Vijayapura News | ಲಯನ್ಸ್ ವೇದಿಕೆಯಿಂದ ಹಿರಿಯ ನಾಗರಿಕರಿಗೆ ಸನ್ಮಾನ

ಲಯನ್ಸ್ ಕ್ಲಬ್ image
ವಿಜಯಪುರ: ಇತ್ತೀಚಿಗೆ ಲಯನ್ಸ್ ಕ್ಲಬ್ ಹಿರಿಯ ನಾಗರಿಕರ ವೇದಿಕೆಯಿಂದ ಮಾಸಿಕ ಸಭೆ ಮತ್ತು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಡಾ. ಆನಂದ ಅಂಬಲಿ ಮತ್ತು ಡಾ. ಅಕ್ಷಯ ಪಾಟೀಲ ಅವರು ಹಿರಿಯರಿಗೆ ಆರೋಗ್ಯ ಕುರಿತು ಸಲಹೆ ಸೂಚನೆ ನೀಡಿದರು. ಡಾ. ಪ್ರೀಯದರ್ಶಿನಿಯವರು ತಮ್ಮ ಸಿಬ್ಬಂದಿಯೊಂದಿಗೆ ಬಂದು ಹಿರಿಯರ ಆರೋಗ್ಯದ ತಪಾಸಣೆ ಮಾಡಿದರು. ಲಯನ್ಸ್ ಕ್ಲಬ್ ವತಿಯಿಂದ 80 ವರ್ಷದ ಹಿರಿಯರಿಗೆ  ಸನ್ಮಾನಿಸಲಾಯಿತು.
ಇದನ್ನೂ ಓದಿ: Bagalkote News | ಜೀವನದ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ್ದು ಮಹರ್ಷಿ ವಾಲ್ಮೀಕಿ : ಡಾ.ವೀರಣ್ಣ ಚರಂತಿಮಠ
ಎಸ್.ವಾಯ್. ವಾಲಿಕಾರ ಮತ್ತು ಎಸ್.ವಿ. ರಾಮಗುಂಡಿಯವರು ಕಾರ್ಯಕ್ರಮ ನಿರೂಪಿಸಿದರು. ಆರ್.ಎ. ಗುಡಿ ಮತ್ತು ಎಸ್.ಎಂ. ಮಾನಕರವರು ಸಭೆಯ ವ್ಯವಸ್ಥೆ ಮಾಡಿದ್ದರು. ವೇದಿಕೆ ಮೇಲೆ ಎನ್.ಬಿ. ದೇಸಾಯಿ, ಡಾ. ಜಿ.ಡಿ. ಕೊಟ್ನಾಳ, ಎಸ್.ವಾಯ್. ನಡುವಿನಕೇರಿ  ಹಾಗೂ ವೇದಿಕೆಯ ಸದಸ್ಯರು ಹಾಜರಿದ್ದರು.
ಇದನ್ನೂ ಓದಿ: Bagalkote News : ಕಬ್ಬು ಬೆಳೆಗಾರರು & ಮುಖಂಡರೊಂದಿಗೆ ಸಭೆ: ರೈತರ ಬಾಕಿ ಪಾವತಿಗಾಗಿ ಡಿಸಿ ಜಾನಕಿ ಗುಡುವು


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »