ಕಾಂಗ್ರೆಸ್ ಪಕ್ಷದಿಂದ “ಆರೋಗ್ಯಹಸ್ತ” ಕಾರ್ಯಕ್ರಮ; ಅಬ್ದುಲ್ ಹಮೀದ ಮುಶ್ರೀಫ್

0
186

ವಿಜಯಪುರ ಸೆ 30: ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಹಾಗೂ ಫಯಾಜ ಕಲಾದಗಿ ಮುಖಂಡತ್ವದಲ್ಲಿ ಮನೆ-ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಿ ಕರೋನಾ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾಂಗ್ರೆಸ್ ಪಕ್ಷದ “ಆರೋಗ್ಯಹಸ್ತ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಶ್ರೀಫ್ ರವರು ಈಗಾಗಲೇ ವಿಜಯಪುರ ನಗರದಾದ್ಯಂತ ಹತ್ತಕ್ಕಿಂತ ಹೆಚ್ಚು ವಾರ್ಡಗಳಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ನಗರದ ಮಹಾಜನತೆ ನಮ್ಮ ಕಾರ್ಯಕರ್ತರು ಮನೆ-ಮನೆಗೆ ಆರೋಗ್ಯ ತಪಾಸಣೆಗಾಗಿ ಹೋದಾಗ ಸಂಪೂರ್ಣ ಸಹಕಾರ ನೀಡುತ್ತಿದ್ದು ಜನರಲ್ಲಿಯೂ ಈ ರೋಗದ ಬಗ್ಗೆ ಅರಿವಾಗಿದೆ ಹಾಗೂ ಜನ ಈ ರೋಗದಿಂದ ಭಯಮುಕ್ತರಾಗುತ್ತಿದ್ದು ಚಿಕಿತ್ಸೆಗಾಗಿ ಸ್ಪಂದಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕೈಗೊಂಡ ಆರೋಗ್ಯ ಹಸ್ತ ಕಾರ್ಯಕ್ರಮದಿಂದ ಜನತೆ ಧೈರ್ಯದಿಂದ ಈ ರೋಗವನ್ನು ಎದುರಿಸಿ ತಮ್ಮ ದಿನ ನಿತ್ಯದ ಜೀವನದಲ್ಲಿ ತೊಡಗಿಕೊಂಡು ಆರ್ಥಿಕ ಚೈತನ್ಯ ಕಂಡುಕೊಳ್ಳುತ್ತಿದ್ದು ಜನರಲ್ಲಿ ನೈತಿಕ ಬಲಬಂದಂತಾಗಿದೆ ಎಂದರು.

ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಳ್ಳಿಮನಿ ಅವರು ಮಾತನಾಡಿ, ವಿಜಯಪುರ ನಗರದಲ್ಲಿ ಈ ರೋಗ ಹತೋಟಿಗೆ ಬರುತ್ತಿದ್ದು ನಿಟ್ಟುಸಿರುಬಿಡುವಂತಾಗಿದೆ ಆದರೂ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ ಧರಿಸಿ ಈ ರೋಗ ಹರಡದಂತೆ ಜಾಗೃತಿವಹಿಸಿ ಕರೊನಾ ಮಹಾಮಾರಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸಹಕರಿಸಬೇಕು ಹಾಗೂ ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಿಮ್ಮ ಜೊತೆಗಿದ್ದು ಯಾರು ಎದೆಗುಂದಬಾರದು ವಿಜಯಪುರ ನಗರವನ್ನು ಕರೋನಾ ಮುಕ್ತ ಮಾಡುವಲ್ಲಿ ನಮ್ಮ ಜೊತೆ ಕೈ ಜೋಡಿಸಬೇಕೆಂದು ಜನರಲ್ಲಿ ಮನವಿ ಮಾಡಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಬಿಡಿಎ ಅಧ್ಯಕ್ಷ ಆಝಾದ ಪಟೇಲ ಮಾತನಾಡಿ, ಕಾಂಗ್ರೆಸ್ ಪಕ್ಷ “ಆರೋಗ್ಯಹಸ್ತ” ನೂತನ ಕಾರ್ಯಕ್ರಮ ತಂದಿದ್ದು ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಿಗೆ ಧೈರ್ಯ ತುಬುಂವ ಜೊತೆಗೆ ಆರೋಗ್ಯ ತಪಾಸಣೆ ಕೈಗೊಂಡು ಅವರಿಗೆ ತಿಳಿ ಹೇಳಿ ಆಸ್ಪತ್ರೆಗೆ ಕಳಿಸಿ ಅವರ ಜೀವ ರಕ್ಷಣೆ ಕೆಲಸವನ್ನು ಪಕ್ಷದ ಸ್ವಯಂ ಸೇವಕರು ಮಾಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಅಬ್ದುಲ್ ರಜಾಕ ಹೊರ್ತಿ, ಫಯಾಜ ಕಲಾದಗಿ ಮಾತನಾಡಿದರು.
ಈ ನಗರ ಬ್ಲಾಕ್ ಅಧ್ಯಕ್ಷ ಜಮೀರ್ ಭಕ್ಷಿ, ಜಲ ನಗರ ಬ್ಲಾಕ್ ಅಧ್ಯಕ್ಷ ಆರತಿ ಶಹಾಪುರ, ರಜಾಕ ಕಾಖಂಡಕಿ, ಮಹಿಬೂಬ್ ಹೊನ್ನುಟಗಿ, ನೂರ ಹೊನ್ನುಟಗಿ, ಲತೀಪ ಕಲಾದಗಿ, ಅಮೀನಸಾಬ ಅಗಸಿಮನಿ, ವಸಂತ ಹೊನಮೋಡೆ, ವಸಂತ ಹೊನಮೋಡೆ, ನಸೀಮ್ ರೋಜಿಂದಾರ, ಶಫೀಕ ಪಟೇಲ, ಜಬ್ಬಾರ ಕಲಾದಗಿ, ಐ.ಸಿ.ಪಠಾಣ, ಜಯಶ್ರೀ ಭರಾಟೆ, ತಾಜೋದ್ದೀನ ಖಲೀಪಾ, ಪರ್ವೇಜ್ ಕಲಾದಗಿ, ಪಿದಾ ಕಲಾದಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


 

LEAVE A REPLY

Please enter your comment!
Please enter your name here