ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎರಿಕೆ

0
160

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಲಾ 35 ಪೈಸೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 112.79 ರೂ ಆಗಿದ್ದು, ಚೆನ್ನೈನಲ್ಲಿ 105.74, ಮುಂಬೈನಲ್ಲಿ 114.81 ರೂ ಇದೆ. ಹಾಗೆಯೇ ಡೀಸೆಲ್ ಬೆಲೆ ಬೆಂಗಳೂರಿನಲ್ಲಿ 103.72 ರೂ, ಚೆನ್ನೈನಲ್ಲಿ 101.92 ರೂ ಹಾಗೂ ಮುಂಬೈನಲ್ಲಿ 105.86ರೂ ಆಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೊಕ್ಕಸ ತುಂಬಿಸಿಕೊಳ್ಳುವತ್ತ ಗಮನ ಹರಿಸಿರುವುದು ನೋವಿನ ಸಂಗತಿ. ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರವು ಪ್ರತಿ ಲೀಟರ್‌ಗೆ 32ರೂ ಮತ್ತು ರಾಜ್ಯ ಸರ್ಕಾರವು 27 ರೂ ಸುಂಕ ವಸೂಲಿ ಮಾಡುತ್ತಿದೆ. ಹಾಗೆಯೇ ಡೀಸೆಲ್ ಮೇಲೆ ಕೇಂದ್ರವು 31 ರೂ ಹಾಗೂ ರಾಜ್ಯವೂ 18 ರೂ ತೆರಿಗೆ ವಿಧಿಸುತ್ತಿದೆ.

ಕೇಂದ್ರ ಮತ್ತು ರಾಜ್ಯಸರಕಾರ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂದು ಗೊತ್ತಿದ್ದರೂ ಜನರ ಸಮಸ್ಯೆಗಳಿಗೆ ಅಷ್ಟಾಗಿ ಸ್ಪಂದಿಸುತ್ತಿಲ್ಲ ಎನ್ನುವದು ನೋವಿನ ವಿಷಯವಾಗಿದೆ. ಅಡುಗೆ ಅನಿಲ ಹೆಚ್ಚಳದಿಂದ ಸಾಮಾನ್ಯ ಜನರ ಪರಿಸ್ಥಿತಿ ಹೇಳತಿರದ್ದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಲ್ಪ ಬಡಜನರ ಬಗ್ಗೆ ಕಾಳಜಿ ವಹಿಸಲಿ, ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಇಳಿಸಲಿ ಎನ್ನುವುದೇ ಜನರ ಆಗ್ರಹ.


ambedkar image

LEAVE A REPLY

Please enter your comment!
Please enter your name here