ವಿಜಯಪುರ: ಪೋಷಣ್ ಅಭಿಯಾನ ಪ್ರಯೋಜನ ಪಡೆದುಕೊಳ್ಳಿ.

0
161

ವಿಜಯಪುರ ಸೆ.14: ಕೇಂದ್ರ ಸರ್ಕಾರ ಬಾಣಂತಿ ಮಹಿಳೆಯರ ಉತ್ತಮ ಆರೋಗ್ಯ ಹಾಗೂ ಮಕ್ಕಳ ಬೆಳವಣೆಗೆಯ ಜೊತೆಗೆ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಒಂದು ಉತ್ತಮ ಯೋಜನೆಯನ್ನು ರೂಪಿಸಿ ಸಾರ್ವಜನಿಕರ ಹಿತದೃಷ್ಠಿಯನ್ನು ಕಾಪಾಡಲು ಮುಂದಾಗಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಬಿ ಹೊಸಮನಿ ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ನಗರದ ರುಟ್‍ಸೆಟ್‍ನಲ್ಲಿ ನಡೆದ ಪೋಷಣ್ ರಥ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಅನೇಕ ಮಹಿಳೆಯರು ಹಾಗೂ ಹುಟ್ಟುವ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಅವರ ಉತ್ತಮ ಬೆಳವಣಿಗೆ ಹಾಗೂ ಸದೃಡತೆಗೆ ಕೇಂದ್ರ ಸರ್ಕಾರ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಆರೋಗ್ಯಕರ ಮಕ್ಕಳ ಜನನಕ್ಕೆ ಸಹಕಾರಿಯಾಗಿದೆ ಅದರ ಸದುಪಯೋಗವನ್ನು ಗ್ರಾಮಿಣ ಭಾಗದವರು ಪಡೆದುಕೊಳ್ಳಬೇಕು ಎಂದರು.

ಗರ್ಭಿಣಿ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ಹಾಗೂ ಅಂಗನವಾಡಿಗಳ ಬೆಳವಣಿಗೆಗಾಗಿ ಪೋಷಣ್ ಅಭಿಯಾನದಡಿ ಅಂಗನವಾಡಿ ಮುಂದಿನ ಹೊರಾಂಗಣಗಳಲ್ಲಿ ಕೈತೋಟಗಳನ್ನು ಮಾಡುವ ಕಾರ್ಯಕ್ಕೆ ಕೈಹಾಕಿದ್ದು, ಸ್ಥಳಾವಕಾಶ ಇರುವ ಅಂಗನವಾಡಿ ಕೇಂದ್ರಗಳಲ್ಲಿ ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಉತ್ತಮ ಗಿಡಗಳ ಕೈತೋಟ ನಿರ್ಮಾವಾಗಲಿದೆ ಎಂದರು.

ವಿಜಯಪುರ ತಹಶೀಲ್ದಾರ ಶ್ರೀಮತಿ ಮೋಹನ್‍ಕುಮಾರಿ ಮಾತನಾಡಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಇನ್ನು ಇದೆ ಅವರಿಗೆ ಉತ್ತಮ ಆಹಾರ ಸಿಗಲಿ ಎನ್ನುವ ಉದ್ದೇಶದಿಂದ ಇದನ್ನ ಮಾಡಲಾಗುತ್ತಿದೆ. ಮನೆಯಲ್ಲಿ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಕೈತೋಟ ನಿರ್ಮಾಣದ ಉದ್ದೇಶ ಹೊಂದಲಾಗಿದ್ದು. ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳ ಒದಗಿಸುವಿಕೆಯಿಂದ ಅನೇಕ ಮಕ್ಕಳ ಉತ್ತಮ ಹಾಗೂ ಸದೃಡ ಬೆಳವಣಿಗೆ ಹಾಗೂ ಬಾಣಂತಿ ಹೆಣ್ಣು ಮಕ್ಕಳಿಗೂ ಸಹಕಾರಿಯಾಗಲಿದೆ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ನಿರ್ಮಲಾ ಸುರಪೂರ ಅವರು ಮಾತನಾಡಿ ಮಕ್ಕಳನ್ನು ಸದೃಡ ಮಾಡುವುದು ಹಾಗೂ ಬಾಣಂತಿಯರಿಗೆ ಮಕ್ಕಳ ಉತ್ತಮ ಬೆಳವಣಿಗೆ ಮಾಡಿ ಅಪೌಷ್ಠಿಕತೆ ಹೋಗಲಾಡಿಸುವುದು ಪೋಷಣ್ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ದೆಸೆಯಲ್ಲಿ ಕ್ಷೇತ್ರಮಟ್ಟದ ಅಂಗನವಾಡಿ ಕಾರ್ಯಕರ್ತೆಯರಿಂದ ಹಿಡಿದು ಹಿರಿಯ ಅಧಿಕಾರಿಗಳ ವರೆಗೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು.

ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾತಿಗಳನ್ನು ಪೇಪರ್ ಲೆಸ್ ಮಾಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಪೋನಗಳನ್ನು ನೀಡಿ ಅದರಲ್ಲಿ ಆಪ್‍ಗಳನ್ನು ನೀಡಲಾಗಿದೆ. ಸಮೂದಾಯ ಆಧಾರಿತ ಚಟುವಟಿಕೆಗಳನ್ನು ಮೊದಲ ಹಾಗೂ 3ನೇ ಶುಕ್ರವಾರದಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಹಿಳೆ ಗರ್ಭಿಣಿಯಾದ ತಕ್ಷಣದಿಂದ ಹಿಡಿದು ಮಗು ಸದೃಡವಾಗಿ ಹುಟ್ಟಿ 6 ತಿಂಗಳಿಂದ 9 ತಿಂಗಳವರೆಗೆ ಅನ್ನ ಪ್ರಾಷಣ ಎಂದು ಮಾಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುಜಾತಾ ಎಸ್ ಕಳ್ಳಿಮನಿ, ಜಿಲ್ಲಾ ನಿರೂಪಣಾಧಿಕಾ ಕೆ.ಕೆ ಚಹ್ವಾಣ, ರುಟ್‍ಸೆಟ್ ವ್ಯವಸ್ಥಾಪಕ ರಾಜೇಂದ್ರ ಜೈನಾಪುರ ಸೇರಿದಂತೆ ಇತರರಿದ್ದರು.


 

LEAVE A REPLY

Please enter your comment!
Please enter your name here