ಸಿಂದಗಿ ಉಪಚುನಾವಣೆ ತಯಾರಿ ಹೇಗಿದೆ?

0
179

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಉಪ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲಾಡಳಿತ ಕೈಗೊಂಡಿರುವ ಸಿದ್ದತೆಗಳ ಕುರಿತು ಸುದ್ದಿಗೋಷ್ಠಿ ನಡೆಸಿರುವ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್, ಎಸ್‌ಪಿ ಎಚ್. ಡಿ. ಆನಂದ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಸರಳ ಮತದಾನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಬಾರಿ ಚುನಾವಣೆಯಲ್ಲಿ ಆರು ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 2,34,584 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1,20,844 ಪುರುಷರು ಮತ್ತು 1,13,561 ಮಹಿಳಾ ಮತದಾರರು ಹಾಗೂ 32 ಇತರೆ, 147 ಸೇನೆಯಲ್ಲಿರುವ ಮತದಾರರು ತಮ್ಮ ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮತದಾನಕ್ಕಾಗಿ 271 ಸಾಮಾನ್ಯ ಮತಗಟ್ಟೆಗಳು, 26 ಆಕ್ಸಿಲರಿ ಸೇರಿದಂತೆ ಒಟ್ಟು 297 ಮತಗಟ್ಟೆಗಳನ್ನು ತೆರೆಯಲಾಗಿದೆ. 7 ಚೆಕ್ ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, 18 ಫ್ಲೈಯಿಂಗ್ ಸ್ಕ್ವಾಡ್ ತಂಡಗಳು, 22 ಜನ ಸೆಕ್ಟರ್ ಅಧಿಕಾರಿಗಳು,  6 ವಿಡಿಯೋ ನಿಗಾ ತಂಡಗಳು, 21 ಸ್ಟ್ಯಾಟಿಕ್ ನಿಗಾ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಓರ್ವ ಸಹಾಯಕ ವೆಚ್ಚ ವೀಕ್ಷಕ, 1 ಲೆಕ್ಕಪರಿಶೋಧಕ ತಂಡ,  2 ವಿವಿಂಗ್ ತಂಡಗಳು, 2 ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‌ಗಳು ಹಾಗೂ ವಿಧಾನ ಸಭೆ ಕ್ಷೇತ್ರ ಮಟ್ಟದಲ್ಲಿ 23 ಮಾಸ್ಟರ್ ಟ್ರೈನರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 1308 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇದರಲ್ಲಿ 327 ಪಿಆರ್‌ಒ, 327 ಎಪಿಆರ್‌ಒ ಹಾಗೂ 654 ಪಿಒಗಳನ್ನು ನಿಯೋಜಿಸಲಾಗಿದೆ. 892 ಜನ ಹಿರಿಯ 80 ವರ್ಷ ಮೇಲ್ಪಟ್ಟ, 402 ಪಿಡಬ್ಲ್ಯೂಡಿ ಮತದಾರರು ಇದ್ದು, 35 ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನ. 2 ರಂದು ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ ಎಂದು ಅವರು ಹೇಳಿದರು.


ambedkar image

LEAVE A REPLY

Please enter your comment!
Please enter your name here