4 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡ ತಿಕೋಟಾ ಪೊಲೀಸರು

ವಿಜಯಪುರ ಜುಲೈ 14: ಜಿಲ್ಲೆಯಲ್ಲಿ ದಿನೇ ದಿನೇ ಗಾಂಜಾ ಬೆಳೆಯುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್‌ ಇಲಾಖೆ ಇಂತವರ ವಿರುದ್ದ ಪ್ರಕರಣ ದಾಖಲಿಸಿ ಜೈಲಿಗಟ್ಟಿದರೂ, ಗಾಂಜಾ ಬೆಳೆಯುವವರು ಮಾತ್ರ ತಮ್ಮ ಕುತಂತ್ರ ಬುದ್ದಿಯಿಂದ ಯಾರಿಗೂ ಗೋತ್ತಾಗದ ಹಾಗೆ ಹೊಲಗಳಲ್ಲಿ, ತೋಟದ ಬದುವಿನಲ್ಲಿ ಅಥವಾ ಬೆಳೆಗಳ ಮಧ್ಯ ಗಾಂಜಾ ಬೆಳೆಯುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಂತಹ ಪ್ರಕರಣ ಒಂದು ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಗೇರಿ ವಿಠ್ಠಲವಾಡಿ ನಡೆದಿರುತ್ತದೆ. ಅಕ್ರಮವಾಗಿ ಗಾಂಜಾ ಬೆಳೆದ ಕಾಶಿನಾಥ ರಾಠೋಡ (40) ತನ್ನ […]

ಬಡವರ ಹಸಿವು ನೀಗಿಸಿದ ಕ್ರಾಂತಿ ಅಸೋಸಿಯೇಷನ್

ವಿಜಯಪುರ ಜೂನ್‌ 17: ವಿಜಯಪುರ ನಗರದಲ್ಲಿ ಲಾಕಡೌನ್ ಹಿನ್ನೆಲೆಯಲ್ಲಿ ಕ್ರಾಂತಿ ಅಸೋಸಿಯೇಷನ್ ನೇತೃತ್ವದಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ, ಬೇರೆ ಊರುಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಸಿದ್ಧ ಶುಚಿ-ರುಚಿಯಾದ ಆಹಾರ ಹಾಗೂ ಬಡಜನರಿಗೆ ಸುಮಾರು 2 ಸಾವಿರಕ್ಕೂ ಹೆಚ್ಚು ದಿನಸಿ ಪದಾರ್ಥಗಳ ಕಿಟ್ ವಿತರಣೆ ಮಾಡುವ ಮೂಲಕ ಬಡವರ ಹಸಿವು ನಿಗಿಸುವಲ್ಲಿ ಕ್ರಾಂತಿ ಅಸೋಸಿಯೇಷನ್‌ ದಿನವಿಡಿ ತಮ್ಮ ಸಮಾಜಿಕ ಕಾರ್ಯ ನಡೆಸುತ್ತ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕ್ರಾಂತಿ ಅಸೋಸಿಯೇಷನ್ ಅಧ್ಯಕ್ಷ, ಸಮಾಜ ಸೇವಕ ಅಬ್ದುಲ್‍ಅಜೀಮ್ ಇನಾಮದಾರ, ಕಳೆದ ಮೂರು ವರ್ಷಗಳಿಂದಲೂ ದಿನವೂ […]

