ವಿಜಯಪುರ: ಜಿಲ್ಲೆಯಲ್ಲಿ ತಂಬಾಕು ಮಾರಾಟ ಮತ್ತು ಬಳಕೆಗೆ ನಿಷೇದ

0
117

ವಿಜಯಪುರ ಎ.27 : ಜಿಲ್ಲೆಯಲ್ಲಿ ಕೊಟ್ಟಾ 2003 ಕಾಯ್ದೆಯಡಿ ದಿನಾಂಕ : 25-04-2020 ರಂದು ಸುರೇಖಾ, ಜಂಟಿ ನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳಾದ ಡಾ.ಮಲ್ಲನಗೌಡ ಬಿರಾದಾರ ಅವರ ನೇತೃತ್ವದಲ್ಲಿ ವಿವಿಧ ಕಿರಾಣಾ ಅಂಗಡಿಗಳ ಮೇಲೆ ದಾಳಿ ನಡೆಸಿ, ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ವಿಜಯಪುರದ ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ವಿವಿಧ ಕಿರಾಣಾ ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 22 ಪ್ರಕರಣಗಳನ್ನು ದಾಖಲಿಸಿ 2200 ರೂ.ಗಳ ದಂಡವನ್ನು ವಿಧಿಸಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯನ್ನು ಅನಿರ್ದಿಷ್ಟಾವಧಿಯವರೆಗೆ ನಿಷೇಧಿಸಿ ಎಂದು ತಂಬಾಕಿನ ಅನಾಹುತಗಳ ಕುರಿತು ಅಂಗಡಿ ಮಾಲೀಕರಿಗೆ ತಿಳಿಸಲಾಯಿತು.

ದಾಳಿಯಲ್ಲಿ ಸುರೇಖಾ, ಜಂಟಿ ನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳಾದ ಡಾ.ಮಲ್ಲನಗೌಡ ಬಿರಾದಾರ, ಸಹಾಯಕ ನಿರ್ದೇಶಕರು, ಕೆ.ಆರ್ ಕುಂಬಾರ, ಆಹಾರ ನಿರೀಕ್ಷಕರು ಶ್ರೀಮತಿ ಪಿ.ಎಸ್ ಭಾವಿಕಟ್ಟಿ, ವಿಜಯಪುರ ವಲಯ, ಶ್ರೀ ಪುಲಕೇಶಿ ಮುಖಿಹಾಳ, ಆಹಾರ ನಿರೀಕ್ಷಕರು, ವಿಜಯಪುರ, ಶ್ರೀ ಪಾಟೀಲ್ ಕಾನೂನು ಮಾಪನ ನಿರೀಕ್ಷಕರು, ವಿಜಯಪುರ ವಲಯ, ಶ್ರೀ ಫಾರೂಕಿ, ಆಹಾರ ಸುರಕ್ಷತಾಧಿಕಾರಿಗಳು, ವಿಜಯಪುರ, ಶ್ರೀ ಶ್ರೀಕಾಂತ ಪೂಜಾರ, ಸೋಶಿಯಲ್ ವರ್ಕರ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ವಿಜಯಪುರ ಹಾಗೂ ಶ್ರೀ ನಾರಾಯಣ ತೋರತ ಹಿರಿಯ ಆರೋಗ್ಯ ಸಹಾಯಕರು, ವಿಜಯಪುರ ಇವರು ಭಾಗವಹಿಸಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here