Bagalkote News | ಚಿನ್ನದ ಪದಕ ವಿಜೇತೆ ಅನಿತಾ ಚವ್ಹಾಣಗೆ ರಾಜ್ಯ ವುಶು ಸಂಸ್ಥೆಯಿಂದ ಸನ್ಮಾನ

International Wushu Championship image

ಬಾಗಲಕೋಟೆ: International Wushu Championship ಅಂತರಾಷ್ಟ್ರೀಯ ವುಶು ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ ಪಡೆದ ಅನಿತಾ ಚವ್ಹಾಣಗೆ ಕರ್ನಾಟಕ ವುಶು ಸಂಸ್ಥೆಯವತಿಯಿಂದ ವುಶು ಸಂಸ್ಥೆಯ ಅಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಸೋಮವಾರ ಕಛೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.

2024ರ ಅಕ್ಟೋಬರ ತಿಂಗಳ ದಿನಾಂಕ 17ರಿಂದ 23 ವರೆಗೆ ಜಾರ್ಜಿಯಾ ದೇಶದ ಬಾಟೂಮಿಯಲ್ಲಿ ನಡೆದ ಅಂತರಾಷ್ಟ್ರೀಯ ವುಶು ಚಾಂಪಿಯನ್ನಶಿಪ್ ಕ್ರೀಡಾಕೂಟದಲ್ಲಿ 15 ದೇಶಗಳಿಂದ 1500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಗಿದ್ದರು. ಭಾರತ ದೇಶದಿಂದ ಬಾಗಲಕೋಟೆಯ ಕುಮಾರಿ ಅನಿತಾ ಚವ್ಹಾಣ ಭಾಗಿಯಾಗಿ ಅತ್ಯುತ್ತಮ ಪ್ರದರ್ಶನ ನೀಡಿ ತಾವಲು ವಿಭಾಗದ ಕ್ವಾನ್ ಡೌ ದಲ್ಲಿ ಬಂಗಾರ ಪದಕ ಹಾಗೂ ನಾನ್ ಕ್ವಾನ್ ಟೈಪ್‍ದಲ್ಲಿ ಬೆಳ್ಳಿಯ ಪದಕ ಪಡೆದುಕೊಂಡು ಭಾರತ ದೇಶ ಹಾಗೂ ರಾಜ್ಯಕ್ಕೆ ಬಾಗಲಕೋಟೆ ಜಿಲ್ಲೆ ಹಾಗೂ ಕರ್ನಾಟಕ ವುಶು ಸಂಸ್ಥೆಗೆ ಕೀರ್ತಿ ತಂದಿದ್ದಾಳೆ.

ಇದನ್ನೂ ಓದಿ: Vijayapura News | ಗೌರವ ಡಾಕ್ಟರೇಟ್ – ಸಾಹಿತಿ ಪ್ರೋ. ಸಿದ್ದಪ್ಪ ಬಿ. ಸಾವಳಸಂಗ

International Wushu Championship ಇವಳಿಗೆ ಸಂಘದ ಕಛೇರಿಯಲ್ಲಿ ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಸನ್ಮಾನಿಸಿ ಶುಭ ಹಾರೈಸಿ ಮತನಾಡಿದ ಅವರು, ಕರ್ನಾಟಕ ರಾಜ್ಯ ವುಶು ಸಂಸ್ಥೆಗೆ ಹಮ್ಮೆಯ ವಿಷಯವಾಗಿದ್ದು, ವುಶು ಪ್ರಾರಂಭವಾಗಿ 37 ವರ್ಷವಾಗಿದೆ, ಈ ತರದ ಸಾಧನೆ ಮಾಡಿರುವುದು ಇದೆ ಪ್ರಥಮ, ಅದು ಮಹಿಳಾ ವಿಭಾಗ ಮತ್ತು ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರತಿಭೇ ಸಾಧನೆ ಮಾಡಿರುವುದು ಬಾಗಲಕೋಟೆ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಇದನ್ನೂ ಓದಿ: Vijayapura News | ಬಸವಾದಿ ಶರಣರ ವಿಚಾರಗಳೆ ಬದುಕಿಗೆ ಆದರ್ಶ – ಶಂಕರ ಬಿದರಿ

ಈ ಸಂದರ್ಭದಲ್ಲಿ ರಾಜ್ಯ ವುಶು ಸಂಸ್ಥೆಯ ಉಪಾಧ್ಯಕ್ಷರಾದ ಅಶೋಕ ಸಜ್ಜನ ಬೇವೂರ, ಕುಮಾರಸ್ವಾಮಿ ಹಿರೇಮಠ, ರಾಜು ನಾಯ್ಕರ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶೋಕ ಮೋಖಾಶಿ, ಸಂಗಮೇಶ ಲಾಯದಗುಂದಿ,ಆರ್.ಎಮ್.ಹಿರೇಮಠ, ಅವಿನಾಶ ಹಿರೇಮಠ, ಸೇರಿದಂತೆ ಅನೇಕರು ಇದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »