Vijayapura News | ಎಲ್ಲಾ ಮುಗಿದ ಮೇಲೆ ಟೀಂ ಮಾಡಿದ್ದಾರೆ | ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ

ವಿಜಯಪುರ: ವಕ್ಫ್ ನೋಟಿಸ್ ವಿಚಾರಕ್ಕೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಜನರಿಗೆ ಆಗುತ್ತಿರುವ ಅನ್ಯಾದ ಕುರಿತಾಗಿ ಮಾಹಿತಿ ಪಡೆಯಲು ಬಿಜೆಪಿ ತಂಡ ರಚಿಸಿದ್ದು, ಎಲ್ಲಾ ಮುಗಿದ ಮೇಲೆ ಟೀಂ ಮಾಡಿದ್ದಾರೆ, ಇದು ಕಾಟಾಚಾರಕ್ಕೆ ಮಾಡಿದ ಟೀಂ ಹಾಗಾಗಿ ನಾನು ಹಾಗೂ ಲೋಕಸಭಾ ಸದಸ್ಯರು ಬಿಜೆಪಿ ತಂಡಕ್ಕೆ ಬಹಿಷ್ಕಾರ ಹಾಕಿದ್ದೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರ ನಗರದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿ ನಾನು ಶಾಸಕ ಹಾಗೂ ನಮ್ಮ ಲೋಕಸಭಾ ಸದಸ್ಯರಿದ್ದಾರೆ, […]
Vijayapura News | ಅಧ್ಯಾಪಕರ ‘ಸಾಮರ್ಥ್ಯ ವೃದ್ಧಿ’ ಕಾರ್ಯಾಗಾರಗಳು ಮಹತ್ವಪೂರ್ಣವಾದದ್ದು – ಡಾ.ಬಿ.ಎಮ್.ಪಾಟೀಲ್

ವಿಜಯಪುರ: Akkamahadevi University ಪ್ರಸ್ತುತ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಕ್ಷೇತ್ರದಲ್ಲಿ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಅಧ್ಯಾಪಕರ ‘ಸಾಮರ್ಥ್ಯ ವೃದ್ಧಿ’ ಕಾರ್ಯಾಗಾರಗಳು ಮಹತ್ವಪೂರ್ಣವಾಗಿದ್ದು, ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮಾರ್ಗಗಳನ್ನು ಕಲಿಯಲು ಈ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಎಮ್.ಪಾಟೀಲ್ ಹೇಳಿದರು. ಇದನ್ನೂ ಓದಿ: Bagalkote News | ಏಕಲವ್ಯ – ವೈದ್ಯಕೀಯ ಭಿತ್ತಿಚಿತ್ರ ಪ್ರದರ್ಶನ ಸ್ಪರ್ಧೆ| ಡಾ.ವೀರಣ್ಣ ಚರಂತಿಮಠರಿಂದ ಅಭಿನಂಧನೆ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ […]
Bagalkote News | ಚಿನ್ನದ ಪದಕ ವಿಜೇತೆ ಅನಿತಾ ಚವ್ಹಾಣಗೆ ರಾಜ್ಯ ವುಶು ಸಂಸ್ಥೆಯಿಂದ ಸನ್ಮಾನ

ಬಾಗಲಕೋಟೆ: International Wushu Championship ಅಂತರಾಷ್ಟ್ರೀಯ ವುಶು ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ ಪಡೆದ ಅನಿತಾ ಚವ್ಹಾಣಗೆ ಕರ್ನಾಟಕ ವುಶು ಸಂಸ್ಥೆಯವತಿಯಿಂದ ವುಶು ಸಂಸ್ಥೆಯ ಅಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಸೋಮವಾರ ಕಛೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. 2024ರ ಅಕ್ಟೋಬರ ತಿಂಗಳ ದಿನಾಂಕ 17ರಿಂದ 23 ವರೆಗೆ ಜಾರ್ಜಿಯಾ ದೇಶದ ಬಾಟೂಮಿಯಲ್ಲಿ ನಡೆದ ಅಂತರಾಷ್ಟ್ರೀಯ ವುಶು ಚಾಂಪಿಯನ್ನಶಿಪ್ ಕ್ರೀಡಾಕೂಟದಲ್ಲಿ 15 ದೇಶಗಳಿಂದ 1500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಗಿದ್ದರು. ಭಾರತ ದೇಶದಿಂದ ಬಾಗಲಕೋಟೆಯ ಕುಮಾರಿ ಅನಿತಾ ಚವ್ಹಾಣ ಭಾಗಿಯಾಗಿ […]
Vijayapura News | ಗೌರವ ಡಾಕ್ಟರೇಟ್ – ಸಾಹಿತಿ ಪ್ರೋ. ಸಿದ್ದಪ್ಪ ಬಿ. ಸಾವಳಸಂಗ