ಮುದ್ದೇಬಿಹಾಳದಲ್ಲಿ ಅಕ್ರಮ ಗಾಂಜಾ ಬೆಳೆದ ರೈತನ ಬಂಧನ

ಮುದ್ದೇಬಿಹಾಳ ಜೂನ್‌ 17: ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳೂರ ಗ್ರಾಮದ ರಾಮನಗೌಡ ಬಸರಕೋಡ (38)  ತನ್ನ ಜಮೀನಿನ ಬದುವಿನಲ್ಲಿ ಇರುವ ತೆಂಗಿನ ಮರಗಳ ಕೆಳಗೆ ಮಾರಾಟ ಮಾಡುವ ಉದ್ದೇಶದಿಂದಾ ಅಕ್ರಮ ಗಾಂಜಾ ಗಿಡಗಳನ್ನು ಬೆಳೆಸಿರುತ್ತಾನೆ. ಆರೋಪಿ ಅಕ್ರಮವಾಗಿ ಬೆಳೆದ 16 ಹಸಿ ಗಾಂಜಾ ಗಿಡಗಳನ್ನು, 2 ರಿಂದಾ 5 ಅಡಿ ಎತ್ತರ ಬೆಳೆದಿದ್ದ ಗಿಡ್ಡಗಳನ್ನು ಜಪ್ತು ಮಾಡಿ ಅವುಗಳ ತೂಕ 9,800 ಗ್ರಾಂ ಆಗಿದ್ದು, ಹದಿನೈದು ಸಾವಿರ ರೂ ಬೆಲೆಯ ಗಾಂಜಾವನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುದ್ದೇಬಿಹಾಳ […]

ವಿಜಯಪುರದಲ್ಲಿ 20 ಕ್ಕೂ ಹೆಚ್ಚು ಬ್ಯ್ಲಾಕ್‌ ಫಂಗಸ್‌ ಪ್ರಕರಣಗಳು ಪತ್ತೆ: ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ ಮೇ 18: ಬ್ಲಾಕ್ ಫಂಗಸ್ ಕಾಯಿಲೆ ವಿಜಯಪುರ ಜಿಲ್ಲೆಗೂ ಕಾಲಿಟ್ಟಿದೆ. ಸದ್ಯ ಜಿಲ್ಲೆಯಲ್ಲಿ ಭ್ಲ್ಯಾಕ್ ಫಂಗಸ್ 20 ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ತಿಳಿಸಿದ್ದಾರೆ. ವಿಜಯಪುರದ ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹೆಚ್ಚು ಪ್ರಕರಣಗಳಿರುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಅಂಥ ಪ್ರಕರಣ ಕಂಡು ಬಂದರೆ ಅಲ್ಲಿಯೂ ಪ್ರತ್ಯೇಕ ವಾರ್ಡ್ ಮಾಡುವ […]

ರವಿ ಡಿ ಚನ್ನಣ್ಣನವರ ಪೋಟೋ ಹಾಕಿಕೊಂಡು ವಾಹನ ಓಡಿಸುತ್ತಿದ್ದ ಚಾಲಕನಿಗೆ ರೂ.500 ದಂಡ

ವಿಜಯಪುರ ಮೇ 17: ವಿಜಯಪುರ ನಗರದ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಓಮಿನಿ ಕಾರ್ ಹಿಂಭಾಗ ಎಸ್ ಪಿ ರವಿ ಡಿ ಚೆನ್ನಣ್ಣನವರ ಪೊಟೋ ಹಾಕಿಕೊಂಡು ಚಾಲಕ ವಾಹನ ಓಡಿಸುತ್ತಿದ್ದ. ಸರಿಯಾದ ದಾಖಲಾತಿ ನೀಡದ್ದಕ್ಕೆ ರೂ. 500 ದಂಡ ಹಾಕಿ ಕಳುಹಿಸಿದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ವಿಜಯಪುರ ನಗರದಲ್ಲಿ ಲಾಕಡೌನ್ ಮುಂದುವರೆದಿದ್ದು, ಅನಗತ್ಯ ಹೊರಗಡೆ ಬರುವವರ ವಿರುದ್ದ ದಂಡ ಹಾಗೂ ವಾಹನ ಸೀಜ್‌ ಮಾಡುತ್ತಿದ್ದಾರೆ. ಜನರೂ ಕೂಡ ನಿಗದಿತ ಸಮಯದಲ್ಲಿ ಮಾರುಕಟ್ಟೆಗಳತ್ತ ಬಂದು ಹೋಗುತ್ತಿದ್ದಾರೆ. ಅವಶ್ಯಕತೆ […]

