ವಿಜಯಪುರ: ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲೂಕು ಕೇಂದ್ರಗಳಿಗೆ ಬಸ್ ಸೌಕರ್ಯ

0
227

ವಿಜಯಪುರ ಮೇ.27 : ವಿಜಯಪುರ ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲೂಕಾ ಕೇಂದ್ರಗಳಿಗೆ ಸಾರಿಗೆ ಸೌಕರ್ಯವನ್ನು ಕಲ್ಪಿಸಲಾಗಿದ್ದು, ಮುಂಜಾನೆ 7.00 ಗಂಟೆಯಿಂದ ಬಸ್‍ಗಳು ಕಾರ್ಯಾಚರಣೆಗೊಳ್ಳುತ್ತವೆ ಹಾಗೂ ಪ್ರಯಾಣಿಕರ ಜನದಟ್ಟಣೆಗನುಗುಣವಾಗಿ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಹಾಗೂ ಎಲ್ಲಾ ತಾಲೂಕಾ ಕೇಂದ್ರಗಳಿಂದ ವಿಜಯಪುರ ಜಿಲ್ಲಾ ಕೇಂದ್ರಕ್ಕೂ ಮುಂಜಾನೆ 7.00 ಗಂಟೆಯಿಂದ ಬಸ್ಸಿನ ಸೌಕರ್ಯ ಒದಗಿಸಲಾಗಿರುತ್ತದೆ ಎಂದು ವಿಜಯಪುರ, ಈಕರಸಾ ಸಂಸ್ಥೆ, ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಅದರಂತೆ ಸಾಯಂಕಾಲ 7.00 ಗಂಟೆಯೊಳಗೆ ನಿಗದಿತ ಸ್ಥಳ ತಲುಪುವಂತೆ, ಜಿಲ್ಲಾ ಕೇಂದ್ರದಿಂದ ತಾಲೂಕಾ ಕೇಂದ್ರಕ್ಕೆ, ತಾಲೂಕಾ ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಬಸ್ ಸೌಕರ್ಯವನ್ನು ಒದಗಿಸಲಾಗಿರುತ್ತದೆ.

ಸಮಯ ಇಂತಿದೆ: ವಿಜಯಪುರ-ಮುದ್ದೇಬಿಹಾಳ ಮಾರ್ಗದ ಬಸ್‍ಗಳು ಬಿಡುವ ಸಮಯ : 5.00 ಮುಟ್ಟುವ ಸಮಯ : 7.00 ಗಂಟೆ, ವಿಜಯಪುರ-ತಾಳಿಕೋಟ – ಬಿಡುವ ಸಮಯ : 5.00 ಮುಟ್ಟುವ ಸಮಯ : 7.00 ಗಂಟೆ, ವಿಜಯಪುರ-ಸಿಂದಗಿ – ಬಿಡುವ ಸಮಯ : 5.30 ಮುಟ್ಟುವ ಸಮಯ : 7.00 ಗಂಟೆ, ವಿಜಯಪುರ –ಇಂಡಿ – ಬಿಡುವ ಸಮಯ : 5.30 ಮುಟ್ಟುವ ಸಮಯ : 7.00 ಗಂಟೆ, ಮುದ್ದೇಬಿಹಾಳ-ವಿಜಯಪುರ-ಬಿಡುವ ಸಮಯ : 5.00 ಮುಟ್ಟುವ ಸಮಯ : 7.00 ಗಂಟೆ,ತಾಳಿಕೋಟ-ವಿಜಯಪುರ – ಬಿಡುವ ಸಮಯ : 5.00 ಮುಟ್ಟುವ ಸಮಯ : 7.00 ಗಂಟೆ,ಸಿಂದಗಿ-ವಿಜಯಪುರ-ಬಿಡುವ ಸಮಯ : 5.30 ಮುಟ್ಟುವ ಸಮಯ : 7.00 ಗಂಟೆ, ಇಂಡಿ-ವಿಜಯಪುರ-ಬಿಡುವ ಸಮಯ : 5.30 ಮುಟ್ಟುವ ಸಮಯ : 7.00 ಗಂಟೆ ಇರುತ್ತದೆ.
ಸಾರ್ವಜನಿಕ ಪ್ರಯಾಣಿಕರು ಈ ಬಸ್‍ಗಳ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಸಂಸ್ಥೆಯೊಂದಿಗೆ ಸಹಕರಿಸುವಂತೆ ಅವರು ಕೋರಿದ್ದಾರೆ.


 

ambedkar image

LEAVE A REPLY

Please enter your comment!
Please enter your name here