ವಿಜಯಪುರ ಜಿಲ್ಲೆಯ 16 ಜನ ಕ್ರೀಡಾ ಪಟುಗಳು ವೆಟ್ ಲಿಪ್ಟಿಂಗ್ ಗೆ ಆಯ್ಕೆ

ವಿಜಯಪುರ ಮಾ 12: ಜಿಲ್ಲಾ ಮಟ್ಟದ ವೆಟ್ ಲಿಪ್ಟಿಂಗ್ ಕ್ರೀಡೆಯಲ್ಲಿ ಬಾಲಕ/ಬಾಲಕಿಯರು ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಾಲಕೀಯರ ವಿಭಾಗದಲ್ಲಿ ಭಾಗ್ಯಶ್ರೀ ಪ್ರಥಮ, ದ್ವಿತೀಯ ಬಸಮ್ಮ, ತೃತೀಯ ಶಾಂತಾ ಸ್ಥಾನವನ್ನು ಪಡೆದಿದ್ದಾರೆ. ಬಾಲಕರ ವಿಭಾಗದಲ್ಲಿ ಪ್ರಥಮ ಶಂಕರ ಲಡಂಗಿ, ದ್ವಿತೀಯ ರವಿ ಮೇಟಿ, ತೃತೀಯ ನಟರಾಜ ಸ್ಥಾನವನ್ನು ಪಡೆದಿದ್ದಾರೆ. ಬಾಲಕ / ಬಾಲಕೀಯರಿಗೆ ಚಂದ್ರಕಾಂತ ತಾರನಾಳ ಹಾಗೂ ಶಂಕರ ಲಡಂಗಿ ಅವರು ತರಬೇತಿ ನೀಡಿದ್ದಾರೆ. ದಿನಾಂಕ […]
ಜೆಡಿಎಸ್ ಪದಾಧಿಕಾರಿಗಳ ನೇಮಕಾತಿ

ವಿಜಯಪುರ ಮಾ 12: ಜೆಡಿಎಸ್ ಯುವ ಜನತಾದಳ ಜಿಲ್ಲಾ ಮತ್ತು ನಗರ ಪದಾಧಿಕಾರಿಗಳ ನೇಮಕಾತಿ ಜೆಡಿಎಸ್ ಕಾರ್ಯಾಲಯದಲ್ಲಿ ಇಂದು ನಡೆಯಿತು. ಜಯಕಾಂತ ವಾಗ್ಮೋರೆ ಅವರನ್ನು ಜಿಲ್ಲಾ ಜೆಡಿಎಸ್ ಯುವ ಜನತಾದಳ (ಜಾತ್ಯಾತೀತ)ದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ, ಅಬ್ದುಲ್ ಹಮೀದ ಇಂಡೀಕರ ಅವರನ್ನು ಜಿಲ್ಲಾ ಜೆಡಿಎಸ್ ಯುವ ಜನತಾದಳ (ಜಾತ್ಯಾತೀತ)ದ ಜಿಲ್ಲಾ ಸಹ ಕಾರ್ಯದರ್ಶಿಯನ್ನಾಗಿ, ಹುಸೇನ ಪೈಗಂಬರ ಅರಬ ಅವರನ್ನು ಜಿಲ್ಲಾ ಜೆಡಿಎಸ್ ಯುವ ಜನತಾದಳ (ಜಾತ್ಯಾತೀತ)ದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ, ಮಾಳಿಂಗರಾಯ ಹೂ. ಹೊನಗೊಂಡ ಅವರನ್ನು […]
ಸಮೃದ್ಧಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ವಿಜಯಪುರ ಮಾ 12: ನಗರದ ಶಂಕರಲಿಂಗ ದೇವಸ್ಥಾನದಲ್ಲಿ ಸಮೃದ್ಧಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪತಂಜಲಿ ಯೋಗ ಜಿಲ್ಲಾ ಪ್ರಭಾರಿ ಶ್ರೀಮತಿ ಸುನಂದಾ ಹೊನವಾಡ ಹಾಗೂ ಸಾವಿತ್ರಿ ಮಠ ಆಗಮಿಸಿದ್ದರು ಈ ಕಾರ್ಯಕ್ರಮದಲ್ಲಿ ಸಮೃದ್ಧಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಸ್ಯೆ ಇದೆ ಎಂದು ದೂರ ಸರಿಯುವ ಪ್ರವೃತ್ತಿ ಮಹಿಳೆಗೆ ಇರಬಾರದು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಳ್ಳಿಮನಿ