ಬಸವನ ಬಾಗೇವಾಡಿಯಲ್ಲಿ ಅಪ್ರಾಪ್ತ ದಲಿತ ಬಾಲಕಿಯರ ಮೇಲೆ ಅತ್ಯಾಚಾರ: ಗ್ರಾಮಸ್ಥರಿಂದ ಕುಟುಂಬಕ್ಕೆ ಜೀವಬೆದರಿಕೆ

ಬಸವನಬಾಗೇವಾಡಿ: ದಲಿತರ ಮೇಲಿನ ದೌರ್ಜನ್ಯಕ್ಕೆ ಅಂತ್ಯವೇ ಇಲ್ಲದಂತಾಗಿದೆ. ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಅತ್ಯಾಚಾರ ಪ್ರಕರಣಗಳು ಕೇಳಿಬರುತ್ತಿದ್ದವು. ಈಗ ವಿಜಯಪುರದ ಬಸವನಬಾಗೇವಾಡಿಯಲ್ಲಿ ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಬಾವಿಗೆ ಎಸೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಬಸವನಬಾಗೇವಾಡಿ ತಾಲೂಕಿನ ಕುದುರೆ ಸಾಲವಾಡಗಿ ಗ್ರಾಮದ 14 ಮತ್ತು 15 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರು ಕಾಣೆಯಾಗಿದ್ದರು. ಕಾಣೆಯಾದ ಎರಡು ದಿನಗಳ ನಂತರ ಇಬ್ಬರ ಮೃತ ದೇಹಗಳು ಕೈ ಕಟ್ಟಿದ ಸ್ಥಿತಿಯಲ್ಲಿ […]

ಅಪಹರಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟ ಖತರ್ನಾಕ್ ಆರೋಪಿಗಳು ಅಂದರ್

ವಿಜಯಪುರ ಮೇ 07: ಗುತ್ತಿಗೆದಾರನೊಬ್ಬನ ತಂದೆ ಹಾಗೂ ಕಾರು ಚಾಲಕನನ್ನು ಅಪಹರಿಸಿ 5 ಲಕ್ಷ ರೂ. ಬೇಡಿಕೆ ಇಟ್ಟು ಹಣ ನೀಡದಿದ್ದರೆ ನಿನಗೆ ಹಾಗೂ ನಿನ್ನ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ 6 ಜನರನ್ನು ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಅಪಹರಣಕಾರರಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್, 5 ಜೀವಂತ ಗುಂಡು, ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ದೇವಣಗಾಂವದ ರಮೇಶ ಈರಪ್ಪ ಸೊಡ್ಡಿ, ಆಲಮೇಲದ ಮಹಮ್ಮದ ಅಲಿ ಬಸೀರ ಅಹಮ್ಮದ ಕಲ್ಮನಿ, ಗುಲಬುರ್ಗಾ ಜಿಲ್ಲೆಯ ಅಪಝಲಪುರದ […]

ಅಕ್ರಮವಾಗಿ ರೆಮಡಿಸಿವರ್‌ ಮಾರಾಟ : ವಿಜಯಪುರ ಸರಕಾರಿ ಆಸ್ಪತ್ರೆಯ 7 ಜನರ ಬಂಧನ

ಬೇಲಿಯೇ ಎದ್ದು ಹೊಲ ಮೈದಂತೆ ಗಾದೆ ಮಾತು ಅಕ್ಷರ ಸಹ ನಿಜವಾಗಿದೆ. ಪ್ರಾಣ ರಕ್ಷಿಸಬೇಕಾದವರು ರಾಕ್ಷಸರಂತೆ ನಡೆದುಕೊಳ್ಳುತ್ತಿದ್ದಾರೆ. ರೋಗಿಗಳ ಜೀವದ ಜೊತೆ ಆಟವಾಡುತ್ತಿದ್ದಾರೆ ಇಂತಹ ಮನಸ್ಥಿತಿ ಹೊಂದಿದ ವಿಷ ಜಂತುಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ. ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ನೀಡುವ ರೆಮ್ಡಿಸಿವರ್ ಔಷಧನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ ಜಿಲ್ಲಾ ಅಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ಎಳು ಜನ ಸಿಬ್ಬಂದಿಯನ್ನು ಬಂಧಿಸುವಲ್ಲಿ ವಿಜಯಪುರ ಸಿ.ಇ.ಎನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಅನುಪಮ್ ಅಗರವಾಲ್‌ […]

ಇಂಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದ ಸಾವು: ವೈದ್ಯರು-ಸಂಬಂಧಿಕರ ನಡುವೆ ವಾಗ್ವಾದ

ವಿಜಯಪುರ ಮೇ 07: ಇಂಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದ ರೋಗಿ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿ, ಮೃತರ ಸಂಬಂಧಿಕರು ವೈದ್ಯರೊಂದಿಗೆ ವಾಗ್ವಾದ ನಡೆಸಿದ್ದಾರೆ. ನಿಮ್ಮ ಪೇಶೆಂಟ್ ಸಿರಿಯಸ್ ಇದೆ. ಬದುಕುವುದಿಲ್ಲ ಎಂದು ರೋಗಿ ಹಾಗೂ ಸಂಬಂಧಿಕರಲ್ಲಿ ಅಧೈರ್ಯ ತುಂಬುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಧೈರ್ಯ ತುಂಬುವ ಮಾತನಾಡುವದನ್ನು ಬಿಟ್ಟು ಅಧೈರ್ಯ ತುಂಬುತ್ತಿದ್ದಾರೆ. ಇದರಿಂದ ರೋಗಿಗಳು ಭಯಗೊಂಡು ಬಲಿಯಾಗುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇಂಡಿ ತಾಲೂಕು ಆಸ್ಪತ್ರೆ ವೈದ್ಯ ಡಾ. ಅಮೀತ ಕೋಳೆಕರ ಅವರೊಂದಿಗೆ […]

ರೆಮ್‍ಡಿಸಿವಿರ್ ಔಷಧಿ ಅಕ್ರಮ ಮಾರಾಟ: ಮೂವರ ಬಂಧನ

ವಿಜಯಪುರ ಮೇ 01: ಸೋಂಕಿತರ ಜೀವ ರಕ್ಷಕ ರೆಮ್‍ಡಿಸಿವಿರ್ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ಗಾಂಧಿಚೌಕ್ ಪೊಲೀಸರು ಬಂಧಿಸಿದ್ದಾರೆ. ಕೋವಿಡ್ ರೋಗಿಗಳಿಗೆ ನೀಡುವ ರೆಮ್‍ಡಿಸಿವರ್ ಚುಚ್ಚುಮದ್ದನ್ನು ಅಕ್ರಮವಾಗಿ ಇಟ್ಟುಕೊಂಡು, ಹಣ ಸಂಪಾದನೆ ಮಾಡುವ ಉದ್ದೇಶದಿಂದ 22,000/ ರೂಗಳಿಗೆ ಒಂದರಂತೆ ಮಾರಾಟ ಮಾಡುತ್ತಿದ್ದ ಖದೀಮರಿಂದ ರೆಮ್‍ಡಿಸಿವರ್ ಚುಚ್ಚುಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ದಾತ್ರಿ ಮಸಿದಿಯ ಹತ್ತಿರ ದಾಳಿ ಮಾಡಿ ರಾಕೇಶ ಹಣಮಂತ ಹಲಗಣಿ, ರೂಪಾಲಿ ರಾಕೇಶ ಹಲಗಣಿ, ಸ್ಟಾಪ್ ನರ್ಸ್ ಧನ್ವಂತರಿ ಆಸ್ಪತ್ರೆ, […]