ವಿಜಯಪುರ: Mava Gutka Case ಸಂಬಂಧ ವಿಜಯಪುರದ ಗೋಲಗುಮ್ಮಜ ಪೊಲೀಸ್ ಠಾಣೆಯಲ್ಲಿ ಅಕ್ರಮ ಮಾವಾ ತಯಾರಿ ಮತ್ತು ಮಾರಾಟ ಪ್ರಕರಣ ದಾಖಲಾಗಿದೆ. ಸರ್ಕಾರದ ಅನುಮತಿ ಇಲ್ಲದೆ ಆರೋಗ್ಯಕ್ಕೆ ಹಾನಿಕಾರಕವಾಗುವ ಮಾವಾ ಪದಾರ್ಥ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರದಲ್ಲಿ ಅಕ್ರಮ ಮಾವಾ ತಯಾರಿ ಪತ್ತೆ
ಗೋಲಗುಮ್ಮಜ ಪೊಲೀಸ್ ಠಾಣೆ ಗುನ್ನೆ ನಂ: 74/2026 ಕಲಂ 274, 275 ಬಿಎನ್‌ಎಸ್ ಹಾಗೂ 20(2), 24 ಕೋಟ್ಪಾ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 23.05.2026 ರಂದು ಮಧ್ಯಾಹ್ನ 13.35 ಗಂಟೆ ಸುಮಾರಿಗೆ ಆರೋಪಿತನಾದ ಬಷೀರ್ ಅಹ್ಮದ ಚಿಟ್ಟಸಾಬ ಮುದೋಳ, ವಾರ್ಡ್ ನಂ: 20, ಪೇಟಿ ಬಾವಡಿ, ವಿಜಯಪುರ ನಿವಾಸಿ, ಯಾವುದೇ ಪರವಾನಿಗೆ ಮತ್ತು ಲೈಸನ್ಸ್ ಇಲ್ಲದೆ ಅಡಿಕೆ ಚೂರು, ತಂಬಾಕು ಮತ್ತು ಸುಣ್ಣದ ನೀರನ್ನು ಬೆರೆಸಿ “ಮಾವಾ” ಎಂಬ ಗುಟಕಾ ಮಾದರಿಯ ಪದಾರ್ಥ ತಯಾರಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ಆರೋಪಿತನು ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗುವ ಪದಾರ್ಥವನ್ನು ತಯಾರಿಸಿ, ಆರೋಗ್ಯ ಎಚ್ಚರಿಕೆ ಸಂದೇಶ ಮುದ್ರಿಸದೇ ಮಾರಾಟ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಈ Mava Gutka Case ನಲ್ಲಿ ಪೊಲೀಸರು ಸುಮಾರು 50 ಗ್ರಾಂ ತೂಕದ ಒಟ್ಟು 15 ಪ್ಲಾಸ್ಟಿಕ್ ಪಾಕೆಟ್‌ಗಳನ್ನು ಜಪ್ತಿ ಮಾಡಿದ್ದಾರೆ. ಜಪ್ತಾದ ಮಾಲಿನ ಅಂದಾಜು ಮೌಲ್ಯ 750 ರೂಪಾಯಿ ಎಂದು ತಿಳಿಸಲಾಗಿದೆ.
ಪ್ರಕರಣ ದಾಖಲಿಸಿದ ಪೊಲೀಸ್ ಅಧಿಕಾರಿಗಳು
ಈ ಕುರಿತು ಸ:ತ: ಎಂ.ಡಿ. ಘೋರಿ, ಪಿಎಸ್‌ಐ, ಗೋಲಗುಮ್ಮಜ ಪೊಲೀಸ್ ಠಾಣೆ, ವಿಜಯಪುರ ಅವರು ನೀಡಿದ ಪಿರ್ಯಾದಿ ಮೇರೆಗೆ 23.05.2026 ರಂದು ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.








