ವಿಜಯಪುರ: Gamaka art ಗಮಕಲೆಯು 64 ಲಲಿತ ಕಲೆಗಳಲ್ಲಿ ಒಂದು ಕಲೆ ಯಾಗಿದೆ, ಹಳೆಗನ್ನಡ ನಡುಗನ್ನಡ ಹಾಗೂ ಹೊಸಗನ್ನಡ ಕಾವ್ಯಗಳನ್ನು ಸ್ರೋತ್ರುಗಳಿಗೆ ತಲ್ಪಿಸಲು ಗಮಕ ಕಲೆಯು ಪ್ರಮುಖ ಮಾಧ್ಯಮವಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜಂಬುನಾಥ್ ಕಂಚ್ಯಾಣಿ ಎಂದು ಹೇಳಿದರು.
ಶ್ರೀಮತಿ ಬಂಗಾರಮ್ಮ ಸಜ್ಜನ್ ಮಹಿಳಾ ಪದವಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮ ಜರುಗಿತು ಮುಖ್ಯ ಅತಿಥಿಗಳಾಗಿ ಮಾತನಾಡಿದವರು ಈ ಕಲೆಯಲ್ಲಿ ವಾಚನ ಮತ್ತು ವ್ಯಾಖ್ಯಾನ ಎಂಬ ಎರಡು ಭಾಗಗಳಿವೆ ಕವಿಯ ಕಾವ್ಯರಸ ಮತ್ತು ಸಂಗೀತದ ಗಾನರಸಗಳ ಸಮರಸದಿಂದ ಸ್ತೋತ್ರಗಳಿಗೆ ರಸಾನಂದವನ್ನು ಉಣಬಡಿಸುವುದೇ ಗಮಕ ಕಲೆಯ ಉದ್ದೇಶ.
ಇದನ್ನೂ ಓದಿ: Bagalkote News | ಶ್ರದ್ದೆ ಮತ್ತು ಏಕಾಗ್ರತೆಯ ಮೂಲಕ ಯಶಸ್ಸು – ಮಾನಸಿಕ ಆರೋಗ್ಯ ದಿನಾಚರಣೆ : ನ್ಯಾ.ಚಂದ್ರಶೇಖರ ದಿಡ್ಡಿ
Gamaka art ವ್ಯಾಖ್ಯಾನಕಾರ ಕಾವ್ಯದ ಗೂಡಾರ್ಥವನ್ನು ಹೇಳಿ ಮತ್ತಷ್ಟು ಸರಳಿಕರಣಗೊಳಿಸುತ್ತಾರೆ ಮಕ್ಕಳಿಗೆ ಸಾಹಿತ್ಯ ದರ್ಶನವಾಗಬೇಕಾದರೆ ಗಮಕ ಕಲೆಯು ಪಠ್ಯದಲ್ಲಿ ಸೇರಿಸಬೇಕೆಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಹಿರಿಯ ಗಮಕ ಕಲಾವಿದರಾದ ಶ್ರೀಮತಿ ಶಾಂತ ಕೌತಾಳ ಗಮಕ ವಾಚನ ಮಾಡಿದರು.
ಇದನ್ನೂ ಓದಿ: Vijanapura News : ಕನ್ನಡ ಸಾಹಿತ್ಯ ಪರಿಷತ್ತಿಗೆ ಐತಿಹಾಸಿಕ ಹಿನ್ನೆಲೆ: ಜಿಲ್ಲಾಧಿಕಾರಿ T ಭೂಬಾಲನ್
ಕಲ್ಯಾಣರಾವ್ ದೇಶಪಾಂಡೆ ವ್ಯಾಖ್ಯಾನ ನೀಡಿದರು ಅವರು ಲಕ್ಷ್ಮಿಶ ಕವಿಯ ಜೈಮಿನಿಭಾರತದ ಚಂದ್ರಹಾಸ ವಿಷಯೆಯ ವಿವಾಹ ಪಸಂಗವನ್ನು ಪ್ರಸ್ತುತಪಡಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಭಕ್ತಿ ಮಹೇಂದ್ರಕರ ವಹಿಸಿ ಮಾತನಾಡಿದರು ಗಮಕ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ ಎಂ ಪಾಟೀಲ ಪ್ರಾಸ್ತವಿಕವಾಗಿ ಮಾತನಾಡಿದರು ಡಾ. ಆರ್ ಜಿ ಕಮತರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಿ ಕೆ ಗೋಟ್ಯಾಳ ನಿರೂಪಿಸಿದರು ಪರಶುರಾಮ ಪೋಳ ಸ್ವಾಗತಿಸಿದರು ಈರಣ್ಣ ತೊಂಡಿಕಟ್ಟಿ ವಂದಿಸಿದರು.