ವಿಜಯಪುರ ಮಾ.12: ಮಹಿಳೆ ಇಂದು ತನ್ನ ಸುತ್ತಮುತ್ತಲಿರುವ ಸಮಸ್ಯೆಗಳನ್ನು ಎದುರಿಸಿ ಮೆಟ್ಟಿ ನಿಲ್ಲಬೇಕಾಗಿದೆ ಸಮಸ್ಯೆ ಇದೆ ಎಂದು ದೂರ ಸರಿಯುವ ಪ್ರವೃತ್ತಿ ನಮಗೆ ಇರಬಾರದು ಎಂದು ರಹೀಮ್ ನಗರದ ಪಾಂಡುರಂಗ ದೇವಸ್ಥಾನದಲ್ಲಿ ಹಿಂದೂ ನಾಮದೇವ ಸಿಂಪಿ ಸಮಾಜದ ಮಹಿಳಾ ಮಂಡಳ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಳ್ಳಿಮನಿ ಮಾತನಾಡಿದರು. ಮಹಿಳೆಯರ ತ್ಯಾಗ ಅಪಾರ ತನ್ನ ಕುಟುಂಬಕ್ಕಾಗಿ ದುಡಿಯುವ ಅವಳ ಶ್ರಮ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವಳ […]
ಮೋಟಾರ್ ಸೈಕಲ್ ಹಾಗೂ ಮನೆಗಳ್ಳನ ಬಂಧನ

ವಿಜಯಪುರ ಫೆ.11: ವಿಜಯಪುರ ನಗರದಲ್ಲಿ ಇತ್ತಿಚಿಗೆ ಘಟಿಸುತ್ತಿದ್ದ ಮನೆ ಕಳ್ಳತನ ಪ್ರಕರಣದ ಸದರಿ ತನಿಖಾ ತಂಡವು ಮನೆ ಕಳ್ಳತನ ಮಾಡುವ ಆರೋಪಿತನ ಪತ್ತೆ ಕಾರ್ಯದಲ್ಲಿರುವಾಗ ಈ ದಿವಸ ದಿನಾಂಕ: 11.02.2021 ರಂದು ಬೆಳಗಿನ 09:00 ಗಂಟೆ ಸುಮಾರಿಗೆ ವಿಜಯಪುರ ಶಹರದ ಸರಾಫ ಬಜಾರದಲ್ಲಿ ಸಂಶಯಾಸ್ಪದವಾಗಿ ಸಿಕ್ಕ ಆರೋಪಿತನಾದ –ಗಣೇಶ ಸುಭಾಸ ಪವಾರ, (19) ಈತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತಂದು ವಿಚಾರಣೆ ಮಾಡಿದಾಗ, ಆರೋಪಿತನು ಎರಡು ಮೋಟಾರ ಸೈಕಲಗಳು ಮತ್ತು ವಿಜಯಪುರ ನಗರದಲ್ಲಿ ರಹಿಮ ನಗರದಲ್ಲಿ ಮತ್ತು […]
ಲಾಂಛನ ವಿನ್ಯಾಸಕಾರ ಸ್ಫರ್ಧೆಗೆ ಅರ್ಜಿ ಆಹ್ವಾನ

ವಿಜಯಪುರ: ಫೆ:11: ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯ ಲೋಗೋ ವಿನ್ಯಾಸಗೊಳಿಸಲು ಸ್ಫರ್ಧೆಯನ್ನು ಏರ್ಪಡಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸಿದ್ಧಪಡಿಸಲಾದ ವೆಬ್‍ಪೇಜ್‍ನ್ನು ಜಿಲ್ಲಾಧಿಕಾರಿಗಳು ಬುಧುವಾರದಂದು ಬಿಡುಗಡೆಗೊಳಿಸಿದರು. ಈ ಸ್ಫರ್ಧೆಯಲ್ಲಿ ಭಾಗವಹಿಸಲು ಎಲ್ಲ ವಿನ್ಯಾಸಕಾರರನ್ನು ಆಹ್ವಾನಿಸಲಾಗಿದ್ದು, ಜಿಲ್ಲೆಯ ಇತಿಹಾಸ, ಸಂಸ್ಕøತಿ ಮತ್ತು ವಿಶಿಷ್ಟತೆಗಳನ್ನು ಬಿಂಬಿಸುವ ಲಾಂಛನ ವಿನ್ಯಾಸಗೊಳಿಸುವುದಕ್ಕಾಗಿ ಒಂದು ಸ್ಫರ್ಧೆಯ ಮೂಲಕ ಅರ್ಜಿ ಸಹ ಆಹ್ವಾನಿಸಲಾಗಿದೆ. ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆದ ಮೊದಲ 3 ವಿನ್ಯಾಸಗಳಲ್ಲಿ ಅಂತಿಮವಾಗಿ ಒಂದನ್ನು ಆಯ್ಕೆ ಮಾಡಿ ವಿಜೇತರನ್ನು ಘೋಷಿಸಲಾಗುವುದು. […]
ಚೊಚ್ಚಲ ಕೃತಿ ಪ್ರಕಟಿಸಲು ಅರ್ಜಿ ಆಹ್ವಾನ