ವಿಜಯಪುರ: ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಪ್ರೋ. ಸಿದ್ದಪ್ಪ ಬಿ. ಸಾವಳಸಂಗ ಇವರಿಗೆ ಶಿಕ್ಷಣ ಮತ್ತು ಸಾಹಿತ್ಯದ ಸಾಧನೆಗಾಗಿ, ಕೇಂದ್ರ ಸರಕಾರದಿಂದ ಅನುಮೋದಿತ “ವರ್ಡ್ ಚಾರಿಟಿ ವೆಲ್ ಫೇರ್ ಫೌಂಡೇಶನ್, ದೆಹಲಿ” ಸಂಸ್ಥೆಯಿಂದ ಇತ್ತೀಚೆಗೆ 2024 ನೇ ಸಾಲಿನ “ಗೌರವ ಡಾಕ್ಟರೇಟ್” ಪದವಿ ನೀಡಲಾಗಿದೆ. ಅವರಿಗೆ ಕಾಲೇಜು ಸಿಬ್ಬಂದಿ, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: Vijayapura News | ಬಸವಾದಿ ಶರಣರ ವಿಚಾರಗಳೆ […]
Vijayapura News | ಜಿಲ್ಲಾ ನ್ಯಾಯವಾದಿಗಳ ಸಂಘದ ನೂತನ ಪದಾಧಿಕಾರಿಗಳ ನೇಮಕ

ವಿಜಯಪುರ: ಜಿಲ್ಲಾ ನ್ಯಾಯವಾದಿಗಳು ಸಂಘದ ಪದಾಧಿಕಾರಿಗಳ 2 ವರ್ಷಗಳ ಅವಧಿಯ ಚುನಾವಣೆ ಜಿಲ್ಲಾ ನ್ಯಾಯಾಲಯದ ವಕೀಲರ ಸಭಾಭವನದಲಿ ಜರುಗಿತು. ನೂತನ ಅಧ್ಯಕ್ಷರಾಗಿ ಡಿ.ಜಿ.ಬಿರಾದಾರ ವಕೀಲರು, ಉಪಾಧ್ಯಕ್ಷರಾಗಿ ಸುನೀಲ ಬಿ. ಬಿರಾದಾರ ವಕೀಲರು, ಪ್ರಧಾನ ಕಾರ್ಯದರ್ಶಿಗಳಾಗಿ ಸುರೇಶ ಎಸ್.ಚೂರಿ ವಕೀಲರು, ಜಂಟಿ ಕಾರ್ಯದರ್ಶಿಯಾಗಿ ಉಸ್ಮಾನ ಎಮ್. ಆಲಗೂರ ವಕೀಲರು, ಲೈಬ್ರರಿ ಕಾರ್ಯದರ್ಶಿ ಯಲ್ಲಪ್ಪ ಬಿ.ಬಡಿಗೇರ ವಕೀಲರು, ಖಜಾಂಚಿಯಾಗಿ ಕಾಖಂಡಕಿ ಎಮ್.ಎ. ವಕೀಲರು ಹಾಗೂ ಮ್ಯಾನೇಜಿಂಗ್ ಕಮೀಟಿ ಸದಸ್ಯರಾಗಿ ಬಸವರಾಜ ಡಿ.ಬಿರಾದಾರ ವಕೀಲರು, ವಿನಾಯಕ ಎಚ್.ಗಾಳಪ್ಪಗೋಳ ವಕೀಲರು, ಮಹಮ್ಮದಗೌಸ ಹವಾಲ್ದಾರ […]
Vijayapura News | ನಾಗರಿಕ ಸೌಲಭ್ಯ ವಸತಿ ನಿಲಯ ಕಟ್ಟಡದ ಸದುಪಯೋಗವಾಗಬೇಕು : ಡಾ. ಸುಧಾಮೂರ್ತಿ

ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ನಾಗರಿಕ ಸೌಲಭ್ಯ ವಸತಿ ನಿಲಯ ದಿಂದ ಹಲವು ಬಡಜನರಿಗೆ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು. ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ 2024-25ನೇ ಸಾಲಿನಲ್ಲಿ ಶ್ರೀಮತಿ ಸುಧಾ ಮೂರ್ತಿ ರಾಜ್ಯ ಸಭಾ ಸಂಸದರು ಇವರ ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ […]
Vijayapura News | ರೈತರ ಒಂದಿಷ್ಟೂ ಜಮೀನು ವಕ್ಫ್ ಗೆ ಸೇರಿಸಿಲ್ಲ | ಅನಾವಶ್ಯಕವಾಗಿ ಸೃಷ್ಟಿಸಲಾದ ಗೊಂದಲದ ಅಂತ್ಯ | ಟಾಸ್ಕಪೋರ್ಸ್ ಸಮಿತಿ ರಚನೆಗೆ : ಸಚಿವ ಡಾ.ಎಂ.ಬಿ.ಪಾಟೀಲ ಸೂಚನೆ

