಅಧೀಕ್ಷಕರು ಅವರ ನೇತೃತ್ವದಲ್ಲಿ ಸಿ.ಬಿ ಬಾಗೇವಾಡಿ ಪಿಐ ಡಿಸಿಐಬಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ಆರೋಪಿಗಳಾದ ಶಿವಪುತ್ರ ಬಗಲಿ (31), ಚಂದ್ರಕಾಂತ ಪಾಟೀಲ್ (24), ಸಾಯಬಣ್ಣ ಮೂರಮನ (34) ಆರೋಪಿತರಿಂದ 3,00,000/- ರೂಪಾಯಿ, 10 ಮೋಬೈಲ್ ಪೋನ್, ಒಂದು ಟಿ.ವ್ಹಿಯನ್ನು ವಶಪಡಿಸಿಕೊಳ್ಳಲಾಗಿದೆ.