ವಿಜಯಪುರ :ಫೆ 6: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2020ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಹಸ್ತಪ್ರತಿಗಳ ಪ್ರಕಟಣೆಗೆ 15000 ಪ್ರೋತ್ಸಾಹ ಧನ ನೀಡಲಾಗುವುದು, ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸೆಸೆಲ್ಸಿ ಪ್ರಮಾಣ ಪತ್ರದ ಪ್ರತಿಯೊಂದು ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನನ ದಾಖಲಾತಿ ಪ್ರಮಾಣ ಪತ್ರ ಪ್ರತಿಯನ್ನು ಸಲ್ಲಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಅರ್ಜಿಗಳನ್ನು […]
ರಾಜ್ಯಮಟ್ಟದ ಮೂರು ದಿನಗಳ ಕಾವ್ಯಕಮ್ಮಟ

ವಿಜಯಪುರ :ಫೆ 6: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಅಖಿಲ ಭಾರತ ಕನ್ನಡ ಕಾವ್ಯ ಕಮ್ಮಟ ಎಂಬ ರಾಜ್ಯಮಟ್ಟದ ಮೂರು ದಿನಗಳ ಕಮ್ಮಟವನ್ನು ಮಾರ್ಚ್ ತಿಂಗಳಲ್ಲಿ ನಡೆಸಲು ಉದ್ದೇಶಿಸಿದ್ದು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿ ಇರುವ 20 ರಿಂದ 40 ವರ್ಷ ವಯಸ್ಸುಳ್ಳ ದೇಶದ ಎಲ್ಲ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 15-02-2021 ಕೊನೆಯ ದಿನಾಂಕವಾಗಿರುತ್ತದೆ ಎಂದು ರಿಜಿಸ್ಟಾರ್ ಕರಿಯಪ್ಪ ಎನ್. ಅವರು ತಿಳಿಸಿದ್ದಾರೆ. ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್ http://karnatakasahithyaacademy.org ಇಂದ ಅರ್ಜಿ ನಮೂನೆ […]
ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನ

ವಿಜಯಪುರ :ಫೆ 6: 2020-21 ನೇ ಸಾಲಿಗೆ ವಿಜಯಪುರ ಉಪವಿಭಾಗದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರ ಬಾಲಕ, ಬಾಲಕಿಯರ ವಸತಿ ನಿಲಯಕ್ಕೆ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಜೈನ್, ಕ್ರೈಸ್ತ, ಬೌದ್ಧ, ಪಾರ್ಸಿ ಮತ್ತು ಸಿಖ್ ಸಮುದಾಯಕ್ಕೆ ಶೇಕಡಾ 75 ರಷ್ಟು ಇತರೆ ಸಮುದಾಯದ ವಿದ್ಯಾರ್ಥಿಗಳಿಗೆ ಶೇಕಡಾ 25 ರಷ್ಟು ಪಿಯುಸಿ, ಡಿಗ್ರಿ, ನಸಿರ್ಂಗ್, ಐಟಿಐ, ಡಿಪ್ಲೋಮಾ,ಬಿ.ಇ, ಸ್ನಾತಕೋತ್ತರ ಪದವಿ ಮತ್ತು ಎಲ್.ಎಲ್.ಬಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ/ನಿಯರಿಗೆ ಲಭ್ಯವಿರುವ ಸ್ಥಳಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತರ ಮೆಟ್ರಿಕ್ […]
ನಗರದಲ್ಲಿನ ವಿಕೇಂದ್ರಿಕೃತ ತ್ಯಾಜ್ಯ ನಿರ್ವಹಣಾ ಘಟಕಗಳ ಪರಿಶೀಲನೆ

ವಿಜಯಪುರ :ಫೆ 6: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ : 22 ಮತ್ತು 14 ರಲ್ಲಿನ ವಿಕೇಂದ್ರಿಕೃತ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಇಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಪರಿಶೀಲನೆ ನಡೆಸಿದರು. ನಗರದ ವಾರ್ಡ್ 22 ರಲ್ಲಿ ನಿರ್ಮಿಸಿರುವ ವಿಕೇಂದ್ರಿಕೃತ ತ್ಯಾಜ್ಯ ನಿರ್ವಹಣಾ ಘಟಕವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಜೊತೆಗೆ ಅಧಿಕೃತ ಪ್ರಯೋಗಾಲಯದಿಂದ ವರದಿ ಪಡೆದು ಗೊಬ್ಬರ ಮಾರಾಟ ಮಾಡುವಂತೆ ಸೂಚನೆ ನೀಡಿದರು. ನಂತರ ವಾರ್ಡ್ ನಂ -14 ರ ಡಾಲರ್ಸ್ ಕಾಲನಿಯಲ್ಲಿ ನಿರ್ಮಾಣ ಹಂತದಲ್ಲಿರುವ […]