ವಿಜಯಪುರ: ಜಿಲ್ಲೆಯ ವಕ್ಫ್ Waqf ಆಸ್ತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‍ಪೋರ್ಸ ಸಮಿತಿಯೊಂದನ್ನು ರಚಿಸಿ, 1964 ರಿಂದ 1974 ರವರೆಗಿನ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸೂಚಿಸಿದರು. ನಗರದ ಸೋಲಾಪುರ ರಸ್ತೆಯಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಜಿಲ್ಲೆಯ ವಿವಿಧ ತಹಶೀಲ್ದಾರರು, ವಕ್ಫ್ Waqf ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಿಜಯಪುರ ಜಿಲ್ಲೆಯಾದ್ಯಂತ […]
Vijayapura News | ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ದೀಪದಾನ ಸಮಾರಂಭ

ವಿಜಯಪುರ: ನಗರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಶೈಕ್ಷಣಿಕ ವರ್ಷದ ಕೊನೆಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ದೀಪದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಉದಯಕುಮಾರ್ ಕೆ ಕುಲಕರ್ಣಿ, ಪ್ರಾಧ್ಯಾಪಕರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ. ರವರು ಆಗಮಿಸಿ ” ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕನೊಬ್ಬ ಗುರುತರವಾದ ಜವಾಬ್ದಾರಿಯುಳ್ಳ ವ್ಯಕ್ತಿಯಾಗಿದ್ದಾನೆ ಅಂತಹ ಪವಿತ್ರ ವೃತ್ತಿಯನ್ನ ಆಯ್ದುಕೊಂಡ ತಾವುಗಳೆಲ್ಲ ಧನ್ಯರು, ಜೊತೆಗೆ ನಾವು ನೀವು ಸೇರಿಕೊಂಡು ಉತ್ತಮ ಸಮಾಜದ ಜೊತೆಗೆ ಹೊಸ ಭವ್ಯ ಭಾರತವನ್ನ […]
ಕನ್ನಡ ರಾಜ್ಯೋತ್ಸವ: ಕರ್ನಾಟಕದ ಪರಂಪರೆ ಮತ್ತು ಏಕತೆ ಆಚರಣೆ

“ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ” – ಈ ಸಾಲು ರಾಷ್ಟ್ರಕವಿ ಕುವೆಂಪು ಅವರ ಕವಿತೆ ವ್ಯಕ್ತಪಡಿಸುತ್ತದೆ. ಕನ್ನಡ ಕೇವಲ ಭಾಷೆ ಅಲ್ಲ, ಅದು ನಮ್ಮ ಪರಂಪರೆ, ಆಚರಣೆ ಮತ್ತು ಭಾವನೆಗಳ ಸಂಕೇತವಾಗಿದೆ. ಬನ್ನಿ ಕನ್ನಡ ರಾಜ್ಯೋತ್ಸವ 2024 ರ ಇತಿಹಾಸವನ್ನು ತಿಳಿಯೋಣ. ಕರ್ನಾಟಕ ರಾಜ್ಯದ ಹಿಂದಿನ ಹೆಸರು “ಮೈಸೂರು ರಾಜ್ಯ”. 1950ರಲ್ಲಿ ಭಾರತ ಗಣರಾಜ್ಯವಾಗಿ ಹೊರಹೊಮ್ಮಿತು. ನಂತರ, ಭಾಷೆಯ ಆಧಾರದ ಮೇಲೆ ರಾಜ್ಯಗಳ ರಚನೆಯ ಪ್ರಕ್ರಿಯೆ ಆರಂಭವಾಯಿತು. […]
Vijayapura News | ಗಮಕ ಕಲೆ ಪಠ್ಯದಲ್ಲಿ ಸೇರಿಸಿ – ಮಕ್ಕಳ ಸಾಹಿತಿ ಜಂಬುನಾಥ್ ಕಂಚ್ಯಾಣಿ

ವಿಜಯಪುರ: Gamaka art ಗಮಕಲೆಯು 64 ಲಲಿತ ಕಲೆಗಳಲ್ಲಿ ಒಂದು ಕಲೆ ಯಾಗಿದೆ, ಹಳೆಗನ್ನಡ ನಡುಗನ್ನಡ ಹಾಗೂ ಹೊಸಗನ್ನಡ ಕಾವ್ಯಗಳನ್ನು ಸ್ರೋತ್ರುಗಳಿಗೆ ತಲ್ಪಿಸಲು ಗಮಕ ಕಲೆಯು ಪ್ರಮುಖ ಮಾಧ್ಯಮವಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜಂಬುನಾಥ್ ಕಂಚ್ಯಾಣಿ ಎಂದು ಹೇಳಿದರು. ಶ್ರೀಮತಿ ಬಂಗಾರಮ್ಮ ಸಜ್ಜನ್ ಮಹಿಳಾ ಪದವಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮ ಜರುಗಿತು ಮುಖ್ಯ ಅತಿಥಿಗಳಾಗಿ ಮಾತನಾಡಿದವರು ಈ ಕಲೆಯಲ್ಲಿ ವಾಚನ ಮತ್ತು ವ್ಯಾಖ್ಯಾನ […]