House Collapse Cases ಹಿನ್ನೆಲೆ: ಜಿಲ್ಲೆಯಲ್ಲಿ ಶೀಥಿಲ ಮನೆಗಳ ಸಮೀಕ್ಷೆಗೆ ಒತ್ತಾಯ

House Collapse Cases protest in Vijayapura district

ವಿಜಯಪುರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿರುವ House Collapse Cases ಜನರಲ್ಲಿ ಆತಂಕ ಮೂಡಿಸಿದೆ. ಮೋರಟಗಿ ಗ್ರಾಮದಲ್ಲಿ ವಾರದ ಹಿಂದೆ ನಡೆದ ಮನೆ ಮೇಲ್ಚಾವಣಿ ಕುಸಿತ ದುರಂತದಲ್ಲಿ ನಾಲ್ವರು ಮೃತಪಟ್ಟ ಘಟನೆ ಮಾಸುವ ಮುನ್ನವೇ, ನಿಡಗುಂದಿ ಪಟ್ಟಣದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಮೇ 20ರಂದು ರಾತ್ರಿ ಸುರಿದ ಭಾರಿ ಮಳೆಯಿಂದ ಹಳೆಯ ಮನೆಯ ಚಾವಣಿ ಕುಸಿದು ಬಿದ್ದ ಪರಿಣಾಮ 55 ವರ್ಷದ ಮಹಾದೇವಿ ವಾರದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತಿ ಶಿವಾನಂದ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಈ ಸರಣಿ ದುರಂತಗಳು ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಜನರ ವಸತಿ ಸುರಕ್ಷತೆಯನ್ನು ಗಂಭೀರ ಸಮಸ್ಯೆಯನ್ನಾಗಿ ಮಾಡಿವೆ ಎಂದು ದಲಿತ ಸ್ವರಾಜ್ಯ ಸೇನೆ-ಕರ್ನಾಟಕ ಸಂಘಟನೆ ಆರೋಪಿಸಿದೆ. ಸಂಘಟನೆಯ ಮುಖಂಡರು ಮಾತನಾಡಿ, ಜಿಲ್ಲೆಯಾದ್ಯಂತ ಕುಸಿಯುವ ಹಂತದಲ್ಲಿರುವ ಹಾಗೂ ವಾಸಕ್ಕೆ ಯೋಗ್ಯವಲ್ಲದ ಮನೆಗಳ ಸಮಗ್ರ ಸಮೀಕ್ಷೆಯನ್ನು ತಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿದರು.

House Collapse Cases ಆರ್ಥಿಕ ಸಂಕಷ್ಟದಿಂದ ಸಾವಿರಾರು ಕುಟುಂಬಗಳು ಅಪಾಯಕಾರಿ ಮನೆಗಳಲ್ಲೇ ಜೀವನ ಸಾಗಿಸುತ್ತಿವೆ. ಸರ್ಕಾರದ ವಸತಿ ಯೋಜನೆಗಳ ಪ್ರಚಾರ ಇದ್ದರೂ, ನಿಜವಾದ ಫಲಾನುಭವಿಗಳಿಗೆ ಮನೆಗಳು ತಲುಪುತ್ತಿಲ್ಲ ಎಂಬುದು ಈ ದುರಂತಗಳಿಂದ ಸಾಬೀತಾಗಿದೆ ಎಂದು ಆರೋಪಿಸಲಾಗಿದೆ.

ಜಿಲ್ಲಾಧಿಕಾರಿಗಳು ವಸತಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನೇರವಾಗಿ ಚರ್ಚಿಸಿ, ವಿಶೇಷ ಪ್ಯಾಕೇಜ್ ಅಡಿಯಲ್ಲಿ ಗರಿಷ್ಠ ಸಂಖ್ಯೆಯ ಮನೆಗಳ ಮಂಜೂರಾತಿ ಪಡೆಯಬೇಕು ಎಂದು ಸಂಘಟನೆ ಆಗ್ರಹಿಸಿದೆ. ಮಂಜೂರಾಗುವ ಮನೆಗಳು ರಾಜಕೀಯ ಪ್ರಭಾವವಿಲ್ಲದೆ ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಪಾರದರ್ಶಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ವಸತಿ ರಹಿತರ ಹಕ್ಕಿಗಾಗಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ. ಮುಖಂಡರಾದ ಗೌಡಪ್ಪ ಬಡಿಗೇರ, ಅಮೃತ್ ಮಾವಿನಹಳ್ಳಿ, ಪರಶುರಾಮ್ ಕರವಿನಾಳ, ತಿಪ್ಪಣ್ಣ ಡಿ., ಮಹೆಬೂಬ್ ಮುಜಾವರ್, ಅರುಢ ಸ್ವಾಮಿ ಕಬಾಡೆ, ಗುರುಪಾದ್ ಬಿರಾದಾರ, ಸುಭಾಷ್ ಪಾಂಡ್ರೆ ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು